Advertisement
“ಪುಲ್ವಾಮಾ…ದಿ ಡೆಡ್ಲಿ ಅಟ್ಯಾಕ್’ ಎಂದು ಉದ್ಗರಿಸಿದ ಮಧ್ಯವಯಸ್ಕ ಬಾಲಿವುಡ್ ಪ್ರೊಡ್ನೂಸರ್ ಒಬ್ಬರು, ತಮ್ಮ ಅಸಿಸ್ಟೆಂಟ್‌ನತ್ತ ತಿರುಗಿ ಕೇಳಿದರು-“ಹೇಗಿದೆ ಟೈಟಲ್?’ ಅವರ ಅಸಿಸ್ಟೆಂಟ್ “ಚೆನ್ನಾಗಿದೆ’ ಎನ್ನುವಂತೆ ತಲೆಯಾಡಿಸಿ ಆ ಟೈಟಲ್ ಅನ್ನು ಅರ್ಜಿಯಲ್ಲಿ ಬರೆದ. ಪ್ರೊಡ್ನೂಸರ್ ತಲೆಗೆ ಮತ್ತೂಂದು ಟೈಟಲ್ ಹೊಳೆಯಿತು. “ಇನ್ನೊಂದು ಬರಿ- ಪುಲ್ವಾಮಾ ಅಟ್ಯಾಕ್ ವರ್ಸಸ್ ಸರ್ಜಿಕಲ್ ಸ್ಟ್ರೈಕ್ 2!’ ಅಸಿಸ್ಟೆಂಟ್ ಈ ಟೈಟಲ್ಲನ್ನೂ ಅರ್ಜಿಯಲ್ಲಿ ಸೇರಿಸಿದ. ಆ ಪ್ರೊಡ್ನೂಸರ್ ನನ್ನತ್ತ ತಿರುಗಿ ಅಂದ “”ನೋಡಿ ನಾವು ಉದ್ದುದ್ದ ಟೈಟಲ್‌ಗಳನ್ನು ಯೋಚಿಸಬೇಕಾಗುತ್ತೆ, ಕಾಂಪ್ಲಿಕೇಟೆಡ್ ಟೈಟಲ್‌ಗಳಿರಬೇಕು. ಕೇವಲ ಒಂದೇ ಪದದ ನೇರಾನೇರ ಟೈಟಲ್‌ಗಳೆಲ್ಲ ಈಗ ಖಾಲಿ ಆಗಿಬಿಟ್ಟಿವೆ. “ಪುಲ್ವಾಮಾ’, “ಸರ್ಜಿಕಲ್ ಸ್ಟ್ರೈಕ್ 2.0′ ಅಥವಾ “ಬಾಲಾಕೋಟ್’ ಟೈಟಲ್‌ಗಳು ಸಿಗೋದಿಲ್ಲ. ಅವು ಆಗಲೇ ರಿಜಿಸ್ಟರ್ ಆಗಿಬಿಟ್ಟಿವೆ..” ಇಡೀ ಭಾರತವೇ ಕದನದ ಸುದ್ದಿಗಳನ್ನು ಆತಂಕದಿಂದ ಕೇಳಿಸಿಕೊಳ್ಳುತ್ತಾ ಅಭಿನಂದನ್ ಸುರಕ್ಷಿತವಾಗಿ ಹಿಂದಿರುಗಲಿ ಎಂದು ಆಶಿಸುತ್ತಿದ್ದ ಸಮಯದಲ್ಲೇ, ಬಾಲಿವುಡ್‌ಮಂದಿ ಈ ಬಿಕ್ಕಟ್ಟಿನಿಂದ ಲಾಭಮಾಡಿಕೊಳ್ಳುವಲ್ಲಿ ನಿರತರಾಗಿದ್ದಾರೆ.
