Advertisement

ಬಾಕ್ಸ್ ಆಫೀಸಿನಲ್ಲಿ ಛಪಾಕ್ – ತಾನಾಜಿ ಫೈಟ್ ; ಇಲ್ಲಿದೆ ಕಲೆಕ್ಷನ್ ರಿಪೋರ್ಟ್!

09:59 AM Jan 13, 2020 | Hari Prasad |

ಮುಂಬಯಿ: ಒಂದು ಸಾಮಾಜಿಕ ಸಮಸ್ಯೆಯನ್ನು ಆಧಾರವಾಗಿಟ್ಟುಕೊಂಡು ನೈಜ ಘಟನೆಯಿಂದ ಪ್ರೇರಿತವಾಗಿ ತಯಾರಾಗಿರುವ ಚಿತ್ರ ಇನ್ನೊಂದು ಐತಿಹಾಸಿಕ ಘಟನೆಯ ಆಧಾರದಲ್ಲಿ ಸಿದ್ಧಗೊಂಡಿರುವ ಚಿತ್ರ. ವಿಶೇಷವೆಂದರೆ ಈ ಎರಡೂ ಬಾಲಿವುಡ್ ಚಿತ್ರಗಳೂ ಸಹ ಒಂದೇ ದಿನ ದೇಶಾದ್ಯಂತ ಬಿಡುಗಡೆಗೊಂಡಿದೆ. ಇವೇ ದೀಪಿಕಾ ಪಡುಕೋಣೆ ಮುಖ್ಯ ಪಾತ್ರದಲ್ಲಿ ನಟಿಸಿರುವ ‘ಛಪಾಕ್’ ಮತ್ತು ಅಜಯ್ ದೇವಗನ್, ಸೈಫ್ ಆಲಿಖಾನ್, ಕಾಜೊಲ್ ಮುಖ್ಯ ಭೂಮಿಕೆಯಲ್ಲಿರುವ ‘ತಾನಾಜಿ – ದಿ ಅನ್ ಸಂಗ್ ವಾರಿಯರ್’ ಚಿತ್ರಗಳು.

Advertisement

ಜನವರಿ 10ರಂದು ಬಿಡುಗಡೆಗೊಂಡಿರುವ ಈ ಎರಡೂ ಚಿತ್ರಗಳು ಇದೀಗ ಬಾಕ್ಸ್ ಆಫೀಸ್ ಕಲೆಕ್ಷನ್ ನಲ್ಲಿ ಪೈಪೋಟಿಗೆ ಬಿದ್ದಿವೆ. ಮೆಟ್ರೋ ನಗರಗಳು, ಮಾಸ್ ವಿಕ್ಷಕ ಪ್ರದೇಶಗಳಲ್ಲಿ ಮತ್ತು ಸಿಂಗಲ್ ಸ್ಕ್ರೀನ್ ಗಳಲ್ಲಿ ‘ತಾನಾಜಿ’ಯ ಆರ್ಭಟವೇ ಜೋರಾಗಿದೆ. ಮಹಾರಾಷ್ಟ್ರದಲ್ಲಂತೂ ‘ತಾನಾಜಿ’ ಎಲ್ಲಾ ದಾಖಲೆಗಳನ್ನು ಪುಡಿಗಟ್ಟಿ ಮುನ್ನುಗ್ಗುತ್ತಿದೆ ಎಂದು ಖ್ಯಾತ ಚಿತ್ರ ವಿಮರ್ಶಕ ಮತ್ತು ಉದ್ಯಮ ವಿಶ್ಲೇಷಕ ತರಣ್ ಆದರ್ಶ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಬಾಕ್ಸ್ ಆಫೀಸ್ ಕಲೆಕ್ಷನ್ ವಿವರಗಳನ್ನು ಪ್ರಕಟಿಸಿದ್ದಾರೆ.
#Tanhaji roars on Day 2… Metros *and* mass belt, multiplexes *and* single screens, #Tanhaji is simply remarkable… #Maharashtra is record-smashing… Other circuits – decent on Day 1 – join the celebrations on Day 2… Fri 15.10 cr, Sat 20.57 cr. Total: ₹ 35.67 cr. #India biz


ಅಜಯ್ ದೇವಗನ್ ಅವರ ನೂರನೇ ಚಿತ್ರವಾಗಿ ತೆರೆಗೆ ಅಪ್ಪಳಿಸಿರುವ ‘ತಾನಾಜಿ’ ಬಿಡುಗಡೆಗೊಂಡ ಮೊದಲ ದಿನ 15.10 ಕೋಟಿ ಕಲೆಕ್ಷನ್ ಮಾಡಿದ್ದರೆ ಶನಿವಾರ 20.57 ಕೋಟಿ ಗಳಿಸುವ ಮೂಲಕ ಕೇವಲ ಎರಡು ದಿನದಲ್ಲಿ 35.67 ಕೋಟಿ ಗಳಿಸಿದೆ.

