Advertisement

ಡಾರ್ಜಿಲಿಂಗ್‌ನಲ್ಲಿ ಬಾಂಬ್‌ ಸ್ಫೋಟ; ಜೀವಹಾನಿ, ಗಾಯ ಇಲ್ಲ

12:28 PM Aug 19, 2017 | Team Udayavani |

ಡಾರ್ಜಿಲಿಂಗ್‌ : ಪಶ್ಚಿಮ ಬಂಗಾಲದ ಹಿಲ್‌ ಸ್ಟೇಶನ್‌ ಎಂದೇ ಖ್ಯಾತಿವೆತ್ತಿರುವ ಡಾರ್ಜಿಲಿಂಗ್‌ನಲ್ಲಿ ಇಂದು ಶನಿವಾರ ನಸುಕಿನ ವೇಳೆ ಬಾಂಬ್‌ ಸ್ಫೋಟ ಸಂಭವಿಸಿ ಕೆಲವು ಅಂಗಡಿಗಳು ಹಾನಿಗೊಂಡವೆಂದು ಪೊಲೀಸರು ತಿಳಿಸಿದ್ದಾರೆ. 

Advertisement

ಬಾಂಬ್‌ ಸ್ಫೋಟದಿಂದ ಜನರು ತೀವ್ರ ಭಯಗ್ರಸ್ತರಾದರೂ ಯಾರಿಗೂ ಗಾಯಗಳಾಗಿಲ್ಲ ಎಂದು ವರದಿಯಾಗಿದೆ.

ಡಾರ್ಜಿಲಿಂಗ್‌ ಮೋಟಾರ್‌ ಸ್ಟಾಂಡ್‌ ಪ್ರದೇಶದಲ್ಲಿ ಮಧ್ಯ ರಾತ್ರಿ ಕಳೆದು ನಸುಕಿನ ವೇಳೆ ಬಾಂಬ್‌ ಸ್ಫೋಟ ಸಂಭವಿಸಿತು. ಆಗ ಆ ಪ್ರದೇಶವು ಸಂಪೂರ್ಣವಾಗಿ ಖಾಲಿ ಇತ್ತು; ಹಾಗಾಗಿ ಯಾರಿಗೂ ಗಾಯಗಳಾಗಿಲ್ಲ; ನಾವು ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದೇವೆ’ ಎಂದು ಪೊಲೀಸ್‌ ಸುಪರಿಂಟೆಂಡೆಂಟ್‌ ಅಖೀಲೇಶ್‌ ಕುಮಾರ್‌ ಚತುರ್ವೇದಿ ತಿಳಿಸಿದ್ದಾರೆ. 

ಪ್ರತ್ಯೇಕ ಗೋರ್ಖಾ ಲ್ಯಾಂಡ್‌ ರಾಜ್ಯ ರಚನೆಯನ್ನು ಆಗ್ರಹಿಸಿ ಗೋರ್ಖಾ ಜನಮುಕ್ತಿ ಮೋರ್ಚಾ (ಜಿಜೆಎಂ) ಕರೆ ನೀಡಿರುವ  ಅನಿರ್ದಿಷ್ಟಾವಧಿ ಬಂದ್‌ನ 69ನೇ ದಿನವಾದ ಇಂದು ಈ ಬಾಂಬ್‌ ಸ್ಫೋಟ ಸಂಭವಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next