Related Articles
Advertisement
ಇತ್ತೀಚೆಗಷ್ಟೇ ಈ ವಿಷಯವಾಗಿ ಲೇಖಕ ಪ್ರಿತೀಶ್ ನಂದಿ ಮತ್ತು ನಿರ್ದೇಶಕ ಅನುರಾಗ್ ಕಶ್ಯಪ್ ನಡುವೆ ಜಗಳವಾಗಿತ್ತು. ಅನುರಾಗ್ ಕಶ್ಯಪ್ ಅವರ “ಗ್ಯಾಂಗ್ಸ್ ಆಫ್ ವಾಸೇಪುರ್’ ಸಿನೆಮಾದಲ್ಲಿ “ಓ ವುಮನಿಯಾ’ ಎನ್ನುವ ಹಾಡು ಬಂದಿತ್ತು. “ವುಮನಿಯಾ’ ಎನ್ನುವ ಪದವನ್ನು ಹುಟ್ಟುಹಾಕಿದ್ದು ಅನುರಾಗ್ ಕಶ್ಯಪ್ ಮತ್ತು ಅವರ ತಂಡ. ಆದರೆ ಈ ಪದ ಫೇಮಸ್ ಆಗುತ್ತಿದ್ದಂತೆಯೇ ಪ್ರಿತೀಶ್ ನಂದಿಯವರ ನಿರ್ಮಾಣ ಸಂಸ್ಥೆಯು “ವುಮನಿಯಾ’ ಟೈಟಲ್ ಅನ್ನು ನೋಂದಣಿ ಮಾಡಿಸಿಕೊಂಡು ಬಿಟ್ಟಿತು. ಈ ವರ್ಷ ಅನುರಾಗ್ ಕಶ್ಯಪ್ ತಾವು ನಿರ್ಮಿಸಲು ಉದ್ದೇಶಿಸಿರುವ ಮಹಿಳಾ ಕೇಂದ್ರಿತ ಸಿನೆಮಾಕ್ಕೆ “ವುಮನಿಯಾ’ ಎನ್ನುವ ಹೆಸರು ಇಡಲು ಇಚ್ಛಿಸಿದರು. ಆದರೆ ಆ ಟೈಟಲ್ ಆಗಲೇ ರಿಜಿಸ್ಟರ್ ಆಗಿದ್ದು ತಿಳಿದ ಕಶ್ಯಪ್ ಈ ಟೈಟಲ್ ತಮಗೆ ಕೊಡಬೇಕೆಂದು ನಂದಿ ಅವರನ್ನು ಸಂಪರ್ಕಿಸಿದಾಗ, ಪ್ರಿತೀಶ್ ನಂದಿ 2 ಕೋಟಿ ರೂಪಾಯಿ ಬೇಡಿಕೆ ಇಟ್ಟಿದ್ದಾರೆ. ಸಿಟ್ಟಾದ ಅನುರಾಗ್ ಕಶ್ಯಪ್ ಪ್ರಿತೀಶ್ ನಂದಿ ಬೇಡಿಕೆಯನ್ನು “ವಸೂಲಿ’ ಎಂದು ಕರೆದಿದ್ದಷ್ಟೇ ಅಲ್ಲದೇ, ಟೈಟಲ್ ಆಸೆಯನ್ನು ಕೈಬಿಟ್ಟು ತಮ್ಮ ಹೊಸ ಸಿನೆಮಾಕ್ಕೆ “ಸಾಂಡ್ ಕೀ ಆಂಖ್’ ಎಂದು ಹೆಸರು ಇಟ್ಟಿದ್ದಾರೆ.
