Advertisement

ಮತ್ತೆ ಚರ್ಚೆ ಹುಟ್ಟುಹಾಕಿದ ನ್ಯಾಯಾಧೀಶೆ ಗಣೇದಿವಾಲಾ ತೀರ್ಪು

09:50 PM Jan 29, 2021 | Team Udayavani |

ಮುಂಬೈ: ಪ್ಯಾಂಟ್‌ ಜಿಪ್‌ ತೆರೆದು ಅಸಭ್ಯ ವರ್ತನೆ ಲೈಂಗಿಕ ದೌರ್ಜನ್ಯವಲ್ಲ ಎಂದು ಪೋಕ್ಸೋ ಕಾಯ್ದೆಯಡಿ 5 ವರ್ಷ ಜೈಲು ಶಿಕ್ಷೆ ಎದುರಿಸುತ್ತಿದ್ದ ವ್ಯಕ್ತಿಯನ್ನು ಖುಲಾಸೆ ಗೊಳಿಸಿ ಚರ್ಚೆ ಹುಟ್ಟುಹಾಕಿದ್ದ ಬಾಂಬೆ ಹೈಕೋರ್ಟ್‌ ನ್ಯಾಯಾಧೀಶೆ ಪುಷ್ಪಾ ಗಣೇದಿವಾಲಾ, ಈಗ ಅತ್ಯಾಚಾರ ಪ್ರಕರಣವೊಂದರಲ್ಲಿ ನೀಡಿದ ತೀರ್ಪೂ ಸುದ್ದಿಯಾಗಿದೆ.

Advertisement

ಒಬ್ಬ ವ್ಯಕ್ತಿಗೆ ಏಕಕಾಲದಲ್ಲಿ ಸಂತ್ರಸ್ತೆಯ ಬಾಯಿಯನ್ನು ಮುಚ್ಚಿ, ಆಕೆಯ ವಸ್ತ್ರವನ್ನೂ, ತನ್ನ ವಸ್ತ್ರವನ್ನೂ ಬಿಚ್ಚಿ ಒತ್ತಾಯ ಪೂರ್ವಕವಾಗಿ ಲೈಂಗಿಕ ಕ್ರಿಯೆ ನಡೆಸಲು ಸಾಧ್ಯವಿಲ್ಲ. ಅದೂ ಕೂಡ ಇಬ್ಬರ ನಡುವೆ ಹೊಡೆದಾಟ-ಬಡಿದಾಟವೂ ಇಲ್ಲದೇ ಇಂಥದ್ದೊಂದು ಕೃತ್ಯ ನಡೆದಿದೆಯೆಂದರೆ ಅದನ್ನು ನಂಬಲಸಾಧ್ಯ ಎಂದು ಆರೋಪಿಯನ್ನು ಖುಲಾಸೆಗೊಳಿಸಿದ್ದಾರೆ.

ಇದನ್ನೂ ಓದಿ:ಟಿಎಂಸಿ ಶಾಸಕ ರಜೀಬ್‌ ಬ್ಯಾನರ್ಜಿ ರಾಜೀನಾಮೆ :  ಬಿಜೆಪಿಗೆ ಸೇರ್ಪಡೆ ಸಾಧ್ಯತೆ

2013ರಲ್ಲಿ ತಾಯಿಯೊಬ್ಬಳು ತನ್ನ 15 ವರ್ಷದ ಮಗಳ ಮೇಲೆ ನೆರೆಮನೆಯ ಯುವಕ ಅತ್ಯಾಚಾರವೆಸಗಿದ್ದಾನೆ ಎಂದು ಪೋಕ್ಸೋ ಕಾಯ್ದೆಯಡಿ ದೂರು ದಾಖಲಿಸಿದ್ದರು. 2019ರಲ್ಲಿ ನ್ಯಾಯಾಲಯ ಆರೋಪಿ ಸೂರಜ್‌ನನ್ನು ಅಪರಾಧಿ ಎಂದು ಪರಿಗಣಿಸಿ 10 ವರ್ಷಗಳ ಕಠಿಣ ಕಾರಾಗ್ರಹ ಶಿಕ್ಷೆ ವಿಧಿಸಿತ್ತು. ಈ ವಿಚಾರವನ್ನು ಉಚ್ಚನ್ಯಾಯಾಲಯಕ್ಕೆ ಅಪೀಲು ಮಾಡಿದ್ದ ಸೂರಜ್‌ ಪರ ವಕೀಲರು, “”ಸಂತ್ರಸ್ತೆಗೆ ಆಗ 18 ವರ್ಷ ವಯಸ್ಸಾಗಿತ್ತು. ಅಲ್ಲದೇ ಸೂರಜ್‌ ಮತ್ತು ಆಕೆಯ ನಡುವೆ ಸಹಮತಿಯ ಸಂಬಂಧವಿತ್ತು” ಎಂದು ವಾದಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next