Advertisement

ಕಿಕ್ಕೇರಿಗೆ ಬೆಳಕು ತಂದ ಆಲಿಯಾ ಭಟ್‌ ಉಡುಪು

07:00 AM Jul 15, 2018 | Team Udayavani |

ಮಂಡ್ಯ: ಜಿಲ್ಲೆಯ ಕಿಕ್ಕೇರಿ ಗ್ರಾಮದ ಮನೆಗಳಿಗೆ ಸೌರದೀಪ ಒದಗಿಸುವ ಮೂಲಕ ಬಾಲಿವುಡ್‌ ನಟಿ ಆಲಿಯಾ ಭಟ್‌ ಗಮನ ಸೆಳೆದಿದ್ದಾರೆ.

Advertisement

ಈ ವರ್ಷ ಆರಂಭಗೊಂಡ ಮಿವಾರ್ಡ್‌ರೋಬ್‌ ಈಸ್‌ ಸು ವಾರ್ಡ್‌ ರೋಬ್‌ ಸ್ಟೈಲಾðಕರ್‌ ನೈಟ್‌ ಮಾರ್ಕೆಟ್‌ ಅಭಿಯಾನದಲ್ಲಿ ಅಲಿಯಾಭಟ್‌ ತಮ್ಮ ವಿಶೇಷ ಉಡುಪೊಂದನ್ನು ಮಾರಾಟಕ್ಕೆ ಇಟ್ಟಿದ್ದರು. ಇದರಿಂದ ಬಂದ ಹಣವನ್ನು ಬೆಂಗಳೂರು ಮೂಲದ ಎಆರ್‌ಒಎಚ್‌ಒ ಸಂಸ್ಥೆಯೊಂದು ಆಯೋಜಿಸಿದ್ದ ಲಿಟರ್‌ ದ ಲೈಟರ್‌ ಕಾರ್ಯಕ್ರಮದಲ್ಲಿ ತೊಡಗಿಸಿದ್ದಾರೆ. 

ಈ ಸಂಸ್ಥೆ ಪ್ಲಾಸ್ಟಿಕ್‌ ಬಾಟಲ್‌ಗ‌ಳನ್ನು ಮರು ಬಳಕೆ ಮಾಡಿ ವಿದ್ಯುತ್‌ ಇಲ್ಲದ ಗ್ರಾಮಗಳಿಗೆ ಸೋಲಾರ್‌ ದೀಪ ವಿತರಿಸುತ್ತಿದೆ. ಸಂಸ್ಥೆಯು ತಾನು ನಡೆಸುವ ಲಿಟರ್‌ ದ ಲೈಟರ್‌ ಕಾರ್ಯಕ್ರಮಕ್ಕೆ ಚಾರಿಟಿಯಾಗುವಂತೆ ಆಲಿಯಾ ಭಟ್‌ಗೆ ಆಹ್ವಾನಿಸಿತ್ತು. ಇದಕ್ಕೆ ಸಮ್ಮತಿಸಿದ ಆಲಿಯಾ, ಗ್ರಾಮದ 40 ಕುಟುಂಬಗಳಿಗೆ ಈ ಸಂಸ್ಥೆ ಸೋಲಾರ್‌ ದೀಪ ಒದಗಿಸಿದ್ದಾರೆ. ಭಾರತದಲ್ಲಿ ಇಂದಿಗೂ ಅನೇಕ  ಹಳ್ಳಿಗಳಲ್ಲಿ ವಿದ್ಯುತ್‌ ಸಂಪರ್ಕವಿಲ್ಲ. ಇಂಥ ಕುಟುಂಬಗಳ ಮನೆ ಬೆಳಗಲು ಇದು ಉತ್ತಮ ಯೋಜನೆಯಾಗಿದೆ. ಇದೊಂದು ಪರಿಸರ ಸ್ನೇಹಿ ಯೋಜನೆಯಾಗಿದ್ದು, ಕಿಕ್ಕೇರಿಯ 200 ಜನರಿಗೆ ಈ ಯೋಜನೆ ಫಲ ಲಭಿಸಲಿದೆ ಎಂದು ಆಲಿಯಾ ಭಟ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next