Advertisement

ಪ್ರಧಾನಿ ಹುಟ್ಟುಹಬ್ಬಕ್ಕೆ ಶುಭ ಹಾರೈಸಿದ ಬಾಲಿವುಡ್ ತಾರೆಯರು

09:59 AM Sep 18, 2019 | Team Udayavani |

ಮುಂಬಯಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ದೇಶದೆಲ್ಲೆಡೆ ನೆಚ್ಚಿನ ಪ್ರಧಾನಿಯ ಜನ್ಮದಿನಾಚರಣೆಯ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಮೋದಿ ಅವರಿಗೆ ಹಲವು ಕಡೆಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

Advertisement

ಇತ್ತ ಬಾಲಿವುಡ್ ಸಹ ಪ್ರಧಾನಿ ಮೋದಿ ಅವರಿಗೆ ಶುಭಾಶಯಗಳನ್ನು ತಿಳಿಸುವಲ್ಲಿ ಹಿಂದೆಬಿದ್ದಿಲ್ಲ. ಹಲವು ನಟ, ನಟಿಯರು, ನಿರ್ದೇಶಕರು, ನಿರ್ಮಾಪಕರು ಸೇರಿದಂತೆ ಇನ್ನೂ ಹಲವಾರು ಮಂದಿ ಟ್ವಿಟ್ಟರ್ ಮೂಲಕ ಪ್ರಧಾನಿಯವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಹಾರೈಸಿದ್ದಾರೆ.

ನರೇಂದ್ರ ಮೋದಿ ಅವರ ಜೀವನ ಚರಿತ್ರೆಯನ್ನು ಆಧರಿಸಿ ನಿರ್ಮಾಣವಾಗಿದ್ದ ಚಿತ್ರದಲ್ಲಿ ಮೋದಿ ಅವರ ಪಾತ್ರವನ್ನು ನಿರ್ವಹಿಸುವ ಅವಕಾಶವನ್ನು ಪಡೆದುಕೊಂಡಿದ್ದ ನಟ ವಿವೇಕ್ ಒಬೆರಾಯ್ ಅವರು ಪ್ರಧಾನಿ ಮೋದಿ ಅವರಿಗೆ ಹಾಡೊಂದರ ಮೂಲಕ ಶುಭಾಶಯಗಳನ್ನು ಕೋರಿದ್ದಾರೆ. ‘ನರೇಂದ್ರ ಮೋದಿ ಜೀ ನಿಮಗೆ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು, ಹೆಮ್ಮೆಯ ಭಾರತೀಯನೊಬ್ಬನಿಂದ ನಮ್ಮ ನೆಚ್ಚಿನ ಪ್ರಧಾನಿಗೆ ಹುಟ್ಟುಹಬ್ಬದ ಶುಭಾಶಯಗಳು’ ಎಂದು ವಿವೇಕ್ ಬರೆದುಕೊಂಡಿದ್ದಾರೆ.


ಇನ್ನು ನಿರ್ಮಾಪಕಿ ಏಕ್ತಾ ಕಪೂರ್ ಅವರೂ ಸಹ ಮೋದಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ. ‘ಗೌರವಾನ್ವಿತ ಪ್ರಧಾನ ಮಂತ್ರಿಯವರಿಗೆ ಹುಟ್ಟುಹಬ್ಬದ ಶುಭಾಶಯಗಳು’ ಎಂದು ಅವರು ತಮ್ಮ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.


ಇನ್ನು ನಟ ಅಕ್ಷಯ್ ಕುಮಾರ್ ಅವರು ಪ್ರಧಾನಿ ಮೋದಿ ಅವರ ಜನ್ಮದಿನದಂದೇ ಅವರ ಜೀವನಚರಿತ್ರೆಯನ್ನು ಆಧರಿಸಿ ತಯಾರಾಗುತ್ತಿರುವ ‘ಮನ್ ಭೈರಾಗಿ’ ಚಿತ್ರದ ಪೋಸ್ಟರ್ ಅನ್ನು ಬಿಡುಗಡೆ ಮಾಡುವ ಮೂಲಕ ನೆಚ್ಚಿನ ಪ್ರಧಾನಿಗೆ ವಿಶಿಷ್ಟ ರೀತಿಯಲ್ಲಿ ಶುಭಾಶಯಗಳನ್ನು ತಿಳಿಸಿದ್ದಾರೆ.

Advertisement


‘ದೇಶದೆಡೆಗಿನ ನಿಮ್ಮ ನಿಸ್ವಾರ್ಥ ತುಡಿತ ಮತ್ತು ಕಠಿಣ ಪರಿಶ್ರಮವೇ ನಮಗೆ ಪ್ರೇರಣೆಯಾಗಿದೆ. ಮುಂಬರುವ ದಿನಗಳು ನಿಮ್ಮ ಪಾಲಿಗೆ ಫಲಪ್ರದವಾಗಿರಲಿ ಮತ್ತು ಆ ಮೂಲಕ ದೇಶ ಇನ್ನಷ್ಟು ಉನ್ನತಿಗೇರಲಿ’ ಎಂದು ನಟ ಅರ್ಜುನ್ ಕಪೂರ್ ಅವರು ಪ್ರಧಾನಿ ಮೋದಿ ಅವರಿಗೆ ಶುಭ ಹಾರೈಸಿದ್ದಾರೆ.
Your selfless dedication & hard work towards the country is what inspires all of us !!! Hope you have an amazing year ahead & so does our country through you…Wishing you a very happy birthday @narendramodi ji…


ನಿರ್ದೇಶಕ, ನಿರ್ಮಾಪಕ, ಕರಣ್ ಜೋಹರ್, ನಟ ಅನುಪಮ್ ಖೇರ್, ನಟಿ ಕಂಗನಾ ರಾಣಾವತ್ ಸೇರಿದಂತೆ ಇನ್ನೂ ಹಲವಾರು ಬಾಲಿವುಡ್ ತಾರೆಯರು ಪ್ರಧಾನಿ ಮೋದಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next