Advertisement

ಬೋಳೂರು: ಹಿಂದೂರಾಷ್ಟ್ರ ಸಂಘಟಕ ಕಾರ್ಯಾಗಾರ

07:50 AM Aug 11, 2017 | |

ಬೋಳೂರು:  ಹಿಂದೂರಾಷ್ಟ್ರ ಸಂಘಟಕ ಕಾರ್ಯಾಗಾರ ಬೋಳೂರಿನ ಪ್ರಭು ನಿವಾಸ ಕಾಂಪೌಂಡ್‌ನ‌ಲ್ಲಿರುವ ಸನಾತನ ಆಶ್ರಮದಲ್ಲಿ  ಜರಗಿತು.

Advertisement

ಕರ್ನಾಟಕ ರಾಜ್ಯ ಸಮನ್ವಯಕ ಗುರುಪ್ರಸಾದ್‌ ಮಾತನಾಡಿ, ಹಿಂದೂಗಳು ಇಂದು ಬೇರೆ ಬೇರೆ ಜಾತಿ, ಸಂಪ್ರದಾಯ, ಸಂಘಟನೆಯಲ್ಲಿ ಹಂಚಿಹೋಗಿದ್ದಾರೆ. ಎಲ್ಲರನ್ನೂ ಒಟ್ಟು ಸೇರಿಸಿ ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯಕ್ಕಾಗಿ ಪ್ರೇರೇಪಿಸುವುದು ಹಾಗೂ ಹಿಂದೂ ಸಂಘಟನೆಯ ಕಾರ್ಯವನ್ನು ಭಗವಂತನ ಅನುಷ್ಠಾನದೊಂದಿಗೆ ಹೇಗೆ ಮಾಡುವುದು ಎಂಬ ಉದ್ದೇಶದಿಂದ ಹಿಂದೂ ಸಂಘಟಕ ಕಾರ್ಯಶಾಲೆಯನ್ನು ಆಯೋಜಿಸಲಾಗಿದೆ ಎಂದರು.

ಸನಾತನ ಸಂಸ್ಥೆಯ ರಾಜ್ಯ ಪ್ರಸಾರ ಸೇವಕರಾದ  ಕಾಶಿನಾಥ ಪ್ರಭು ಮಾತನಾಡಿ, ಸೃಷ್ಟಿಯಲ್ಲಿ  84 ಲಕ್ಷ ಜೀವರಾಶಿಗಳಿವೆ. ಆದರೆ ಮನುಷ್ಯ ಮಾತ್ರ ಮೋಕ್ಷಪ್ರಾಪ್ತಿಯನ್ನು ಮಾಡಿಕೊಳ್ಳಲು ಸಾಧ್ಯ ಇದೆ. ಮನುಷ್ಯ ಜನ್ಮದ ಸಾರ್ಥಕತೆ ಮೋಕ್ಷಪ್ರಾಪ್ತಿಯಲ್ಲಿ ಇದೆ. ನಾವು ಸಮಾಜ ಕಲ್ಯಾಣದ ಕಾರ್ಯ ಮಾಡುವಾಗ ಭಗವಂತನ ಉಪಾಸನೆಯನ್ನು  ಮಾಡಿ ದರೆ ಅದರ ಪರಿಣಾಮ ಒಳ್ಳೆಯ ರೀತಿಯಲ್ಲಿ ಸಮಾಜದ ಮೇಲಾಗುತ್ತದೆ.  ಸ್ವಾರ್ಥವನ್ನು ಇಟ್ಟುಕೊಂಡು ನಮ್ಮಲ್ಲಿ ಷಡ್ವೆ„ರಿಗಳನ್ನು ಇಟ್ಟುಕೊಂಡು  ಎಷ್ಟೇ ಸಮಾಜ ಕಲ್ಯಾಣ ಕಾರ್ಯ ಮಾಡಿದರೂ ಅದು ವ್ಯರ್ಥ ಕಾರ್ಯವಾಗುತ್ತದೆ. ಆದ್ದರಿಂದ  ನಮ್ಮ ಲ್ಲಿರುವ ಅಹಂ ಹಾಗೂ ಷಡ್ವೆ„ರಿಗಳನ್ನು ನಿರ್ಮೂಲ ಮಾಡಬೇಕು ಎಂದರು. 

ಹಿಂದೂ ಜನಜಾಗೃತಿ ಸಮಿತಿಯ ಸಮನ್ವಯಕ ಮೋಹನ ಗೌಡ , ಸನಾತನ ಸಂಸ್ಥೆಯ ರಾಜ್ಯ ಪ್ರಸಾರ ಸೇವಕ ರಮಾ ನಂದ ಗೌಡ, ಹಿಂದೂ ಜನಜಾಗೃತಿ ಸಮಿತಿ ಸಮನ್ವಯಕ ಚಂದ್ರ ಮೊಗೇರ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next