Advertisement

ʼKerala Storyʼ ʼಕಾಶ್ಮೀರ್‌ ಫೈಲ್ಸ್‌ʼ.. ನಂತಹ ಸಿನಿಮಾಗಳ ಜನಪ್ರಿಯತೆ ಸಮಾಜಕ್ಕೆ ಅಪಾಯಕಾರಿ

01:30 PM Sep 12, 2023 | Team Udayavani |

ಮುಂಬಯಿ: ತನ್ನ ನಟನೆ ಮೂಲಕ ಬಾಲಿವುಡ್‌ ಮಾತ್ರವಲ್ಲದೆ ಹಾಲಿವುಡ್‌ ನಲ್ಲೂ ಮಿಂಚಿರುವ ನಸೀರುದ್ದೀನ್ ಶಾ ಅವರು ತನ್ನ ಹೇಳಿಕೆಗಳಿಂದಲೂ ಅನೇಕ ಬಾರಿ ಸುದ್ದಿಯಾಗಿದ್ದಾರೆ. ಇದೀಗ ಬಾಲಿವುಡ್‌ ಸಿನಿಮಾಗಳನ್ನು ಟೀಕಿಸಿ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.

Advertisement

2006 ರಲ್ಲಿʼ ಯು ಹೋತಾ ತೋ ಕ್ಯಾ ಹೋತಾʼ ಸಿನಿಮಾವನ್ನು ನಸೀರುದ್ದೀನ್ ಶಾ ನಿರ್ದೇಶನ ಮಾಡಿದ್ದರು. ಇದೀಗ 17 ವರ್ಷಗಳ ಬಳಿಕ ಮತ್ತೆ “ಮೆನ್‌ ವುಮನ್‌ ಮೆನ್‌ ವುಮನ್‌” ಸಿನಿಮಾದ ಮೂಲಕ ಮತ್ತೆ ನಿರ್ದೇಶನಕ್ಕಿಳಿಯಲಿದ್ದಾರೆ.

ಇತ್ತೀಚೆಗೆ ಅವರು ಸಂದರ್ಶನವೊಂದರಲ್ಲಿ ಬಾಲಿವುಡ್‌ ಸಿನಿಮಾಗಳಾದ ʼಗದರ್-2‌ʼ, ಕಾಶ್ಮೀರ್‌ ಫೈಲ್ಸ್‌ʼ ಹಾಗೂ ʼಕೇರಳ ಸ್ಟೋರಿʼ ಸಿನಿಮಾಗಳು ಸಮಾಜಕ್ಕೆ ಹಾನಿಕಾರವೆಂದು ಹೇಳಿ ಸುದ್ದಿಯಾಗಿದ್ದಾರೆ.

“ನೀವು ತೀವ್ರ ರಾಷ್ಟ್ರೀಯವಾದಿಯಾಗಿದ್ದರೆ  ಹೆಚ್ಚು ಜನಪ್ರಿಯರಾಗುತ್ತೀರಿ. ಯಾಕೆಂದರೆ ದೇಶವನ್ನೀಗ ಇದೇ(ರಾಷ್ಟ್ರೀಯವಾದ) ಆಳುತ್ತಿದೆ. ದೇಶದ ಮೇಲೆ ಪ್ರೀತಿ ತೋರಿಸಿದರೆ ಸಾಕಾಗದು ಅದನ್ನು ನಾವು ಡಂಗುರ ಸಾರಿದಂತೆ ಹೇಳಬೇಕು. ಅಷ್ಟೇ ಅಲ್ಲ ಕಾಲ್ಪನಿಕ ಶತ್ರುಗಳನ್ನು ಸೃಷ್ಟಿಸಿಕೊಳ್ಳಬೇಕು. ಜನರಿಗೆ ಇದು ತುಂಬಾ ಅಪಾಯಕಾರಿ ಎಂದು ತಿಳಿದಿಲ್ಲ. ‘ಕೇರಳ ಸ್ಟೋರಿ’ ಮತ್ತು ‘ಗದರ್ 2’ ನಂತಹ ಚಲನಚಿತ್ರಗಳನ್ನು ನಾನು ನೋಡಿಲ್ಲ ಆದರೆ ಅವುಗಳು ಏನನ್ನು ಹೇಳುತ್ತವೆ ಎನ್ನುವುದು ನನಗೆ ತಿಳಿದಿದೆ” ಎಂದಿದ್ದಾರೆ.

ಇದನ್ನೂ ಓದಿ: Morocco Earthquake: ಮೃತರ ಸಂಖ್ಯೆ 2,900 ಕ್ಕೆ ಏರಿಕೆ, ಮುಂದುವರೆದ ರಕ್ಷಣಾ ಕಾರ್ಯಾಚರಣೆ

Advertisement

ʼಕಾಶ್ಮೀರ್‌ ಫೈಲ್ಸ್‌ʼ ನಂತಹ ಸಿನಿಮಾಗಳು ಬಹಳ ಜನಪ್ರಿಯತೆ ಆಗಿರುವುದು ಹಾನಿಕಾರ. ಸತ್ಯವನ್ನು ಬಿಂಬಿಸುವ ಸಿನಿಮಾಗಳನ್ನು ನೀಡುವ ಸುಧೀರ್ ಮಿಶ್ರಾ, ಅನುಭವ್ ಸಿನ್ಹಾ ಮತ್ತು ಹನ್ಸಲ್ ಮೆಹ್ತಾ ಅವರ ಚಿತ್ರಗಳನ್ನು ಜನ ನೋಡಲ್ಲ. ಆದರೆ ಅವರು ಸೋಲದೆ ಕಥೆಯನ್ನು ಹೇಳುತ್ತಾ ಹೋಗುತ್ತಿರುವುದು ಬಹಳ ಮುಖ್ಯ” ಎಂದು ಅವರು ಹೇಳಿದ್ದಾರೆ.

“100 ವರ್ಷದ ಬಳಿಕ ಜನ “ಭೀಡ್”‌ ಹಾಗೂ ʼಗದರ್-2‌ʼ ಸಿನಿಮಾವನ್ನು ನೋಡುತ್ತಾರೆ. ಇದರಲ್ಲಿ ನಮ್ಮ ಕಾಲದ ಸತ್ಯವನ್ನು ಬಿಂಬಿಸುವ ಸಿನಿಮಾ ಯಾವುದೆಂದು ಗೊತ್ತಾಗುತ್ತದೆ. ಏಕೆಂದರೆ ಚಲನಚಿತ್ರವು ಮಾಧ್ಯಮ ಈ ರೀತಿ ಮಾಡಬಲ್ಲದು” ಎಂದು ನಟ ಹೇಳಿದ್ದಾರೆ.

“ತಪ್ಪು ವಿಷಯಗಳನ್ನು ಹೊಗಳುವ ಮತ್ತು ಯಾವುದೇ ಕಾರಣವಿಲ್ಲದೆ ಇತರ ಸಮುದಾಯಗಳತ್ತ  ಗುರಿಯಾಗಿಸಿ ಬರುವ ಸಿನಿಮಾಗಳನ್ನು ಮಾಡಲು ನಿರ್ದೇಶಕರು ಸಹಕಾರ ನೀಡುತ್ತಿರುವುದು ನಿಜಕ್ಕೂ ಅಪಾಯಕಾರಿ ಪ್ರವೃತ್ತಿಯಾಗಿದೆ” ಎಂದು ಅವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next