Advertisement
ವಾಷಿಂಗ್ಟನ್ ಪ್ರಾಂತ್ಯ ಬಹುತೇಕ ಮುಳುಗಡೆಯಾಗಿದ್ದು, ಬರೋಬ್ಬರಿ 6 ಲಕ್ಷ ಮನೆಗಳು ವಿದ್ಯುತ್ ಸಂಪರ್ಕ ಕಳೆದುಕೊಂಡಿವೆ. ಮನೆಯ ಮೇಲೆ ಮರ ಬಿದ್ದ ಪರಿಣಾಮ ಓರ್ವ ಮಹಿಳೆ ಮೃತಪಟ್ಟಿದ್ದಾರೆ. ಇಡೀ ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಒರೆಂಗಾವ್‌ನಲ್ಲಿ 15,000 ಮಂದಿ ಹಾಗೂ ಕ್ಯಾಲಿಫೋರ್ನಿಯಾದಲ್ಲಿ 19,000 ಮಂದಿ ಸಂಕಷ್ಟಕ್ಕೀಡಾಗಿದ್ದಾರೆ.
ಅಮೆರಿಕದ ಪಶ್ಚಿಮ ತೀರದುದ್ದಕ್ಕೂ ಬರೋಬ್ಬರಿ 163 ಕಿ.ಮೀ. ವೇಗದಲ್ಲಿ ಗಾಳಿ ಬೀಸುತ್ತಿದ್ದು, ಯಾವುದೇ ಕಾರಣಕ್ಕೂ ಮನೆಯಿಂದ ಹೊರಬರದಂತೆ ಎಚ್ಚರಿಕೆ ನೀಡಲಾಗಿದೆ. ಕೇವಲ ಗಾಳಿ, ಮಳೆಯಷ್ಟೇ ಅಲ್ಲದೇ ಕ್ಯಾಲಿಫೋರ್ನಿಯಾದಲ್ಲಿ 8 ಇಂಚು ಗಾತ್ರದ ಹಿಮ ಸುರಿದಿದ್ದು, ಸಾಮಾನ್ಯರ ಜೀವನ ಸಂಕಷ್ಟಕ್ಕೀಡಾಗಿದೆ. ಪಶ್ಚಿಮ ಕರಾವಳಿಯಲ್ಲಿರುವ ಎಲ್ಲಾ ನಗರಗಳಿಗೂ ಮುನ್ನೆಚ್ಚರಿಕೆ ನೀಡಲಾಗಿದ್ದು, ಪ್ರವಾಹ ಪರಿಸ್ಥಿತಿ ತಗ್ಗಿದ ಕೂಡಲೇ ಸಾಧ್ಯವಾದಷ್ಟು ಬೇಗ ಎಲ್ಲಾ ಸೌಲಭ್ಯಗಳನ್ನು ಮರುಸ್ಥಾಪಿಸುವುದಾಗಿ ಅಲ್ಲಿನ ಆಡಳಿತ ಹೇಳಿದೆ.