Advertisement
ಡೀಮ್ಡ್ ಫಾರೆಸ್ಟ್ ಗುಮ್ಮಬೋಳ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 1235 ಕುಟುಂಬಳಿದ್ದು ಅವುಗಳ ಪೈಕಿ 62 ಪರಿಶಿಷ್ಟ ಜಾತಿಯ ಕುಟುಂಬಗಳಾದರೆ 11 ಕುಟುಂಬಗಳು ಪರಿಶಿಷ್ಟ ಪಂಗಡ (ಕೊರಗ ಕುಟುಂಬ). ಈ 11 ಕುಟುಂಬಗಳ ಪೈಕಿ ನಾಲ್ಕು ಕುಟುಂಬಕ್ಕೆ ಈ ಹಿಂದೆ ಹಕ್ಕು ಪತ್ರ ದೊರೆತಿದ್ದರೆ, 7 ಕುಟುಂಬಕ್ಕೆ ಸಿಕ್ಕಿಲ್ಲ. ಈ ಹಿಂದೆ ಕಂದಾಯ ಇಲಾಖೆ ಸರ್ವೇ ಮಾಡಿಕೊಟ್ಟ ಜಾಗ ಡೀಮ್ಡ್ ಫಾರೆಸ್ಟ್ ಅಡಿಯಲ್ಲಿ ಬರುತ್ತದೆ ಎನ್ನಲಾಗಿದೆ.
7 ಕುಟುಂಬಗಳಲ್ಲಿ ಮೂವರು ಪಡಿತರ, ಆಧಾರ್, ಚುನಾವಣ ಗುರುತಿನ ಚೀಟಿ ಹೊಂದಿಲ್ಲ. ಉಳಿದೆಲ್ಲರೂ ಇವುಗಳನ್ನು ಹೊಂದಿದ್ದಾರೆ. ಏಳೂ ಕುಟುಂಬಗಳು ನಿರಂತರ ಹಕ್ಕುಪತ್ರಕ್ಕಾಗಿ ಸರಕಾರಿ ಕಚೇರಿಗಳನ್ನು ಅಲೆದಿದ್ದರೂ ಡೀಮ್ಡ್ ಫಾರೆಸ್ಟ್ ಕಾರಣ ಹೇಳಲಾಗಿದೆ. ಆದರೆ ಗೊಂದಲ ಪರಿಹರಿಸುವ ಯತ್ನ ಆಗಿಲ್ಲ. ತಹಶೀಲ್ದಾರ್ ಕೊಟ್ಟ ಹಕ್ಕು ಪತ್ರ ಡಮ್ಮಿ!
ಈಗಾಗಲೇ 4 ಕುಟುಂಬಗಳಿಗೆ ಈ ಹಿಂದಿನ ತಹಶೀಲ್ದಾರ್‌ಮಾನವೀಯ ನೆಲೆಯಲ್ಲಿ ನೀಡಿದ್ದ ಹಕ್ಕು ಪತ್ರಗಳು ಡಮ್ಮಿಯಾಗಿದ್ದು ಈ ಕುಟುಂಬಗಳೂ ಅತಂತ್ರವಾಗಿವೆ.
ಆಹಕ್ಕು ಪತ್ರಗಳಿಗೆ ಯಾವುದೇ ಮಾನ್ಯತೆ ಇಲ್ಲ. ಹೀಗಾಗಿ ಅರಣ್ಯ ಇಲಾಖೆಯ ದೆಸೆಯಿಂದಾಗಿ ಕೊರಗ ಕುಟುಂಬಗಳು ಬೀದಿ ಪಾಲಾಗುವ ಸಾಧ್ಯತೆ ಇದೆ.