ಫೆ. 27ರಂದು ಐಎಂಎಂಪಿಎದ ಕಚೇರಿಗೆ ನಾನೊಬ್ಬ ಚಿಕ್ಕ ಪ್ರೊಡ್ನೂಸರ್ ಎಂದು ಹೇಳಿಕೊಂಡು ಹೋಗಿದ್ದೆ. ಭಾರತ- ಪಾಕಿಸ್ಥಾನ ಕ್ಕೆ ಸಂಬಂಧಿಸಿದ ಟೈಟಲ್ ರೆಜಿಸ್ಟ್ರೇಷನ್ ಮಾಡಿಸಲು ಬಂದಿದ್ದೇನೆಂದು ಅವರಿಗೆ ಹೇಳಿದೆ. ಆದರೆ ಅದಾಗಲೇ ಬಹುತೇಕ ಟೈಟಲ್‌ಗಳಿಗಾಗಿ ಬೇರೆಯವರು ಅರ್ಜಿ ಸಲ್ಲಿಸಿಬಿಟ್ಟಿದ್ದರು. ಆ ಸಮಯದಲ್ಲೇ ನನಗೆ PULWAMA: THE DEADLY ATTACK” ಎಂದು ಹೆಸರು ನೋಂದಣಿ ಮಾಡಲು ಮುಂದಾದ ಪ್ರೊಡ್ನೂಸರ್ ಸಿಕ್ಕಿದು. ಆ ಪ್ರೊಡ್ನೂಸರ್ ನನಗೊಂದು ಸಲಹೆ ಕೊಟ್ಟರು - “ಪುಲ್ವಾಮಾ ಅಥವಾ ಬಾಲ್‌ಕೋಟ್ ಹೆಸರು ಬರುವಂಥ ಉದ್ದದ ಟೈಟಲ್ ಅನ್ನು ರಿಜೆಸ್ಟರ್ ಮಾಡಿಸಿಬಿಡಿ. ಸಿನೆಮಾ ಮಾಡುವಾಗ ಬರೀ ಆ ಪದವನ್ನಷ್ಟೇ ದೊಡ್ಡದಾಗಿ ದಪ್ಪ ಅಕ್ಷರಗಳಲ್ಲಿ ಬರೆದು, ಉಳಿದವನ್ನು ಚಿಕ್ಕದಾಗಿ ಮಾಡಿಬಿಡು!’. ಇಷ್ಟು ಹೇಳಿದ್ದೇ ಅವರು THE DEADLY ATTACK ನೋಂದಣಿ ಮಾಡಿಸಲು ಹಣ ಹೊರತೆಗೆದರು.
ಭಾರತೀಯ ವಾಯುಪಡೆಯ ಪೈಲಟ್ ಅಭಿನಂದನ್ ವರ್ಧಮಾನ್‌ರನ್ನು ಪಾಕ್ ಸೇನೆ ವಶಕ್ಕೆ ಪಡೆದ ಸುದ್ದಿ ತಿಳಿಯುತ್ತಿದ್ದಂತೆಯೇ ಇಂಡಿಯನ್ ಮೋಷನ್ ಪಿಕ್ಚರ್ಸ್ ಪ್ರೊಡ್ನೂಸರ್ಸ್ ಅಸೋಸಿಯೇಷನ್‌ಗೆ ಫೋನ್ ಮಾಡಿ “ಅಭಿನಂದನ್/ವಿಂಗ್ ಕಮ್ಯಾಂಡರ್ ಅಭಿನಂದನ್ ಅಂತ ಟೈಟಲ್ ನೋಂದಣಿ ಮಾಡಿಸಬೇಕು. ಟೈಟಲ್ ಖಾಲಿ ಇದೆಯಾ?’ ಎಂದೆ.
ಅತ್ತ ಫೋನ್ ಎತ್ತಿದ ವ್ಯಕ್ತಿ ಹೇಳಿದ -“ಕೂಡಲೇ ನಿಮ್ಮ ಅರ್ಜಿ ಕಳಿಸಿ. ಟೈಟಲ್ ಬೇಗ ಖಾಲಿಯಾಗಿಬಿಡುತ್ತೆ’(ಮೂಲ-ಹಫಿಂಗ್‌ಟನ್ ಪೋಸ್ಟ್) ಅಂಕುರ್ ಪಾಠಕ್