Advertisement

ನಿರುದ್ಯೋಗಿಗಳಿಗೆ ಇ-ರಿಕ್ಷಾ ವಿತರಣೆ…ಸಂಕಷ್ಟದಲ್ಲಿದ್ದವರ ಕೈ ಹಿಡಿದ ಸೋನು

07:48 PM Feb 15, 2021 | Team Udayavani |

ಮುಂಬೈ : ಕೋವಿಡ್ ಹಿನ್ನೆಲೆ ದೇಶದಲ್ಲಿ ಜಾರಿಯಲ್ಲಿದ್ದ ಲಾಕ್ ಡೌನ್ ವೇಳೆ ಸಂಕಷ್ಟಕ್ಕೆ ಸಿಲುಕಿದ್ದ ನೂರಾರು ಕಾರ್ಮಿಕರಿಗೆ ತಮ್ಮ ಮನೆಗಳಿಗೆ ತಲುಪಲು ಸಹಾಯ ಮಾಡಿ, ರಿಯಲ್ ಹೀರೋ ಆಗಿದ್ದ ನಟ ಸೋನು ಸೂದ್ ಈಗ ಮತ್ತೊಂದು ಜನಪರ ಕಾರ್ಯಕ್ಕೆ ಕೈ ಹಾಕಿದ್ದಾರೆ.

Advertisement

ದೇಶದಲ್ಲಿ ತಾಂಡವವಾಡುತ್ತಿರುವ ನಿರುದ್ಯೋಗ ಸಮಸ್ಯೆ ನಿವಾರಿಸಲು ಪಣ ತೊಟ್ಟಿರುವ ಸೋನು ಸೂದ್, ಸಂಕಷ್ಟದಲ್ಲಿರುವವರಿಗೆ ಇ-ರಿಕ್ಷಾ( ಸೌರ ವಿದ್ಯುತ್ ಚಾಲಿತ) ನೀಡುತ್ತಿದ್ದಾರೆ. ಈಗಾಗಲೇ ತಮ್ಮ ಊರು ಪಂಜಾಬ್ ನ ಮೊಗಾ ಗ್ರಾಮದಲ್ಲಿ 100 ಇ-ರಿಕ್ಷಾಗಳನ್ನು ವಿತರಿಸಿದ್ದಾರೆ.

ತಮ್ಮಈ ಮಹತ್ಕಾರ್ಯದ ಹಿಂದಿರುವ ಉದ್ದೇಶದ ಬಗ್ಗೆ ಮಾತಾಡಿರುವ ಸೋನು, ಕೋವಿಡ್ ಪಿಡುಗು ಸಾಕಷ್ಟು ಜನರನ್ನು ಸಂಕಷ್ಟಕ್ಕೆ ಸಿಲುಕಿಸಿತು. ಕೋವಿಡ್ ನಂತರದ ದಿನಗಳಲ್ಲಿ ನೂರಾರು ಜನರು ನಿರುದ್ಯೋಗಿಗಳಾದರು. ಒಂದು ಹೊತ್ತಿನ ಊಟಕ್ಕೂ ಕಷ್ಟ ಪಡುವಂತಾಯಿತು. ಇಂತಹ ಜನರನ್ನು ಗುರುತಿಸಿ ಅವರನ್ನು ಸ್ವಾವಲಂಬಿಯನ್ನಾಗಿ ಮಾಡುವ ನಿಟ್ಟಿನಲ್ಲಿ ಒಂದು ಸಣ್ಣ ಕಾರ್ಯ ಕೈಗೊಂಡಿದ್ದೇನೆ ಎಂದಿದ್ದಾರೆ.

ಇನ್ನು ಕೇವಲ ಪಂಜಾಬ್ ಮಾತ್ರವಲ್ಲದೆ ಉತ್ತರ ಪ್ರದೇಶ, ಬಿಹಾರ್, ಜಾರ್ಖಂಡ್ ಹೀಗೆ ದೇಶದ ವಿವಿಧ ಮೂಲೆಗಳಲ್ಲಿರುವ ಬಡವರಿಗೆ ಹಾಗೂ ಸ್ವಂತ ದುಡಿಮೆ ಮಾಡಬಯಸುವವರಿಗೆ ಇ-ರಿಕ್ಷಾ ನೀಡುವುದಾಗಿ ಸೋನು ಸೂದ್ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next