Advertisement

B’town: ಮದುವೆ, ಪಾರ್ಟಿಗಳ ಪರ್ಫಾರ್ಮೆನ್ಸ್‌ಗೆ ಬಿಟೌನ್ ಸ್ಟಾರ್ಸ್‌ ಪಡೆಯುವ ಸಂಭಾವನೆ ಎಷ್ಟು?

06:49 PM Oct 26, 2024 | Team Udayavani |

ಮುಂಬಯಿ: ಬಾಲಿವುಡ್‌ ಸ್ಟಾರ್ಸ್‌ಗಳ ಜೀವನ ಐಷಾರಾಮಿ ಆಗಿರುತ್ತದೆ. ರಿಚ್ ಲೈಫ್‌ನಲ್ಲಿರುವ ಬಾಲಿವುಡ್‌ ಮಂದಿ ಆತ್ಮೀಯರ ಕಾರ್ಯಕ್ರಮದಲ್ಲಿ ಭಾಗಿಯಾಗಿ ನೆರೆದಿರುವ ಅತಿಥಿಗಳನ್ನು ರಂಜಿಸುತ್ತಾರೆ.

Advertisement

ಇತ್ತೀಚೆಗೆ ಅಂಬಾನಿ ಪುತ್ರನ ಮದುವೆಯಲ್ಲಿ ಬಾಲಿವುಡ್‌ ಮಂದಿ ಮನರಂಜನಾ ಕಾರ್ಯಕ್ರಮವನ್ನು ನೀಡಿದ್ದರು. ಸಾಮಾನ್ಯವಾಗಿ ಬಾಲಿವುಡ್‌ ಮಂದಿ ಇಂತಹ ಕಾರ್ಯಕ್ರಮದಲ್ಲಿ ಭಾಗಿಯಾಗಿ ಡ್ಯಾನ್ಸ್‌ ಪ್ರೋಗ್ರಾಂ ಹಾಗೂ ಇತರೆ ಮನರಂಜನೆಯ ಕಾರ್ಯಕ್ರಮ ನೀಡಲು ದುಬಾರಿ ಸಂಭಾವನೆಯನ್ನು ಪಡೆಯುತ್ತಾರೆ.

ವಿವಿಐಪಿಗಳ ಖಾಸಗಿ ಕಾರ್ಯಕ್ರಮ, ಪಾರ್ಟಿಗಳಿಗೆ ಮನರಂಜನೆ ನೀಡಲೆಂದೇ ಆಹ್ವಾನಿತರಾಗುವ ಬಾಲಿವುಡ್‌ ಸ್ಟಾರ್‌ ಗಳು ಎಷ್ಟು ಸಂಭಾವನೆಯನ್ನು ಪಡೆಯುತ್ತಾರೆ ಎನ್ನುವುದರ ಕುರಿತು ಒಂದು ವರದಿ ಇಲ್ಲಿದೆ.

ಕತ್ರಿನಾ ಕೈಫ್ (Katrina Kaif ):

ಸಿನಿಮಾಗಳ ಅವಾರ್ಡ್ಸ್‌ ಕಾರ್ಯಕ್ರಮದಲ್ಲಿ ಬಿಟೌನ್‌ ಬೆಡಗಿ ಕತ್ರಿನಾ ಕೈಫ್‌ ತನ್ನ ಹೈ ಎನರ್ಜಿ ಡ್ಯಾನ್ಸ್‌ ಪರ್ಫಾರ್ಮೆನ್ಸ್ ನೀಡಿ ಹೆಚ್ಚು ಗಮನ ಸೆಳೆಯುತ್ತಾರೆ. ಅವರನ್ನು ಅನೇಕ ವಿಐಪಿಗಳ ಐಷಾರಾಮಿ ಕಾರ್ಯಕ್ರಮಗಳಿಗೆ ಆಹ್ವಾನ ಮಾಡಲಾಗುತ್ತದೆ. ಅಲ್ಲಿ ಅವರು ನೀಡುವ ಡ್ಯಾನ್ಸ್‌ ಪರ್ಫಾರ್ಮೆನ್ಸ್ 3.5 ಕೋಟಿ ರೂ. ಸಂಭಾವನೆಯನ್ನು ಪಡೆಯುತ್ತಾರೆ ಎಂದು ವರದಿ ತಿಳಿಸಿದೆ.

