ಮುಂಬೈ: ಬಾಲಿವುಡ್ ನ ಖ್ಯಾತ ನಟ ಗೋವಿಂದ ಅವರಿಗೆ ಕೋವಿಡ್ 19 ಸೋಂಕು ತಾಗಿರುವುದು ಇಂದು ದೃಢವಾಗಿದೆ. ಗೋವಿಂದ ಅವರಿಗೆ ಕೆಲ ರೋಗ ಲಕ್ಷಣಗಳು ಕಂಡುಬಂದಿದೆ. ಅವರು ಸದ್ಯ ಮನೆಯಲ್ಲಿಯೇ ಕ್ವಾರಂಟೈನ್ ನಲ್ಲಿ ಇದ್ದಾರೆ ಎಂದು ಪತ್ನಿ ಸುನಿತಾ ಹೇಳಿದ್ದಾರೆ.
ಕುಟುಂಬದ ಇತರೆ ಸದಸ್ಯರ ಕೋವಿಡ್ ಪರೀಕ್ಷೆ ಮಾಡಲಾಗಿದ್ದು, ಎಲ್ಲರ ವರದಿ ನೆಗೆಟಿವ್ ಆಗಿದೆ.
ಇದನ್ನೂ ಓದಿ:‘ದಿಯಾ’ ಅಲ್ಲ, ಇದು ‘ರಿಯಾ’: ಟೀಚರ್ ಈಗ ಡೈರೆಕ್ಟರ್
ಗೋವಿಂದ ಅವರ ವಕ್ತಾರ ಈ ವಿಚಾರವನ್ನು ಸ್ಪಷ್ಟಪಡಿಸಿದ್ದು, ಸಾಕಷ್ಟು ಮುಂಜಾಗೃತಾ ಕ್ರಮಗಳನ್ನು ಪಾಲಿಸಿದರೂ ದುರಾದೃಷ್ಟವಶಾತ್ ಗೋವಿಂದ ಅಹುಜಾ ಅವರಿಗೆ ಕೋವಿಡ್ ಪಾಸಿಟಿವ್ ಆಗಿದೆ ಎಂದಿದ್ದಾರೆ.
ಕೆಲ ದಿನಗಳ ಹಿಂದೆ ಗೋವಿಂದ ಅವರ ಪತ್ನಿ ಸುನಿತಾ ಅವರಿಗೂ ಕೋವಿಡ್ ಪಾಸಿಟಿವ್ ಆಗಿತ್ತು.
ಇದನ್ನೂ ಓದಿ: ಇದ್ದಕ್ಕಿದ್ದಂತೆ ಬಸ್ ಒಳಗಡೆ ಎಂಟ್ರಿ ಕೊಟ್ಟ ಜಿಂಕೆ : ಸಿಸಿಟಿವಿಯಲ್ಲಿ ಸೆರೆಯಾಯ್ತು ವಿಡಿಯೋ!
ಅಕ್ಷಯ್ ಕುಮಾರ್ ಗೆ ಪಾಸಿಟಿವ್: ಪ್ರಖ್ಯಾತ ನಟ ಅಕ್ಷಯ್ ಕುಮಾರ್ ಅವರಿಗೆ ಇಂದು ಕೋವಿಡ್ ಸೋಂಕು ತಾಗಿರುವುದು ಧೃಢವಾಗಿದೆ. ಸ್ವತಃ ಅಕ್ಷಯ್ ಕುಮಾರ್ ತಮ್ಮ ಇನ್ಸ್ಟಾ ಗ್ರಾಮ್ ಮೂಲಕ ಈ ವಿಚಾರವನ್ನು ಖಚಿತ ಪಡಿಸಿದ್ದಾರೆ.