Advertisement

ಸನ್ನಿಗೆ ಡ್ರೆಸ್ ತೊಡಿಸಲು ಹರಸಾಹಸ : ವಿಡಿಯೋ ಹಂಚಿಕೊಂಡ ಮೋಹಕ ಚೆಲುವೆ

04:39 PM May 24, 2021 | Team Udayavani |

ಮೋಹಕ ತಾರೆ ಸನ್ನಿ ಲಿಯೋನ್​ ತಮ್ಮ ಇನ್​ಸ್ಟಾಗ್ರಾಂನಲ್ಲಿ ಒಂದು ವಿಡಿಯೋ ಶೇರ್​ ಮಾಡಿದ್ದು, ಅದು ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಅಷ್ಟಕ್ಕೂ ಈ ವಿಡಿಯೋ ಯಾವುದು ಗೊತ್ತಾ ?

Advertisement

ಬಾಲಿವುಡ್ ಬ್ಯೂಟಿ ಸನ್ನಿ ಲಿಯೋನ್ ಸಾಮಾಜಿಕ ಜಾಲತಾಣದಲ್ಲಿ ತುಂಬಾ ಸಕ್ರಿಯವಾಗಿರುತ್ತಾರೆ. ಇನ್ಸ್ಟಾ ಹಾಗೂ ಟ್ವಿಟರ್ ಮೂಲಕ ತಮ್ಮ ಅಭಿಮಾನಿಗಳ ಜೊತೆ ಟಚ್ ಲ್ಲಿ ಇರುತ್ತಾರೆ. ಸದ್ಯ ಸನ್ನಿ ಲಿಯೋನ್ ತಮ್ಮ ಇನ್ಸ್ಟಾದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಸನ್ನಿ ಲಿಯೋನ್ ಗೆ ಬಟ್ಟೆ ತೊಡಿಸಲು ಅವರ ತಂಡ ಹರಸಾಹಸ ಪಟ್ಟಿದೆ.

ಸನ್ನಿ ಲಿಯೋನ್​​ ‘M’ಟಿವಿಯ ಜನಪ್ರಿಯ Splits villa ಶೋಗೆ ನಿರೂಪಕಿಯಾಗಿಯೂ ಕೆಲಸ ಮಾಡುತ್ತಿದ್ದಾರೆ. ಈ ಕಾರ್ಯಕ್ರಮದ ನಿರೂಪಣೆಗಾಗಿ ಸಿದ್ಧರಾಗುತ್ತಿದ್ದಾಗ ಅವರಿಗೆ ಡ್ರೆಸ್​ ತೊಡಲು ತುಂಬಾ ಕಷ್ಟಪಟ್ಟಿದ್ದಾರೆ. ಆ ಕಾರ್ಯಕ್ರಮಕ್ಕೆಂದು ವಿನ್ಯಾಸ ಮಾಡಲಾಗಿದ್ದ ಡ್ರೆಸ್​ ತೊಡಲು ಸನ್ನಿ ಅವರಿಗೆ ತುಂಬಾ ಕಷ್ಟವಾಗಿದೆ. ಅದಕ್ಕೆ ಸಹಾಯಕ್ಕಾಗಿ ಅವರ ತಂಡವೂ ಬಂದಿದೆ. ಸರಿಯಾಗಿ ಆ ಡ್ರೆಸ್​ ಫಿಟ್​ ಆಗಿ ಎಂದು ಸನ್ನಿ ಲಿಯೋನ್​ ಅವರ ಡ್ರೆಸ್ಸಿಂಗ್​ ಟೀಮ್​ ಪಡುವ ಪಾಡು ಈ ವಿಡಿಯೋದಲ್ಲಿದೆ.

ಇನ್ನು ಸನ್ನಿ ಲಿಯೋನ್ ಬಿಗ್ ಬಾಸ್ ಮೂಲಕ ಹಿಂದಿ ಚಿತ್ರರಂಗಕ್ಕೆ ಕಾಲಿಟ್ಟರು. ನಂತರ ಐಟಂ ಸಾಂಗ್ ಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ತಮ್ಮ ವರ್ಚಸ್ಸು ಹೆಚ್ಚಿಸಿಕೊಂಡರು. ನಂತರ ಬಾಲಿವುಡ್ ಸಿನಿಮಾಗಳಲ್ಲಿ ನಾಯಕಿಯಾಗಿ ಅಭಿನಯಿಸುವ ಮೂಲಕ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ.

 

View this post on Instagram
Advertisement

 

A post shared by Sunny Leone (@sunnyleone)

Advertisement

Udayavani is now on Telegram. Click here to join our channel and stay updated with the latest news.

Next