Advertisement

ಅರ್ಜುನ್‌ ಜತೆ ಬ್ರೇಕಪ್‌ ಬಳಿಕ 50ರ ಹರೆಯದ ಮಲೈಕಾ ಬಾಳಲ್ಲಿ ʼಮಿಸ್ಟರಿ ಮ್ಯಾನ್‌ʼ ಎಂಟ್ರಿ?

05:36 PM Jul 18, 2024 | Team Udayavani |

ಮುಂಬಯಿ: ಬಿಟೌನ್‌ ಹಾಟ್‌ ಬೆಡಗಿ ಮಲೈಕಾ ಆರೋರಾ (Malaika Arora) ಸದ್ಯ ದೂರದ ಸ್ಪೇನ್‌ ನಲ್ಲಿ ಜಾಲಿ ಮೂಡ್‌ ನಲ್ಲಿದ್ದಾರೆ.

Advertisement

ಕೆಲ ಸಮಯದ ಹಿಂದೆ ಅರ್ಜುನ್‌ ಕಪೂರ್‌ (Arjun Kapoor) ಅವರೊಂದಿಗೆ ಪಾರ್ಟಿ , ಮೋಜು ಮಸ್ತಿ ಮಾಡಿಕೊಂಡಿದ್ದ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದ ʼಮುನ್ನಿʼ ಈಗ ಸ್ಪೇನ್‌ ನಲ್ಲಿ ಜಾಲಿ ಮಾಡುತ್ತಿದ್ದಾರೆ.

ಇತ್ತ ಕಳೆದ 6 ವರ್ಷಗಳಿಂದ ಬಾಳ ಸಂಗಾತಿ ರೀತಿ ಮಲೈಕಾ ಅವರೊಂದಿಗಿದ್ದ ಅರ್ಜುನ್‌ ಕಪೂರ್‌ ಕುಗ್ಗಿ ಹೋಗಿರುವ ರೀತಿ ಪೋಸ್ಟ್‌ ಹಾಕುತ್ತಿದ್ದಾರೆ. ಇಬ್ಬರ ನಡುವಿನ ಬ್ರೇಕಪ್‌ ವಿಚಾರ ಬಿಟೌನ್‌ ನಲ್ಲಿ ಭಾರೀ ಸದ್ದು ಮಾಡಿದೆ.

ಮದುವೆಯ ಯೋಚನೆವರೆಗೆ ಹೋಗಿದ್ದ ಮಲೈಕಾ – ಅರ್ಜುನ್‌ ರಿಲೇಷನ್‌ ಶಿಪ್ ಬ್ರೇಕಪ್‌ ಹಂತಕ್ಕೆ ಬಂದು ಮುಕ್ತಾಯ ಕಂಡಿದೆ.

ಇತ್ತೀಚೆಗೆ ಇಡೀ ಬಿಟೌನ್‌ ಅಂಬಾನಿ ಪುತ್ರನ ಮದುವೆಗೆ ಹಾಜರಿ ಹಾಕಿತ್ತು. ಆದರೆ ಈ ಮದುವೆಗೆ ಮಲೈಕಾ ಹೋಗಿಲ್ಲ. ಅವರು ಸ್ಪೇನ್‌ ಗೆ ತೆರಳಿದ್ದಾರೆ. ಅನಂತ್‌ – ರಾಧಿಕಾರಿಗೆ ಅಲ್ಲಿಂದಲ್ಲೇ ಶುಭ ಹಾರೈಸಿದ್ದಾರೆ.

Advertisement

ಸ್ಪೇನ್‌ನ ಮಾರ್ಬೆಲ್ಲಾ ಸಿಟಿಯಲ್ಲಿ ರಜಾ  ಮೂಡಿನಲ್ಲಿರುವ ಮಲೈಕಾ ಅಲ್ಲಿನ ನಗರಗಳನ್ನು ಸುತ್ತುತ್ತಾ, ಬಿಕಿನಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ನಡುವೆ ಮಲೈಕಾ ಹಂಚಿಕೊಂಡ ಒಂದು ಫೋಟೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಸ್ಪೇನ್‌ ದೇಶದ ಹೊಟೇಲ್‌ ನಲ್ಲಿ ಆಹಾರವನ್ನು ಸೇವಿಸುತ್ತಾ, ಅದರ ಫೋಟೋವನ್ನು ಸ್ಟೋರಿಯಾಗಿ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದಾರೆ. ಒಂದು ಫೋಟೋದಲ್ಲಿ ಮಲೈಕಾ ಅವರ ಮುಂದೆ ವ್ಯಕ್ತಿಯೊಬ್ಬ ಕಾಣಿಸಿಕೊಂಡಿದ್ದಾನೆ. ಆತನ ಪೋಟೋ ಬ್ಲರ್ ಕಾಣಿಸಿದೆ.

ಈ ವ್ಯಕ್ತಿ ಯಾರು? ಮಲೈಕಾ ಅವರು ಮತ್ತೆ ಡೇಟ್‌ ಮಾಡುತ್ತಿದ್ದಾರಾ? ಅರ್ಜುನ್‌ ಅವರ ಪ್ರೀತಿಯನ್ನು ಅಷ್ಟುಬೇಗ ಮರೆತ್ರಾ? ಎಂದು ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ.

ಫೋಟೋ ನೋಡುತ್ತಿದ್ದಂತೆ ನೆಟ್ಟಿಗರು ಮಲೈಕಾ ಅವರ ಖಾತೆಯನ್ನು ಜಾಲಾಡಿ ಆ ವ್ಯಕ್ತಿಯ ಬಗ್ಗೆ ಹುಡುಕಾಡಿದ್ದಾರೆ. ಆದರೆ ಯಾವ ಮಾಹಿತಿಯೂ ಲಭ್ಯವಾಗಿಲ್ಲ.

ಸದ್ಯ ಮಲೈಕಾ ಅವರು ಹಾಕಿದ್ದ ಸ್ಟೋರಿ ಸ್ಕ್ರೀನ್‌ ಶಾಟ್‌ ವೈರಲ್‌ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next