Related Articles
ಸಭೆಯಲ್ಲಿಯೂ ಚರ್ಚೆಯಾಗಿತ್ತು
ಕಾರ್ಕಳ ತಾ.ಪಂ. ಸದಸ್ಯೆ ಪುಷ್ಪಾ ಸತೀಶ್ ಪೂಜಾರಿ ಈ ಪ್ರಕರಣವನ್ನು ಕಳೆದ ವಾರ ನಡೆದ ಕಾರ್ಕಳ ತಾಲೂಕು ಪಂಚಾಯತ್‌ನ ಕೆಡಿಪಿ ಸಭೆಯಲ್ಲಿಯೂ ಪ್ರಸ್ತಾವಿಸಿದ್ದು ಡೀಮ್ಡ್ ಫಾರೆಸ್ಟ್ ಕಾರಣ ನೀಡಲಾಗುತ್ತು.
Advertisement
ನ್ಯಾಯಾಲಯದಲ್ಲಿ ಪ್ರಕರಣಕಾರ್ಕಳದ ತಹಶೀಲ್ದಾರ್ ಪುರಂದರ ಹೆಗ್ಡೆ ಅವರು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವತ್ತ ಪ್ರಯತ್ನ ನಡೆಸಿದ್ದಾರೆ. ಆದರೆ ಜಾಗ ಡೀಮ್ಡ್ ಫಾರೆಸ್ಟ್ ನಲ್ಲಿ ಬಂದ ಕಾರಣ ಪ್ರಕರಣ ಸರಕಾರ ಮತ್ತು ಅರಣ್ಯ ಇಲಾಖೆಯ ನಡುವಿನ ತಿಕ್ಕಾಟದಲ್ಲಿದೆ. ಜತೆಗೆ ನ್ಯಾಯಾಲಯಕ್ಕೂ ಹೋಗಿದೆ. ಪರಿಹಾರಕ್ಕೆ ಯತ್ನ
ಕಂದಾಯ ಇಲಾಖೆಯ ನೆರವಿನೊಂದಿಗೆ ಅರಣ್ಯ ಇಲಾಖೆ ಹಾಗೂ ಸರಕಾರದ ಮಟ್ಟದಲ್ಲಿ ಈ ಬಗ್ಗೆ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸಲಾಗುವುದು. ಶಾಸಕನ ನೆಲೆಯಲ್ಲಿ ಜನ ಸಾಮಾನ್ಯರಿಗೆ ತೊಂದರೆ ಯಾಗದ ರೀತಿಯಲ್ಲಿ ಸಹಕರಿಸುತ್ತೇನೆ.
-ವಿ.ಸುನಿಲ್ ಕುಮಾರ್ ,
ಶಾಸಕರು, ಕಾರ್ಕಳ ಪ್ರಯತ್ನ ನಡೆಸುತ್ತಿದ್ದೇವೆ
ಈ ಕುಟುಂಬಗಳು ಅಕ್ರಮವಾಗಿ ಕುಳಿತಿಲ್ಲ ಬದಲಾಗಿ ಪಂಚಾಯತ್ ವತಿಯಿಂದಲೇ ನೀಡಿದ ಜಾಗ ಇದಾಗಿದೆ. ಅರಣ್ಯ ಇಲಾಖೆಯ ತಡೆ ಇರುವಿದರಿಂದ ಇವರಿಗೆ ಹಕ್ಕು ಪತ್ರ ನೀಡಲು ತೊಂದರೆಯಾಗಿದೆ. ನಿರಂತರ ಪ್ರಯತ್ನ ನಡೆಯುತ್ತಿದೆ.
-ಬೋಳ ಸತೀಶ್ ಪೂಜಾರಿ,
ಬೋಳ ಗ್ರಾ.ಪಂ. ಅಧ್ಯಕ್ಷ ವಿವಾದ ಮುಗಿಯದೆ
ನ್ಯಾಯ ಸಿಗದು
ಜಾಗ ಡೀಮ್ಡ್ ಫಾರೆಸ್ಟ್ ನಲ್ಲಿ ಇರುವ ಕಾರಣ ಸರಕಾರ ಮತ್ತು ಅರಣ್ಯ ಇಲಾಖೆಯ ನಡುವಿನ ವಿವಾದ ಮುಗಿಯದೆ ಕೊರಗರಿಗೆ ನ್ಯಾಯ ಸಿಗದು.
-ಪುರಂದರ ಹೆಗ್ಡೆ,
ತಹಶೀಲ್ದಾರ್, ಕಾರ್ಕಳ