Advertisement

ಶಾರುಖ್‌ ಖಾನ್ (Shah Rukh Khan):‌ ಅಂಬಾನಿ ಪುತ್ರನ ಮದುವೆ ಶಾರುಖ್‌ ಭರ್ಜರಿಯಾಗಿ ವೇದಿಕೆ ಮೇಲೆ ಹೆಜ್ಜೆ ಹಾಕಿದ್ದರು. ವಿವಿಐಪಿ ಕಾರ್ಯಕ್ರಮಗಳಿಗೆ ಅತಿಥಿಯಾಗಿ ಆಹ್ವಾನಿತವಾಗಿ ಮನರಂಜನೆ ಕಾರ್ಯಕ್ರಮ ನೀಡಿದರೆ ಅವರು ಅಲ್ಲಿ 3 ಕೋಟಿ ರೂ. ಸಂಭಾವನೆಯನ್ನು ಪಡೆಯುತ್ತಾರೆ ಎಂದು ವರದಿ ತಿಳಿಸಿದೆ.

ಅಕ್ಷಯ್‌ ಕುಮಾರ್ (Akshay Kumar): ಬಾಲಿವುಡ್‌ ʼಕಿಲಾಡಿʼ ಅಕ್ಷಯ್‌ ಕುಮಾರ್‌ ಅವರು ಅನೇಕ ಬಾಲಿವುಡ್‌ ಸಿನಿಮಾಗಳ ಅವಾರ್ಡ್ಸ್‌ ಕಾರ್ಯಕ್ರಮದಲ್ಲಿ ಮನರಂಜನೆ ಕಾರ್ಯಕ್ರಮಗಳನ್ನು ನೀಡುತ್ತಾರೆ. ತಮ್ಮದೇ ಸಿನಿಮಾದ ಹಾಡುಗಳಿಗೆ ಹೆಜ್ಜೆಹಾಕುವ ಅಕ್ಕಿ ಖಾಸಗಿ ಕಾರ್ಯಕ್ರಮದಲ್ಲಿ ನೃತ್ಯ ಪ್ರದರ್ಶನ ನೀಡಿದರೆ 2.5 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ ಎನ್ನಲಾಗಿದೆ.

ಹೃತಿಕ್‌ ರೋಷನ್‌ (Hrithik Roshan):

ಹೃತಿಕ್‌ ರೋಷನ್‌ ನಟನೆಯಿಂದ ಎಷ್ಟು ಖ್ಯಾತಿಯೂ ಅಷ್ಟೇ ಖ್ಯಾತಿಯನ್ನು ತನ್ನ ಡ್ಯಾನ್ಸ್‌ ಸ್ಟೈಲ್‌ ನಿಂದಲೂ ಗಳಿಸಿದ್ದಾರೆ. ಹೃತಿಕ್‌ ರೋಷನ್‌ ಒಬ್ಬ ಅದ್ಭುತ ಡ್ಯಾನ್ಸರ್‌ ಎನ್ನುವುದು ಬಾಲಿವುಡ್‌ಗೆ ಗೊತ್ತು. ಅನೇಕ ಸಿನಿಮಾಗಳಲ್ಲಿ ಇದನ್ನು ಅವರು ಸಾಬೀತು ಮಾಡಿದ್ದಾರೆ. ಖಾಸಗಿ ಕಾರ್ಯಕ್ರಮದಲ್ಲಿ ತಮ್ಮ ನೃತ್ಯ ಪ್ರದರ್ಶನ ನೀಡಲು ಅವರು 2.5 ಕೋಟಿ ರೂ ಚಾರ್ಜ್‌ ಮಾಡುತ್ತಾರೆ ಎನ್ನಲಾಗಿದೆ.

ರಣ್ಬೀರ್‌ ಕಪೂರ್‌ (Ranbir Kapoor):

ಬಾಲಿವುಡ್‌ನ ಹ್ಯಾಂಡ್ಸಮ್‌ ಹಂಕ್‌ ರಣ್ಭೀರ್‌ ಕಪೂರ್‌ ಡ್ಯಾನ್ಸ್‌ ಚರಿಷ್ಮಾನಿಂದಲೂ ಅನೇಕರ ಮನ ಗೆದ್ದಿದ್ದಾರೆ. ಅವರು ಖಾಸಗಿ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಡ್ಯಾನ್ಸ್‌ ಪ್ರದರ್ಶನ ನೀಡಿದರೆ 2 ಕೋಟಿ ರೂ. ಸಂಭಾವನೆಯನ್ನು ಪಡೆಯುತ್ತಾರೆ.

