Advertisement

Boliyar Incident:ಬಿಜೆಪಿಯಿಂದ ಶಾಂತಿ ಕದಡುವ ಕೆಲಸ: ಮಂಜುನಾಥ ಭಂಡಾರಿ

12:49 AM Jun 15, 2024 | Team Udayavani |

ಮಂಗಳೂರು: ಬೋಳಿಯಾರುವಿನಲ್ಲಿ ನಡೆದ ಘಟನೆಯು ಬಿಜೆಪಿಯವರ ಪೂರ್ವಯೋಜಿತ ಕೃತ್ಯ.

Advertisement

ಬಿಜೆಪಿಯು ವಿಜಯೋತ್ಸವ ವನ್ನು ಧಾರ್ಮಿಕ ಕೇಂದ್ರದ ಬಳಿ ಪದೇ ಪದೇ ಘೋಷಣೆ ಹಾಕುವ ಮೂಲಕ ಆಚರಿಸಿ ಜಿಲ್ಲೆಯಲ್ಲಿ ಶಾಂತಿ ಕದಡುವ ಕೆಲಸ ಮಾಡಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಆರೋಪಿಸಿದ್ದಾರೆ.

ಪಕ್ಷದ ಕಚೇರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಘಟನೆಗೆ ಸಂಬಂಧಿಸಿ ನಿಷ್ಪಕ್ಷಪಾತ ತನಿಖೆಯಾಗಬೇಕು. ಬಿಜೆಪಿಯವರಿಗೆ ಜಿಲ್ಲೆಯಲ್ಲಿ ಶಾಂತಿ ನೆಲೆಗೊಳ್ಳುವುದು ಬೇಡವೇ? ಜಿಲ್ಲೆಯನ್ನು ಪ್ರಯೋಗ ಶಾಲೆ ಮಾಡುತೀರಾ? ಪ್ರಚೋದನಾಕಾರಿ ಹೇಳಿಕೆಗಳನ್ನು ನಿಲ್ಲಿಸಿ. ಮಂಗಳೂರನ್ನು ಉತ್ತಮ ನಗರ ಮಾಡಲು ಪ್ರಯತ್ನಿಸಿ ಎಂದರು.

ಕೆಪಿಸಿಸಿ ಪ್ರಧಾನ ಕಾರ್ಯ ದರ್ಶಿ ಪದ್ಮರಾಜ್‌ ಆರ್‌. ಮಾತನಾಡಿ, ಬಿಜೆಪಿಯವರಿಗೆ ಜಿಲ್ಲೆಯ ಅಭಿವೃದ್ಧಿ ಬೇಕಿಲ್ಲ. ಬೋಳಿಯಾರು ಘಟನೆ ಹಿಂದಿರುವ ಬಿಜೆಪಿ ತಂತ್ರಗಾರಿಕೆ ಜನಸಾಮಾನ್ಯರಿಗೆ ಅರ್ಥವಾಗಿದೆ ಎಂದರು.

ಜಿಲ್ಲಾಧ್ಯಕ್ಷರ ರಾಜೀನಾಮೆ ಸ್ವೀಕರಿಸಿಲ್ಲ
ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಹರೀಶ್‌ ಕುಮಾರ್‌ 2023ರ ವಿಧಾನಸಭಾ ಚುನಾವಣೆಗೆ ಮುನ್ನವೇ ಕೆಪಿಸಿಸಿ ಅಧ್ಯಕ್ಷರಿಗೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರೂ ಹೈಕಮಾಂಡ್‌ ಸ್ವೀಕರಿಸಿಲ್ಲ. ಡಿಕೆಶಿ ಅವರು ಹರೀಶ್‌ ಕುಮಾರ್‌ ಅವರಿಗೆ ಚುನಾವಣೆ ತನಕ ಮುಂದುವರಿಯಲು ಹೇಳಿದ್ದರು. ಇದಾದ ಬಳಿಕ ಲೋಕಸಭಾ ಚುನಾವಣೆ ಮುನ್ನ ಸ್ವತಃ ನನಗೆ ರಾಜೀನಾಮೆ ನೀಡಿದ್ದರು. ಆದರೆ ಚುನಾವಣೆ ನಿಭಾವಣೆಗೆ ಅನುಭವವಿರುವವರೇ ಬೇಕು ಎನ್ನುವ ಕಾರಣ ಮುಂದುವರಿಯಲು ಹೈಕಮಾಂಡ್‌ ಹೇಳಿತ್ತು ಎಂದು ಮಂಜುನಾಥ ಭಂಡಾರಿ ಅವರು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

Advertisement

ಪ್ರಾರ್ಥನಾ ಮಂದಿರಗಳಲ್ಲಿ ಶಸ್ತ್ರಾಸ್ತ್ರಗಳಿವೆ ಎಂದು ಆರೋಪಿಸಿರುವ ಶಾಸಕ ಶಾಸಕ ಹರೀಶ್‌ ಪೂಂಜ ಅವರು ಅದನ್ನು ಸಾಬೀತುಪಡಿಸಲಿ ಅಥವಾ ಸಾರ್ವಜನಿಕವಾಗಿ ಕ್ಷಮೆ ಕೇಳಲಿ ಎಂದು ಜಿಲ್ಲಾ ಕಾಂಗ್ರೆಸ್‌ ಅಲ್ಪಸಂಖ್ಯಾಕ ಘಟಕ ಅಧ್ಯಕ್ಷ ಶಾಹುಲ್‌ ಹಮೀದ್‌ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷ ಮಮತಾ ಗಟ್ಟಿ, ಜಿಲ್ಲಾ ಕಾಂಗ್ರೆಸ್‌ ಮಹಿಳಾ ಅಧ್ಯಕ್ಷೆ ಶಾಲೆಟ್‌ ಪಿಂಟೋ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next