Advertisement

Punjab ಗುರುದ್ವಾರ ಶ್ರೀ ದರ್ಬಾರ್ ಸಾಹಿಬ್‌ನ ಪಾರ್ಕಿಂಗ್ ಸ್ಥಳದಲ್ಲಿ ಸಜೀವ ಬಾಂಬ್ ಪತ್ತೆ

05:44 PM Apr 21, 2023 | Team Udayavani |

ಪಂಜಾಬ್: ಪಂಜಾಬ್‌ನ ತರ್ನ್ ತರನ್‌ನಲ್ಲಿರುವ ಗುರುದ್ವಾರ ಶ್ರೀ ದರ್ಬಾರ್ ಸಾಹೀಬ್ ನ ಪಾರ್ಕಿಂಗ್ ಸ್ಥಳದಲ್ಲಿ ಸಜೀವ ಬಾಂಬೊಂದು ಶುಕ್ರವಾರ ಪತ್ತೆಯಾಗಿದೆ.

Advertisement

ಗುರುದ್ವಾರ ಬಳಿಯ ಪಾರ್ಕಿಂಗ್ ಸ್ಥಳದಲ್ಲಿ ಸ್ವಚ್ಛತಾ ಕಾರ್ಯ ನಡೆಸುತ್ತಿದ್ದ ವೇಳೆ ಬಾಂಬ್ ಪತ್ತೆಯಾಗಿದೆ ಕೂಡಲೇ ಸ್ವಚ್ಛತಾ ಸಿಬ್ಬಂದಿ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.

ಮಾಹಿತಿ ಸಿಗುತಿದ್ದಂತೆ ಪೊಲೀಸರ ತಂಡ ಹಾಗೂ ಬಾಂಬ್ ನಿಷ್ಕ್ರಿಯ ದಳ ಸ್ಥಳಕ್ಕೆ ದೌಡಾಯಿಸಿ ತಪಾಸಣೆ ನಡೆಸುತ್ತಿದ್ದಾರೆ. ಅಲ್ಲದೆ ಇದರ ಹಿನ್ನೆಲೆ ಕುರಿತು ಪೊಲೀಸರು ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.

ಇದನ್ನೂ ಓದಿ : Poonch:ಸೇನಾ ವಾಹನದ ಮೇಲೆ ದಾಳಿ: ಉಗ್ರರ ಬೇಟೆಗಾಗಿ ಭಾರಿ ಕಾರ್ಯಾಚರಣೆ

 

Advertisement
Advertisement

Udayavani is now on Telegram. Click here to join our channel and stay updated with the latest news.

Next