ಸಲ್ಮಾನ್‌ ಖಾನ್ (Salman Khan ): ಬಾಲಿವುಡ್‌ ʼಟೈಗರ್‌ʼ  ಸಲ್ಮಾನ್‌ ಖಾನ್‌ ಹೈ ಎನರ್ಜಿ ಡ್ಯಾನ್ಸ್‌ ಪರ್ಫಾರ್ಮೆನ್ಸ್ ಮಾಡಿ ಗಮನ ಸೆಳೆಯುತ್ತಾರೆ. ಅಂಬಾನಿ ಪುತ್ರನ ಮದುವೆಯಲ್ಲಿ ಸಖತ್‌ ಸ್ಟೆಪ್‌ ಹಾಕಿದ್ದರು. ವಿವಿಐಪಿಗಳ ಪಾರ್ಟಿ ಹಾಗೂ ಖಾಸಗಿ ಕಾರ್ಯಕ್ರಮದಲ್ಲಿ ಅವರು ಡ್ಯಾನ್ಸ್‌ ಪ್ರದರ್ಶನ ನೀಡಿದರೆ 2 ಕೋಟಿ ರೂ. ಸಂಭಾವನೆಯನ್ನು ಪಡೆಯುತ್ತಾರೆ ಎನ್ನಲಾಗಿದೆ.

ಆಲಿಯಾ ಭಟ್ (Alia Bhatt):

ಬಿಟೌನ್‌ ಬ್ಯೂಟಿ ಆಲಿಯಾ ಭಟ್‌ ನಟನೆ ಮಾತ್ರವಲ್ಲದೆ ಡ್ಯಾನ್ಸ್‌ ನಲ್ಲೂ ಮೋಡಿ ಮಾಡಿದ್ದಾರೆ. ಖಾಸಗಿ ಕಾರ್ಯಕ್ರಮಗಳಿಗೆ ಅತಿಥಿಯಾಗಿ ಆಹ್ವಾನಿತರಾಗುವ ಅವರು ಡ್ಯಾನ್ಸ್‌ ಪರ್ಫಾರ್ಮೆನ್ಸ್ ಗೆ 1.5 ಕೋಟಿ ರೂ. ಸಂಭಾವನೆಯನ್ನು ಪಡೆಯುತ್ತಾರೆ ಎಂದು ಹೇಳಲಾಗಿದೆ.

ದೀಪಿಕಾ ಪಡುಕೋಣೆ (Deepika Padukone): ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಮನರಂಜನೆ ಕಾರ್ಯಕ್ರಮವನ್ನು ನೀಡುತ್ತಾರೆ. ಅವರನ್ನು ಅನೇಕ ವಿವಿಐಪಿಗಳ ಖಾಸಗಿ ಕಾರ್ಯಕ್ರಮಗಳಿಗೆ ಆಹ್ವಾನಿಸಲಾಗುತ್ತದೆ. ತನ್ನ ಮೋಹಕ ನೋಟದ ಡ್ಯಾನ್ಸ್‌ ಪರ್ಫಾರ್ಮೆನ್ಸ್ ಗೆ ದೀಪಿಕಾ 1 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ.

ರಣ್ವೀರ್‌ ಸಿಂಗ್ (Ranveer Singh): 

ಹೈ ಎನರ್ಜಿಟಿಂಗ್‌ ಡ್ಯಾನ್ಸ್ ಪರ್ಫಾರ್ಮೆನ್ಸ್‌ ನೀಡುವ ಮತ್ತೊಬ್ಬ ನಟ ರಣ್ವೀರ್‌ ಸಿಂಗ್.‌ ಖಾಸಗಿ ಕಾರ್ಯಕ್ರಮದಲ್ಲಿ ಮನರಂಜನೆ ನೀಡಲು ಅವರು 1 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ ಎಂದು ವರದಿ ತಿಳಿಸಿದೆ.

ವಿಕ್ಕಿ ಕೌಶಲ್ (Vicky Kaushal): ಸಿನಿಮಾದಲ್ಲಿ ಸಖತ್‌ ಆಗಿ ಡ್ಯಾನ್ಸ್‌ ಮಾಡುವ ನಟ ವಿಕ್ಕಿ ಕೌಶಲ್‌ ಖಾಸಗಿ ಕಾರ್ಯಕ್ರಮದಲ್ಲೂ ಅಷ್ಟೇ ಎನರ್ಜಿಯಿಂದ  ಪರ್ಫಾರ್ಮೆನ್ಸ್ ನೀಡುತ್ತಾರೆ. ಖಾಸಗಿ ಕಾರ್ಯಕ್ರಮದಲ್ಲಿ ಮನರಂಜನೆ ನೀಡಲು ಅವರು 1 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next