ಕೊಚ್ಚಿ: ಇತ್ತೀಚೆಗೆ ವಿಮಾನಗಳಿಗೆ ಹುಸಿ ಬಾಂಬ್ ಬೆದರಿಕೆಗಳು ಸತತವಾಗಿ ಬರುತ್ತಿವೆ. ಅದಕ್ಕೊಂದು ಹೊಸ ಸೇರ್ಪಡೆಯಾಗಿದೆ.
ಸೋಮವಾರ ಕೇರಳದ ಕೊಚ್ಚಿಯಿಂದ ಬೆಂಗಳೂರಿಗೆ ಹೊರಟಿದ್ದ ಇಂಡಿಗೋ ವಿಮಾನಕ್ಕೆ ಹುಸಿ ಬಾಂಬ್ ಬೆದರಿಕೆ ಬಂದಿದೆ. ಪರಿ ಣಾಮ ವಿಮಾನದಲ್ಲಿದ್ದ ಎಲ್ಲ 139 ಪ್ರಯಾಣಿಕರನ್ನು ಕೆಳಕ್ಕೆ ಇಳಿಸಲಾಯಿತು.
ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂಡಿಗೋ ಏರ್‌ಲೈನ್ಸ್‌ಗೆ ಸೇರಿದ 6ಇ6482 ವಿಮಾನವು ಸೋಮವಾರ ಬೆಳಗ್ಗೆ 10.30ಕ್ಕೆ ಹೊರಡಲು ಸಿದ್ಧವಾಗಿತ್ತು. ಈ ವೇಳೆ ವಿಮಾನ ನಿಲ್ದಾಣದ ಕಂಟ್ರೋಲ್ ರೂಮ್‌ಗೆ ಬಾಂಬ್ ಬೆದರಿಕೆ ಕರೆ ಬಂದಿತು. ಕೂಡಲೇ ನಿಯಮ ದಂತೆ ಎಲ್ಲ ಪ್ರಯಾಣಿಕರನ್ನು ವಿಮಾನದಿಂದ ಕೆಳಕ್ಕೆ ಇಳಿಸಲಾಯಿತು.
ಬಾಂಬ್ ನಿಷ್ಕ್ರಿಯ ದಳದ ಸಿಬಂದಿ ವಿಮಾನವನ್ನು ಸಂಪೂರ್ಣವಾಗಿ ಪರಿಶೀಲಿಸಿದರು. ಜತೆಗೆ ಲಗೇಜ್‌ಗಳನ್ನು ಮತ್ತೂಮ್ಮೆ ತಪಾಸಣೆಗೆ ಒಳಪಡಿಸಲಾಯಿತು. ಅಂತಿಮವಾಗಿ ಇದೊಂದು ಹುಸಿ ಕರೆ ಎಂದು ತಿಳಿಯಿತು.
ಮಗುವನ್ನು ರಕ್ಷಿಸಿದ ವೈದ್ಯರು- ಹೊಸದಿಲ್ಲಿ: ವಿಮಾನ ಹಾರಾಟ ಸಮಯದಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಎರಡು ವರ್ಷದ ಹೆಣ್ಣುಮಗುವನ್ನು ವಿಮಾನದಲ್ಲಿದ್ದ ಅಖೀಲ ಭಾರತೀಯ ವೈದ್ಯಕೀಯ ವಿಜ್ಞಾನ(ಏಮ್ಸ್) ಆಸ್ಪತ್ರೆಯ ಐವರು ವೈದ್ಯರು ರಕ್ಷಿಸಿದ್ದಾರೆ. ವಿಸ್ತಾರ ಏರ್‌ಲೈನ್ಸ್‌ಗೆ ಸೇರಿದ ವಿಮಾನವು ರವಿವಾರ ಬೆಂಗಳೂರಿನಿಂದ ದಿಲ್ಲಿಗೆ ಸಂಚರಿಸುತಿತ್ತು. ಈ ವೇಳೆ ಎರಡು ವರ್ಷದ ಮಗು ಅಸ್ವ ಸ್ಥಗೊಂಡಿದೆ. ಇದು ವಿಮಾನ ಸಿಬಂದಿಯ ಗಮನಕ್ಕೆ ಬಂದು, ಕೂಡಲೇ ಅವ ರು ವಿಮಾನದಲ್ಲಿದ್ದ ವೈದ್ಯರನ್ನು ಸಂಪರ್ಕಿಸಿದ್ದರು. ವಿಮಾನದಲ್ಲಿದ್ದ ಏಮ್ಸ್‌ನ ಐವ ರು ವೈದ್ಯರು, ಕೂಡಲೇ ತಮಗೆ ಲಭ್ಯವಿದ್ದ ಸಂಪನ್ಮೂಲದಲ್ಲೇ ಚಿಕಿತ್ಸೆ ನೀಡಿದರು. ಬಳಿಕ ವಿಮಾನವು ನಾಗ್‌ಪುರ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾ ಡಿತು. ಕೂಡಲೇ ಬಾಲಕಿಯನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಈಗ ಬಾಲಕಿ ಆರೋಗ್ಯ ವಾಗಿದ್ದಾಳೆ.