Advertisement
ಕಳೆದ ಕೆಲ ಸಮಯದ ಹಿಂದೆ ಸುಶ್ಮಿತಾ ಸೇನ್ ಅವರಿಗೆ ಹೃದಯಾಘಾತವಾಗಿತ್ತು. ಈ ಬಗ್ಗೆ ನಟಿ ಸುಶ್ಮಿತಾ ಅವರು ಹೇಳಿಕೊಂಡಿದ್ದರು. ಆರೋಗ್ಯದಲ್ಲಿ ಚೇತರಿಕೆ ಕಂಡ ಬಳಿಕ ನಟಿ ಸುಶ್ಮಿತಾ ಮತ್ತೆ ಬಣ್ಣದ ಲೋಕದಲ್ಲಿ ಸಕ್ರೀಯರಾಗಿದ್ದಾರೆ.
Related Articles
Advertisement
ಇದನ್ನೂ ಓದಿ: ಅಪರಿಚಿತ ಮೃತದೇಹಗಳಿಗೆ ಮುಕ್ತಿ…1500ಕ್ಕೂ ಹೆಚ್ಚು ಶವ ಸಂಸ್ಕಾರ ಮಾಡಿದ ಧೀರ ಮಹಿಳೆಯರು
ಆದರೆ ಇದು ಯಾವುದಕ್ಕೂ ಪ್ರತಿಕ್ರಿಯೆ ನೀಡದ ನಟಿ, ಇದೀಗ ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿದ್ದಾರೆ.
“ಝೂಮ್ ಎಂಟರ್ಟೈನ್ಮೆಂಟ್” ನೊಂದಿಗೆ ಮಾತನಾಡಿದ ಅವರು “ಅವಮಾನವನ್ನು ಸ್ವೀಕರಿಸಿದರೆ ಅದು ಅವಮಾನ. ಇಲ್ಲದಿದ್ರೆ ಇಲ್ಲ. ನಾನು ಅದನ್ನು ಸ್ವೀಕರಿಸುವುದಿಲ್ಲ. ಹಾಗಾಗಿ ಅದು ನಮ್ಮ ಮನೆಯ ಕಿಟಕಿಯಿಂದ ಹೊರಗೆ ಹೋಯಿತು. ಯಾರ ವ್ಯವಹಾರವಲ್ಲದ ಕೆಲ ವಿಚಾರಗಳು ಇಲ್ಲಿವೆ” ಎಂದಿದ್ದಾರೆ.
“ನನಗೆ ಬೇಕಾದಾಗ ನಾನು ಬಯಸಿದರೆ ನಾನು ಪ್ರತಿಕ್ರಿಯಿಸುತ್ತೇನೆ. ನಾನು ಬಯಸದೆ ಇದ್ದರೆ, ಅದರ ಬಗ್ಗೆ ಪ್ರತಿಕ್ರಿಯೆ ನೀಡಲ್ಲ. ನಾನು ಮಾತನಾಡಲು ಅಥವಾ ಈ ವಿಷಯದ ಬಗ್ಗೆ ಏನ್ನೇನಾದರೂ ಮಾಡಲು ಹೊರಟಾಗ, ಏನಾದರೂ ಸಂಭವಿಸುತ್ತದೆ. ಸಾಮಾಜಿಕ ಜಾಲತಾಣದ ದಿನಗಳಲ್ಲಿ ಸಮಸ್ಯೆಯಿದೆ. ಇಲ್ಲಿ ಎಲ್ಲದಕ್ಕೂ ಪ್ರತಿಕ್ರಿಯೆ ಬರುತ್ತದೆ. ನಾನು ಹೀಗೆ ಬೆಳೆದಿಲ್ಲ. ನಾನು ಸಮಯವನ್ನು ತೆಗೆದುಕೊಳ್ಳುತ್ತೇನೆ. ನಾನು ಆ ವಿಚಾರಗಳಿಗೆ ಸಿದ್ದವಾದಾಗ ಅವುಗಳಿಗೆ ಪ್ರತಿಕ್ರಿಯೆ ನೀಡುತ್ತೇನೆ” ಎಂದು ನಟಿ ಹೇಳಿದ್ದಾರೆ.
ಸದ್ಯ ಸುಶ್ಮಿತಾ ಸೇನ್ ಅವರ ʼತಾಲಿʼ ವೆಬ್ ಸರಣಿ ಆಗಸ್ಟ್ 15 ರಂದು ರಿಲೀಸ್ ಆಗಲಿದೆ. ಜಿಯೋ ಸಿನಿಮಾದಲ್ಲಿ ಇದು ಸ್ಟ್ರೀಮ್ ಆಗಲಿದೆ.