ಇನ್ನೊಂದೆಡೆ ಆ್ಯಸಿಡ್ ಸಂತ್ರಸ್ತರ ಕಥಾ ಹಿನ್ನಲೆಯನ್ನು ಹೊಂದಿರುವ ದೀಪಿಕಾ ಪಡುಕೋಣೆ ಅಭಿನಯದ ‘ಛಪಾಕ್’ ಬಿಡುಗಡೆಯಾದ ಶುಕ್ರವಾರದಂದು ಕೇವಲ 4.77 ಕೋಟಿ ಕಲೆಕ್ಷನ್ ಮಾಡಿತ್ತು ಆದರೆ ಶನಿವಾರದಂದು ಈ ಚಿತ್ರ ಕಲೆಕ್ಷನ್ ನಲ್ಲಿ ಸ್ವಲ್ಪ ಏರುಗತಿಯನ್ನು ತೋರಿದೆ ಎರಡನೇ ದಿನದ ಕಲೆಕ್ಷನ್ 6.90 ಕೋಟಿ ರೂಪಾಯಿಗಳಾಗಿತ್ತು. ಮತ್ತು ಎರಡು ದಿನಗಳಲ್ಲಿ ಈ ಚಿತ್ರ ಒಟ್ಟು 11.67 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆ.
#Chhapaak witnesses an upward trend on Day 2, but the 2-day total is underwhelming… Decent at premium multiplexes, but unable to connect *and* collect beyond metros… Needs to cover lost ground on Day 3… Fri 4.77 cr, Sat 6.90 cr. Total: ₹ 11.67 cr. #India biz.


ನಟಿ ದೀಪಿಕಾ ಪಡುಕೋಣೆ ಜೆ.ಎನ್.ಯು. ಕ್ಯಾಂಪಸ್ ಗೆ ಭೇಟಿ ನೀಡಿ ಅಲ್ಲಿ ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಜೊತೆ ಗುರುತಿಸಿಕೊಂಡಿದ್ದು ಬಲಪಂಥೀಯ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಮತ್ತು ದೇಶದ್ರೋಹಿಗಳ ಪ್ರತಿಭಟನೆಗೆ ಬೆಂಬಲ ಸೂಚಿಸಿದ ದೀಪಿಕಾ ಅವರ ಛಪಾಕ್ ಚಿತ್ರವನ್ನು ಬಹಿಷ್ಕರಿಸಬೇಕೆಂದು ಹಲವಾರು ಬಲಪಂಥೀಯ ಸಂಘಟನೆಗಳು ಹಾಗೂ ನಾಯಕರು ಬಹಿರಂಗ ಕರೆ ನೀಡಿದ್ದರು.

Advertisement

ಆದರೆ ಸಾಮಾಜಿಕ ಕಳಕಳಿಯ ಕಥಾಹಂದರವನ್ನು ಹೊಂದಿರುವ ಈ ಚಿತ್ರವನ್ನು ಬಹಿಷ್ಕರಿಸುವ ಕರೆ ನೀಡದಂತೆ ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಅವರು ಮನವಿ ಮಾಡಿಕೊಂಡಿದ್ದರು.

ಮೇಘಾ ಗುಲ್ಜಾರ್ ಅವರು ‘ಛಪಾಕ್’ ಚಿತ್ರವನ್ನು ನಿರ್ದೇಶನ ಮಾಡಿದ್ದರೆ ಓಂ ರಾವುತ್ ಅವರು ‘ತಾನಾಜಿ’ ಚಿತ್ರವನ್ನು ನಿರ್ದೇಶಿಸಿದ್ದಾರೆ. ಛಪಾಕ್ ಚಿತ್ರದ ಮೂಲಕ ದೀಪಿಕಾ ಅವರು ನಿರ್ಮಾಪಕಿಯಾಗಿಯೂ ತಮ್ಮ ವೃತ್ತಿ ಜೀವನದಲ್ಲಿ ಹೊಸ ಇನ್ನಿಂಗ್ಸ್ ಅನ್ನು ಪ್ರಾರಂಭಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next