Advertisement

ಬಾಲಿವುಡ್‌ಗೀಗ ಬಾಬಾ ಎಂಟ್ರಿ!

08:05 AM Aug 10, 2017 | Harsha Rao |

ಮುಂಬಯಿ: ಬಾಬಾ ರಾಮ್‌ದೇವ್‌ ಮೂರನೇ ಅವತಾರಕ್ಕೆ ಸಿದ್ಧರಾಗಿದ್ದಾರೆ. ಯೋಗಗುರು, ಪತಂಜಲಿ ಸಂಸ್ಥೆಯ ಒಡೆಯನಾಗಿ ಬಾಬಾ ಎರಡು ಅವತಾರ ವೆತ್ತಿದ್ದಾರೆ. ಈಗ ಅವರು ಬಾಲಿವುಡ್‌ಗೆ ಅಧಿಕೃತವಾಗಿ ಪಾದಾರ್ಪಣೆ ಮಾಡಿರುವುದು ಮೂರನೇ ಅವತಾರ.

Advertisement

ಲೋಮ್‌ಹರ್ಷ್‌ ನಿರ್ದೇಶನದ, ಗಾವಿ ಚಾಹಲ್‌ ಹಾಗೂ ದಿಯಾನಾ ಉಪ್ಪಳ್‌ ನಟನೆಯ “ಏ ಹೈ ಇಂಡಿಯಾ’ ಚಿತ್ರವನ್ನು ಬೆಂಬಲಿಸಿರುವ ಬಾಬಾ ರಾಮ್‌ದೇವ್‌, ಚಿತ್ರದ “ಸಯ್ನಾ ಸಯ್ನಾ’ ಎಂಬ ಹಾಡಿನಲ್ಲೂ ಕಾಣಿಸಿಕೊಂಡಿದ್ದಾರೆ. ಡಿಎಲ್‌ಬಿ ಬ್ಯಾನರ್‌ನಲ್ಲಿ, ಸಂದೀಪ್‌ ಚೌದರಿ ನಿರ್ಮಿಸಿರುವ “ಏ ಹೈ ಇಂಡಿಯಾ’ ಇದೇ ಆಗಸ್ಟ್‌ 18ರಂದು ತೆರೆ ಕಾಣುತ್ತದೆ.

ಸಿನಿಮಾ ಕುರಿತು ಮಾತನಾಡಿದ ಬಾಬಾ ರಾಮ್‌ದೇವ್‌, “ಭಾರತಕ್ಕೆ ಜಗತ್ತನ್ನೇ ಮುನ್ನಡೆಸುವ ಸಾಮರ್ಥ್ಯವಿದೆ ಎಂಬುದನ್ನು “ಏ ಹೈ ಇಂಡಿಯಾ’ ಚಿತ್ರದಲ್ಲಿ ಅಚ್ಚುಕಟ್ಟಾಗಿ ನಿರೂಪಿಸಲಾಗಿದೆ. ಹೀಗಾಗಿ ಸಾಕಷ್ಟು ಯೋಚನೆ ಮಾಡಿದ ಅನಂತರವೇ ನಾನು ಈ ಚಿತ್ರವನ್ನು ಬೆಂಬಲಿಸುವ ನಿರ್ಧಾರಕ್ಕೆ ಬಂದಿದ್ದೇನೆ. ಹಾಗೇ ಎಲ್ಲ ಭಾರತೀಯರೂ ಚಿತ್ರವನ್ನು ಪ್ರೋತ್ಸಾಹಿಸುತ್ತಾರೆ ಎಂಬ ವಿಶ್ವಾಸವಿದೆ’ ಎಂದಿದ್ದಾರೆ.

“ನೂರು ಕೋಟಿಗೂ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತ, ವೇದಗಳ ತವರಾಗಿದೆ. ಆದಾಗ್ಯೂ ಜಗತ್ತಿನಾದ್ಯಂತ ಕೆಲ ಮಂದಿಗೆ ಭಾರತದ ಬಗ್ಗೆ ತಪ್ಪು ಕಲ್ಪನೆಗಳಿವೆ. ಆದರೆ ಭಾರತ “ಹಾವಾಡಿಗರ ನಾಡು’ ಎಂಬುದಕ್ಕೂ ಮಿಗಿಲಾಗಿರುವ ಅನನ್ಯ ರಾಷ್ಟ್ರವಾಗಿದೆ’ ಎಂದು ಯೋಗಗುರು ರಾಮ್‌ದೇವ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next