ಮುಂಬಯಿ: ಲಂಡನ್ ಮೂಲದ ತಂತ್ರಜ್ಞಾನ ಬ್ರ್ಯಾಂಡ್ ನಥಿಂಗ್ ಸುಪರ್ಸ್ಟಾರ್ ರಣವೀರ್ ಸಿಂಗ್ ರನ್ನು ಬ್ರಾಂಡ್ ಅಂಬಾಸಡರ್ ಆಗಿ ಘೋಷಿಸಿದೆ.
ಅವರು ನಥಿಂಗ್ ಸ್ಮಾರ್ಟ್ಫೋನ್ ಮತ್ತು ಬ್ರ್ಯಾಂಡ್ನ ಮುಂಬರುವ ಕ್ಯಾಂಪೇನ್ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಡಿಜಿಟಲ್, ಮುದ್ರಣ ಮತ್ತು ಟಿವಿಸಿ ಕ್ಯಾಂಪೇನ್ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಈ ಸಹಭಾಗಿತ್ವದ ಬಗ್ಗೆ ಮಾತನಾಡಿದ ರಣವೀರ್ ಸಿಂಗ್ “ನಥಿಂಗ್ ಕಂಪನಿಯ ಜೊತೆಗೆ ಸೇರಿಕೊಳ್ಳುವುದಕ್ಕೆ ನನಗೆ ನಿಜವಾಗಿಯೂ ಖುಷಿಯಾಗುತ್ತಿದೆ! ಅವರ ಬ್ರ್ಯಾಂಡ್ನ ಅದ್ಭುತ ವಿನ್ಯಾಸವು ನನ್ನನ್ನು ಸೆಳೆಯಿತು. ಈ ಪಾಲುದಾರಿಕೆಗೆ ಹೊಸ ಅರ್ಥ ಸಿಗುತ್ತದೆ ಎಂದು ನಾನು ಭಾವಿಸಿದೆ. ಸ್ಮಾರ್ಟ್ಫೋನ್ ಉದ್ಯಮದಲ್ಲಿ ಹೊಸ ಅಲೆ ಎಬ್ಬಿಸುವುದಕ್ಕೆ ನಥಿಂಗ್ ಬದ್ಧವಾಗಿದೆ ಎಂದರು.
“ನಥಿಂಗ್ ಅನ್ನು ನಾವು ಆರಂಭಿಸಿದಾಗಿನಿಂದಲೂ, ಭಾರತದಿಂದ ನಮಗೆ ಅಭೂತಪೂರ್ವ ಪ್ರತಿಕ್ರಿಯೆ ಮತ್ತು ಬೆಂಬಲ ವ್ಯಕ್ತವಾಗಿದೆ. ರಣವೀರ್ ಅವರ ಕ್ರಿಯಾಶೀಲತೆಯು ನಮ್ಮ ಬ್ರ್ಯಾಂಡ್ಗೆ ಉತ್ತಮವಾಗಿ ಹೊಂದಿಕೆಯಾಗುತ್ತದೆ ಎಂದು ನಥಿಂಗ್ ಸಹ ಸಂಸ್ಥಾಪಕ ಅಕಿಸ್ ಇವಾಂಜೆಲಿಡಿಸ್ ಹೇಳಿದ್ದಾರೆ.
ನಥಿಂಗ್ನ ಮುಂಬರುವ ಸ್ಮಾರ್ಟ್ಫೋನ್ ಫೋನ್ (2ಎ) ಅನ್ನು ಮಾರ್ಚ್ 5 ರಂದು ಜಾಗತಿಕವಾಗಿ ಬಿಡುಗಡೆ ಮಾಡಲಾಗುತ್ತಿದೆ.