Advertisement

ಹಿರಾನಿಗೆ “ಮಿ ಟೂ’ಬಿಸಿ

12:40 AM Jan 14, 2019 | Team Udayavani |

ಮುಂಬಯಿ: ಬಾಲಿವುಡ್‌ ನಿರ್ದೇಶಕ ರಾಜ್‌ಕುಮಾರ್‌ ಹಿರಾನಿ ವಿರುದ್ಧ ಮಹಿಳೆಯೊಬ್ಬರು ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದಾರೆ. 

Advertisement

ಹಿರಾನಿ ಈ ಆರೋಪವನ್ನು ಅಲ್ಲಗಳೆದಿದ್ದಾರೆ ಮತ್ತು ಅವರ ವಕೀಲರು ಇದೊಂದು ದುರುದ್ದೇಶಪೂರಿತ ದೂರು ಎಂದು ಹೇಳಿದ್ದಾರೆ. ಮಹಿಳೆ ತಾವು ಹಿರಾನಿ ಅವರ “ಸಂಜು’ ಚಿತ್ರದ ಸಹಾಯಕ ನಿರ್ದೇಶಕಿ ಎಂದು ಹೇಳಿಕೊಂಡಿದ್ದಾರೆ. 

2018ರ ಮಾರ್ಚ್‌ ನಿಂದ ಸೆಪ್ಟಂಬರ್‌ ವರೆಗೆ 2 ಬಾರಿ ಹಿರಾನಿ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಅವರು ಪತ್ರಿಕೆಯೊಂದಕ್ಕೆ ಹೇಳಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಹಿರಾನಿ ಪತ್ನಿ, ನಾವು ಆ ಮಹಿಳೆಗೆ ಯಾವ ಒತ್ತಡವನ್ನೂ ಹೇರುವುದಿಲ್ಲ. ಅವರು ಇಚ್ಛೆಯಂತೆ ಮುಂದುವರಿಯಲಿ ಎಂದಿದ್ದಾರೆ.
 

Advertisement

Udayavani is now on Telegram. Click here to join our channel and stay updated with the latest news.

Next