Advertisement
97ನೇ ಆಸ್ಕರ್ ಪ್ರಶಸ್ತಿಗಾಗಿ ಭಾರತದಿಂದ ಕಿರಣ್ ರಾವ್ (Kiran Rao) ನಿರ್ದೇಶನದ ‘ಲಾಪತಾ ಲೇಡೀಸ್’ ಅಧಿಕೃತವಾಗಿ ಪ್ರವೇಶ ಪಡೆದಿರುವುದು ಗೊತ್ತೇಯಿದೆ. ʼಅನಿಮಲ್ʼ, ʼಚಂದು ಚಾಂಪಿಯನ್ʼ, ʼಕಲ್ಕಿ 2898 ADʼ, ʼಹನುಮಾನ್ʼ, ʼತಂಗಲಾನ್ʼ, ʼಅರ್ಟಿಕಲ್ 370ʼ, ರಾಷ್ಟ್ರ ಪ್ರಶಸ್ತಿ ವಿಜೇತ ಮಲಯಾಳಂ ಚಿತ್ರ ʼಆಟಂ, ʼಆಡುಜೀವಿತಂʼ ರಾಜ್‌ಕುಮಾರ್ ರಾವ್ ಅವರ ʼಶ್ರೀಕಾಂತ್ʼ ಮತ್ತು ವಿಕ್ಕಿ ಕೌಶಲ್ ಅವರ ಸ್ಯಾಮ್ ಬಹದ್ದೂರ್ʼ ಸೇರಿದಂತೆ ಒಟ್ಟು 12 ಹಿಂದಿ ಚಿತ್ರಗಳು, 6 ತಮಿಳು ಮತ್ತು 4 ಮಲಯಾಳಂ ಚಿತ್ರಗಳನ್ನು ಮೀರಿಸಿ ʼಲಾಪತಾ ಲೇಡೀಸ್ʼ ಆಸ್ಕರ್ ಅಂಗಳಕ್ಕೆ ಎಂಟ್ರಿ ಕೊಟ್ಟಿದೆ.
Related Articles
Advertisement
ಈಗಾಗಲೇ ಹಲವು ಪ್ರಶಸ್ತಿ, ಪುರಸ್ಕಾರ ಪಡೆದು ಮೆಚ್ಚುಗೆ ಗಳಿಸಿರುವ ಈ ಸಿನಿಮಾ ಆಸ್ಕರ್ ಗೆಲ್ಲುವತ್ತ ಗಮನ ಹರಿಸಿದೆ. ಈ ಕಾರಣದಿಂದ ಆಸ್ಕರ್ ಕ್ಯಾಂಪೇನ್ ನ್ನು ಜೋರಾಗಿಯೇ ಚಿತ್ರತಂಡ ಆರಂಭಿಸಿದೆ.
ಅಮೀರ್ ಖಾನ್ ಮಾಜಿ ಪತ್ನಿ ಕಿರಣ್ ರಾವ್ ‘ಲಾಪತಾ ಲೇಡೀಸ್’ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಅಮೀರ್ ಖಾನ್ (Aamir Khan) ಅವರ ಪ್ರೊಡಕ್ಷನ್ ಹೌಸ್ ಸಿನಿಮಾಕ್ಕೆ ಬಂಡವಾಳ ಹಾಕಿದೆ.