Advertisement

ನಿರ್ವಹಣೆಯಿಲ್ಲದೆ ಸೊರಗುತ್ತಿದೆ ಬೋಳಾರದ ಪಾರ್ಕ್‌

01:23 AM Feb 24, 2020 | Sriram |

 ವಿಶೇಷ ವರದಿಮಹಾನಗರ: ನೇತ್ರಾವತಿಯ ಹಿನ್ನೀರಿನ ಸೊಬಗನ್ನು ಸವಿಯುವ ಹಿನ್ನೆಲೆಯಲ್ಲಿ ಬೋಳಾರದಲ್ಲಿ ನಿರ್ಮಾಣ ಮಾಡಲಾದ ಮಹಾನಗರ ಪಾಲಿಕೆಯ ಸಣ್ಣ ಪಾರ್ಕ್‌ ಸದ್ಯ ನಿರ್ವಹಣೆ ಇಲ್ಲದೆ ಸೊರಗಿದೆ.

Advertisement

ಪಾಲಿಕೆ ಲಕ್ಷಾಂತರ ರೂ. ವೆಚ್ಚ ಮಾಡಿ ಪಾರ್ಕ್‌ಗಳನ್ನು ಅಭಿವೃದ್ಧಿ ಮಾಡುತ್ತಿದೆಯಾದರೂ ಅದರ ನಿರ್ವಹಣೆ ಸಮರ್ಪಕವಾಗಿ ನಡೆಸದ ಕಾರಣ ವರ್ಷದೊಳಗೆ ಆ ಪಾರ್ಕ್‌ಗಳು ಕಳೆಗುಂದುತ್ತವೆ ಎಂಬ ಆರೋಪಗಳು ಸಾಮಾನ್ಯವಾಗಿ ಕೇಳಿಬರುತ್ತವೆ. ಇದಕ್ಕೆ ನಿದರ್ಶನವೆಂಬಂತೆ 2017ರಲ್ಲಿ ನಿರ್ಮಾಣವಾದ ಬೋಳಾರದ ಪಾರ್ಕ್‌ ಸದ್ಯ ನಿರ್ವಹಣ ವ್ಯವಸ್ಥೆ ಸಮರ್ಪಕವಾಗಿಲ್ಲದೆ ಬಿಕೋ ಎನ್ನುತ್ತಿದೆ. ಹೂವು, ಅಲಂಕಾರಿಕ ಗಿಡವಿದ್ದರೂ ನಿಯಮಿತವಾಗಿ ಅದರ ನಿರ್ವಹಣೆ ಆಗದೆ ಪಾರ್ಕ್‌ನ ಕಳೆ ಗೌಣವಾಗಿದೆ.

2017 ಫೆ. 27ರಂದು ಅಂದಿನ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರು ಈ ಪಾರ್ಕ್‌ ಉದ್ಘಾಟಿಸಿದ್ದರು. ನದಿ ವೀಕ್ಷಣೆಗೆ ಹಲವಾರು ಮಂದಿ ಇಲ್ಲಿ ಬರುತ್ತಿದ್ದಾರೆ. ಮದುವೆಯ ಫೋಟೋ ಶೂಟ್‌ಗೆ ಕೆಲವು ಛಾಯಾಗ್ರಾಹಕರು ಈ ಸ್ಥಳದಲ್ಲಿ ಚಿತ್ರೀಕರಣ ನಡೆಸುತ್ತಾರೆ. ಮುಂಜಾನೆ ವಾಕಿಂಗ್‌ ಹಾಗೂ ಸಂಜೆ ವಿಶ್ರಾಂತಿಗಾಗಿ ಹಲವು ಮಂದಿ ಇಲ್ಲಿಗೆ ಆಗಮಿಸುತ್ತಾರೆ. ಶೌಚಾಲಯ ಸಹಿತ ಎಲ್ಲ ವ್ಯವಸ್ಥೆಗಳನ್ನು ಇಲ್ಲಿ ಕಲ್ಪಿಸಲಾಗಿತ್ತು. ಆದರೆ ಸದ್ಯ ನಿರ್ವಹಣೆ ಕೊರತೆಯೇ ಇಲ್ಲಿ ಕಾಡುತ್ತಿದೆ.ಕಾಲ್ನಡಿಗೆ ಪಥ, ಕುಳಿತು ಕೊಳ್ಳಲು ನಾಲ್ಕೈದು ಕಲ್ಲು ಬೆಂಚು, ಧ್ವಜಸ್ತಂಭ ಇದರೊಳಗಿದೆ. ಹೂವಿನ ಹಾಗೂ ಅಲಂಕಾರಿಕ ಗಿಡಗಳಿವೆ. ಪಾರ್ಕ್‌ ಸುತ್ತ ಗೇಟ್‌ ಅಳವಡಿಸಿ, ಸುತ್ತಲೂ ನದಿ ವೀಕ್ಷಣೆಗೆ ಅನುಕೂಲವಾಗುವಂತೆ ಹಾಗೂ ಮುಂಜಾಗ್ರತಾ ಕ್ರಮವಾಗಿ ತಡೆ ಬೇಲಿ ಅಳವಡಿಸಲಾಗಿದೆ.

