Advertisement
ಇದೀಗ ನೀನಾ ಗುಪ್ತಾ ಅವರು ತನ್ನ ಅಭಿಮಾನಿಗಳಿಗೆ ಇನ್ನೊಂದು ಶಾಕ್ ನೀಡಿದ್ದಾರೆ. ಅದು ಆಕೆಯೇ ಹೇಳಿಕೊಂಡಿರುವಂತೆ ‘ಫ್ರಾಕ್ ಕಾ ಶಾಕ್’!. ಹೌದು ಈ ನಟಿ ಬಿಳಿ ಬಣ್ಣದ ಫ್ರಾಕ್ ಮೇಲೆ ಹಳದಿ ಪ್ರಿಂಟ್ ಇರುವ ತುಂಡುಡುಗೆ ಧರಿಸಿರುವ ಫೊಟೋ ಒಂದನ್ನು ಪೋಸ್ಟ್ ಮಾಡಿದ್ದಾರೆ.ಕಳೆದ ತಿಂಗಳು ದುಬಾರಿ ಬೆಲೆಯ ಹಸಿರು ಬಣ್ಣದ ಸೀರೆ ಮತ್ತು ತುಂಡು ತೋಳಿನ ಕುಪ್ಪಸವನ್ನು ತೊಟ್ಟ ಫೊಟೋವನ್ನು ವಸ್ತ್ರ ವಿನ್ಯಾಸಕಿಯೂ ಆಗಿರುವ ನೀನಾ ಅವರ ಮಗಳು ಮಸಾಬಾ ಗುಪ್ತಾ ತನ್ನ ಇನ್ ಸ್ಟಾಗ್ರಾಂ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದರು. ಕುಪ್ಪಸ ಸಹಿತ ಈ ಸೀರೆಯ ಬೆಲೆ 43 ಸಾವಿರ ರೂಪಾಯಿಗಳು ಎಂದು ಹೇಳಲಾಗಿತ್ತು.
ತನ್ನ ಶುಭ್ ಮಂಗಲ್ ಜ್ಯಾದಾ ಸಾವಧಾನ್ ಚಿತ್ರದ ಸಹ ನಟ ಗಜರಾಜ್ ರಾವ್ ಅವರು ಈ ಚಿತ್ರವನ್ನು ಕ್ಲಿಕ್ ಮಾಡಿರುವುದಾಗಿ ನೀನಾ ಬರೆದುಕೊಂಡಿದ್ದಾರೆ.