Advertisement

ಸುಂಕದಕಟ್ಟೆಯಲ್ಲಿ ‘ಬೊಲ್ಪುದ ಪರ್ಬ -2017’

02:10 PM Oct 19, 2017 | Team Udayavani |

ಸುಂಕದಕಟ್ಟೆ: ಇಲ್ಲಿನ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರೀ ದೇವಸ್ಥಾನ ಮತ್ತು ಯಕ್ಷಮಿತ್ರರು ಸುಂಕದಕಟ್ಟೆ ಇವರ ಸಹಕಾರದೊಂದಿಗೆ ದೀಪಾವಳಿ ಪ್ರಯುಕ್ತ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರೀ ಸಭಾಭವನದಲ್ಲಿ ಮುಕ್ತ ಗೂಡುದೀಪ, ರಂಗೋಲಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ‘ಬೊಲ್ಪುದ ಪರ್ಬ -2017’ ನಡೆಯಿತು.

Advertisement

ದೇವಳದ ಪ್ರಧಾನ ಅರ್ಚಕ ಗೋವಿಂದ ಭಟ್‌ ಅವರು ಚಾಲನೆ ನೀಡಿದರು. ದಯಾನಂದ ಆಡ್ಕಬಾರೆ, ಶ್ರೀಧರ್‌ ಕುಂದರ್‌, ಉಮೇಶ್‌ ಕುಲಾಲ್‌, ರಮೇಶ್‌ ಬಾಬು, ಶೋಭಾರಾಣಿ, ರಮೇಶ್‌ ಇರುವೈಲು ಉಪಸ್ಥಿತರಿದ್ದರು. ಕಳೆದ ವಾರ್ಷಿಕ ಪರೀಕ್ಷೆಗಳಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆದ ಸಂಸ್ಥೆಯ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. 

ಸಮ್ಮಾನ
ಬೊಲ್ಪುದ ಪರ್ಬ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ವೈಭವವನ್ನು ನೀಡುತ್ತಾ ಬಂದ ಶ್ರೇಯಾ ಶೆಟ್ಟಿ, ಶ್ರಾವ್ಯಾ ಕೃಷ್ಣ ಬಜಪೆ, ಶ್ರೇಯಾ ಸನಿಲ್‌, ಶ್ರಾವ್ಯಾ ಸನಿಲ್‌ ಅಡ್ಕಬಾರೆ, ಸುರೇಖಾ, ಕಾವ್ಯಶ್ರೀ ಕೊಳ್ತಮಜಲು, ಅನ್ವಿತಾ ವಾಮಂಜೂರು, ದಿನೇಶ್‌ ಇರುವೈಲು, ವಿನಯ್‌ ಕುಮಾರ್‌ ಅದ್ಯಪಾಡಿ, ಮಲ್ಲಿಕಾ ಕೈಕಂಬ ಅವರನ್ನು ಸಮ್ಮಾನಿಸಲಾಯಿತು.

ಯಕ್ಷಮಿತ್ರರರು ಸುಂಕದಕಟ್ಟೆಯ ರವೀಂದ್ರ ಕುಲಾಲ್‌, ಯೋಗೀಶ್‌ ಕೊಟ್ಟಾರಿ, ಸಚಿನ್‌ ಕೋಟ್ಯಾನ್‌, ಕಾರ್ತಿಕ್‌ ಪೂಜಾರಿ, ಹರೀಶ್‌ ಅಮೀನ್‌ ಅವರನ್ನು ಅಭಿನಂದಿಸಲಾಯಿತು.

ಆಳ್ವಾಸ್‌ ಪದವಿ ಕಾಲೇಜಿನ ಕನ್ನಡ ಬಾಷಾ ಉಪನ್ಯಾಸಕ ಡಾ| ಯೋಗೀಶ್‌ ಕೈರೋಡಿ ಸಂಪನ್ಮೂಲ ವ್ಯಕ್ತಿಯಾಗಿ, ಹಬ್ಬಗಳ ಆಚರಣೆ ಸಾಂಪ್ರದಾಯಿಕವಾಗಿ ಮರೆಯಾಗುತ್ತಿರುವ ಈ ದಿನಗಳಲ್ಲಿ ಅದನ್ನು ಯುವ ಸಮುದಾಯಕ್ಕೆ ಪರಿಚಯಿಸುತ್ತಿರುವ ‘ಬೊಲ್ಪುದ ಪರ್ಬ -2017’ ಯಶಸ್ವಿಯಾಗುತ್ತಿರುವುದು ಶ್ಲಾಘನೀಯ ಎಂದರು.

Advertisement

ಯಕ್ಷಮಿತ್ರ ಇದರ ರೂವಾರಿ ಜಗದೀಶ್‌ ಅಮೀನ್‌ ಅವರು ಕುದ್ರೋಳಿಯಲ್ಲಿ ನಡೆಯುವ ಗೂಡುದೀಪ ಸ್ಪರ್ಧೆಯಿಂದ ಪ್ರಭಾವಿತರಾಗಿ ಇಲ್ಲಿಯೂ ಮೂರು ವರ್ಷದಿಂದ ಈ ಸ್ಪರ್ಧೆಯನ್ನು ನಡೆಸುತ್ತಿದ್ದಾರೆ. ಇದರಿಂದ ಇಲ್ಲಿನ ಕಲಾವಿದರಿಗೆ ಪ್ರೋತ್ಸಾಹ ನೀಡುವ ಜತೆಗೆ ಸಂಸ್ಕೃತಿ ಹಾಗೂ ದೀಪಾವಳಿ ಹಬ್ಬಕ್ಕೆ ಹೆಚ್ಚು ಮೆರುಗು ನೀಡಲಾಗುತ್ತದೆ ಎಂದು ಕದ್ರಿ ನವನೀತ ಶೆಟ್ಟಿ ಹೇಳಿದರು.

ಸುಕೇಶ್‌ ಮಾಣಾಯ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ನಮ್ಮ ಕುಡ್ಲ ನಿರ್ದೇಶಕ ಲೀಲಾಕ್ಷ ಕರ್ಕೇರ, ವಕೀಲ ವಿನೋಧರ ಪೂಜಾರಿ, ಮುರಳೀಧರ್‌ ಉಪಸ್ಥಿತರಿದ್ದರು. ಗೂಡುದೀಪ ಹಾಗೂ ರಂಗೋಲಿ ಕಲಾವಿದರನ್ನು ಪುರಸ್ಕರಿಸಲಾಯಿತು. ಈ ಸಂದರ್ಭದಲ್ಲಿ ಹಾಡುಗಾರಿಕೆ, ಭರತನ್ಯಾಟ, ಜಾನಪದ ನೃತ್ಯ, ಯಕ್ಷನಾಟ್ಯ ವೈಭವ, ಮೋಹನ್‌ ಕಳವಾರು ಅವರ ಸ್ಯಾಕ್ಸೋಪೋನ್‌ ವಾದನ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ಜಗದೀಶ್‌ ಅಮೀನ್‌ ಸುಂಕದಕಟ್ಟೆ ಕಾರ್ಯಕ್ರಮ ಆಯೋಜಿಸಿದ್ದರು. ವಿಶ್ವನಾಥ ಪೂಜಾರಿ ರೆಂಜಾಳ, ಪ್ರತಿಮಾ ಆಚಾರ್ಯ ಬಡಗಬೆಳ್ಳೂರು, ಮಧುರಾಜ್‌ ನಿರೂಪಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next