ಸಸಾರಾಮ್: ಮತ್ತೆ ಆರಂಭವಾದ ಗಲಭೆಯಲ್ಲಿ ಬಾಂಬ್ ಸ್ಪೋಟ ನಡೆದು ಐವರು ಗಾಯಗೊಂಡ ಘಟನೆ ಬಿಹಾರದ ಸಸಾರಾಮ್ ನಲ್ಲಿ ಶನಿವಾರ ಸಂಜೆ ನಡೆದಿದೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಫಾರೆನ್ಸಿಕ್ ತಂಡವು ಸ್ಥಳಕ್ಕೆ ದೌಡಾಯಿಸಿದೆ ಎಂದು ಪೊಲೀಸರು ಹೇಳಿದ್ದಾರೆ.
“ಸಸಾರಾಮ್‌ನಲ್ಲಿ ಬಾಂಬ್ ಸ್ಫೋಟ ಸಂಭವಿಸಿದೆ. ಗಾಯಗೊಂಡವರನ್ನು ಬಿಎಚ್‌ಯು ಆಸ್ಪತ್ರೆಗೆ ಸೇರಿಸಲಾಗಿದೆ. ನಾವು ಇದೀಗ ಎಲ್ಲಾ ಕೋನಗಳಲ್ಲಿ ತನಿಖೆ ನಡೆಸುತ್ತಿದ್ದೇವೆ. ಸ್ಫೋಟಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ” ಎಂದು ಸಸಾರಾಮ್ ಡಿಎಂ ಧರ್ಮೇಂದ್ರ ಕುಮಾರ್ ಹೇಳಿದರು.
“ಸ್ಫೋಟ ನಡೆದ ಪ್ರದೇಶದಿಂದ ಒಂದು ಸ್ಕೂಟಿಯನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಾಥಮಿಕವಾಗಿ ಇದು ಕೋಮು ಘಟನೆಯಾಗಿ ಕಂಡುಬರುವುದಿಲ್ಲ” ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ಸೀಕ್ವೇರಿಯಂನಲ್ಲಿ 50 ವರ್ಷ ಬಂಧಿಯಾಗಿದ್ದ ಲೋಲಿಟ ಇನ್ನು ಬಂಧ ಮುಕ್ತ…!
ಬಿಹಾರದಲ್ಲಿ ಶನಿವಾರ ಮತ್ತೆ ಕೋಮು ಉದ್ವಿಗ್ನತೆ ಹೆಚ್ಚಾಯಿತು, ಎರಡು ಗುಂಪುಗಳು ರಾಜ್ಯದ ಎರಡು ವಿಭಿನ್ನ ಪ್ರದೇಶಗಳಲ್ಲಿ ಘರ್ಷಣೆಗೊಂಡವು. ಸ್ಥಳೀಯರ ಪ್ರಕಾರ, ಮೂರು ಜನರು ಗುಂಡಿನಿಂದ ಗಾಯಗೊಂಡಿದ್ದಾರೆ.