ಸೊರಗಿ ಹೋಗುತ್ತಿದೆ
“ನಗರ ಬೆಳೆಯುತ್ತಿದ್ದಂತೆ ಸುಂದರವಾದ ಪಾರ್ಕ್‌ಗಳೇ ನಗರ ಜೀವನಕ್ಕೆ ಹೆಚ್ಚು ಅಪ್ಯಾಯಮಾನವಾಗುತ್ತದೆ. ಪಾರ್ಕ್‌ಗಳಲ್ಲಿ ಮುಂಜಾನೆ-ಸಂಜೆ ವಿಹಾರ, ವಿಶ್ರಾಂತಿ ಪಡೆಯಲು ನಗರ ಜನತೆ ಬಯಸುತ್ತಾರೆ.

ಬೆಂಗಳೂರಿನಲ್ಲಿ ಈ ಸಂಬಂಧ ವಾರ್ಡ್‌ಗೆ ಒಂದರಂತೆ ದೊಡ್ಡ ಮಟ್ಟದ ಪಾರ್ಕ್‌ಗಳೇ ಇವೆ. ಆದರೆ ಮಂಗಳೂರಿನಲ್ಲಿ ಇಂತಹ ಪರಿಸ್ಥಿತಿ ಇಲ್ಲ. ಕದ್ರಿ ಪಾರ್ಕ್‌ ಹೊರತುಪಡಿಸಿ ಬೃಹತ್‌ ಪಾರ್ಕ್‌ ನಗರದಲ್ಲಿಲ್ಲ.

Advertisement

ಉಳಿದಂತೆ ಇರುವ ಬೆರ ಳೆಣಿಕೆ ಪಾರ್ಕ್‌ಗಳಲ್ಲಿ ಜನಜಾತ್ರೆಯೇ ಇದೆ. ಆದರೆ ನಗರದೊಳಗೆ ಇರುವ ಕೆಲ ವೊಂದು ಸಣ್ಣಪುಟ್ಟ ಪಾರ್ಕ್‌ಗಳು ಮಾತ್ರ ನಿರ್ವಹಣೆಯನ್ನೇ ಕಾಣದೆ ಸೊರಗಿ ಹೋಗುತ್ತಿದ್ದರೂ ಸಂಬಂಧಪಟ್ಟವರು ಗಮನ ಹರಿಸದಿರುವುದುಬೇಸರ ತರಿ ಸುತ್ತಿದೆ’ ಎನ್ನುತ್ತಾರೆ ಸ್ಥಳೀಯರೋರ್ವರು.

ಪರಿಶೀಲಿಸಿ ಕ್ರಮ
ಬೋಳಾರ ರಿವರ್‌ ವಿವ್ಯೂ ಪಾರ್ಕ್‌ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ಸದ್ಯ ನಿರ್ವಹಣೆ ಸಮಸ್ಯೆ ಇರುವ ಕಾರಣದಿಂದ ಆ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
 - ಶಾನಾಡಿ ಅಜಿತ್‌ ಕುಮಾರ್‌ ಹೆಗ್ಡೆ, ಆಯುಕ್ತರು, ಮನಪಾ

Advertisement

Udayavani is now on Telegram. Click here to join our channel and stay updated with the latest news.

Next