ಬೆಂಗಳೂರು: ತಮ್ಮ ಒಡೆತನದ ಶಾಲೆಗೆ ಬಾಂಬ್ ಬೆದರಿಕೆ ಬಂದಿರುವುದನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ದೃಢಪಡಿಸಿದ್ದಾರೆ
ಸುದ್ದಿಗಾರರ ಜತೆ ಮಾತನಾಡಿದ ಅವರು, ಇಂದು ಬೆಳಗ್ಗೆ ನಮ್ಮ ಶಾಲೆಯಲ್ಲಿ ಸ್ಟಾಫ್, ಪ್ರಿನ್ಸಿಪಾಲ್ ಎಲ್ಲಾ ಶಾಲೆಗೆ ಹೋಗಿದ್ದಾರೆ. ಆಗ ಬಾಂಬ್ ಇಟ್ಟಿರುವುದಾಗಿ ಮೇಲ್ ಬಂದಿದೆ. ಬೆದರಿಕೆ ಬಗ್ಗೆ ತಕ್ಷಣ ನಮಗೆ ತಿಳಿಸಿದರು. ಸ್ಕೂಲ್ ಕ್ಯಾಂಪಸ್ ನಲ್ಲಿ ಇರುವವರನ್ನು ಸ್ಥಳಾಂತರ ಮಾಡಿದೆವು. ಕೂಡಲೇ ಪೊಲೀಸ್ ಆಯುಕ್ತರ ಜೊತೆ ಮಾತನಾಡಿದೆವು. 70% ತಪಾಸಣೆ ಮಾಡಿದ್ದಾರೆ. ಇನ್ನೂ ತಪಾಸಣೆ ನಡೆಯುತ್ತಿದೆ ಎಂದರು.
ಮುಂಜಾಗ್ರತಾ ಕ್ರಮವಾಗಿ ಎಲ್ಲಾ ಕ್ರಮ ಕೈಗೊಳ್ಳಲಾಗಿದೆ. ಪೋಷಕರು ಗಾಬರಿ ಆಗುವುದು ಬೇಡ. ನಮ್ಮಲ್ಲಿ ಹೈ ಸೆಕ್ಯೂರಿಟಿಯಿದೆ. ಪ್ರತಿ ಚಲನವಲನವೂ ಸಿಸಿ ಕ್ಯಾಮೆರಾದಲ್ಲಿ ದಾಖಲಾಗುತ್ತದೆ. ನಿನ್ನೆ ಒಂದು ಪರೀಕ್ಷೆ ಇತ್ತು. ಹಾಗಾಗಿ ಬೇರೆಯವರು ಬರಲಿಕ್ಕೆ ಅವಕಾಶ ನೀಡಲಾಗಿತ್ತು. ಸಮಸ್ಯೆ ಆಗುವುದು ಬೇಡವೆಂದು ಪೊಲೀಸರಿಗೆ ತಿಳಿಸಿದೆವು. ಅವರು ನಾವೇ ಎಲ್ಲಾ ನೋಡಿಕೊಳ್ಳೋದಾಗಿ ಹೇಳಿದ್ದಾರೆ. ಹಾಗಾಗಿ ನಾನು ತಡವಾಗಿ ಮತದಾನಕ್ಕೆ ಆಗಮಿಸಿದ್ದೇನೆ ಎಂದು ವಿವರಿಸಿದರು.
ಇದನ್ನೂ ಓದಿ:ರಾಹುಲ್ ಗಾಂಧಿಗೆ ಆದ ಪರಿಸ್ಥಿತಿಯೇ ಸಿದ್ದರಾಮಯ್ಯಗೆ ಆಗುತ್ತದೆ: ಈಶ್ವರಪ್ಪ
ಬೆಲೆ ಏರಿಕೆ ಮೋದಿ ಸರ್ಕಾರ ಜನರಿಗೆ ಕೊಟ್ಟ ಗಿಫ್ಟ್. ಬೆಲೆ ಏರಿಕೆಯಿಂದ ಜನರ ಜೇಬು ಪಿಕ್ ಪಾಕೇಟ್ ಆಗುತ್ತಿದೆ. ಇಂದು ಸಂಜೆ ಈ ಸಂಬಂಧ ತುರ್ತು ಸಭೆ ಕರೆದಿದ್ದೇವೆ. ಸಭೆಯಲ್ಲಿ ಹೋರಾಟದ ಬಗ್ಗೆ ರೂಪು ರೇಷೆ ರೂಪಿಸುತ್ತೇವೆ ಎಂದರು.
ಉಪ ರಾಷ್ಟ್ರಪತಿ ಚುನಾವಣೆಗೆ ಆಳ್ವಾ ಆಯ್ಕೆ ಆಗಿದ್ದಕ್ಕೆ ಅಭಿನಂದನೆ ಸಲ್ಲಿಸುತ್ತಿದ್ದೇವೆ. ಆತ್ಮ ಸಾಕ್ಷಿ ಮತ ನೀಡಿ ಅಂತ ಕೇಳುತ್ತಿದ್ದೇವೆ. ಯಶವಂತ ಸಿನ್ಹಾರಿಗೂ ಆತ್ಮ ಸಾಕ್ಷಿ ಮತ ಹಾಕಿ ಎಂದರು.