Advertisement

ಬಾಲಿವುಡ್‌ ನಿರ್ಮಾಪಕ ನಿತಿನ್‌ ಮನಮೋಹನ್‌ ನಿಧನ

07:12 PM Dec 29, 2022 | Team Udayavani |

ಮುಂಬೈ: ಬೋಲ್‌ ರಾಧಾ ಬೋಲ್‌, ಲಾಡ್ಲಾ ಸೇರಿದಂತೆ ಹಲವು ಯಶಸ್ವಿ ಸಿನಿಮಾಗಳ ನಿರ್ಮಾಪಕ ನಿತಿನ್‌ ಮನಮೋಹನ್‌ (62) ನಿಧನ ಹೊಂದಿದ್ದಾರೆ.

Advertisement

ಹಲವು ರೀತಿಯ ಅನಾರೋಗ್ಯದಿಂದ ಬಳಲುತ್ತಿದ್ದ ಅವರು  ನವೀ ಮುಂಬೈನಲ್ಲಿರುವ ಧೀರೂಭಾಯಿ ಅಂಬಾನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಡಿ.3ರಂದೇ ಅವರನ್ನು ಹೃದಯಸ್ತಂಭನದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಸೇರಿಸಲಾಗಿತ್ತು.  ಆಸ್ಪತ್ರೆಗೆ ಸೇರಿಸಿದ ಮೇಲೆ ವೆಂಟಿಲೇಟರ್‌ನಲ್ಲೇ ಇದ್ದರು. ಮೆದುಳಿಗೆ ಆಮ್ಲಜನಕ, ರಕ್ತ ಸರಿಯಾಗಿ ಪೂರೈಕೆಯಾಗದ ಕಾರಣ ಆಗಾಗ ಮೂರ್ಛೆ ಹೋಗುತ್ತಿದ್ದರು. ನಿಧಾನಕ್ಕೆ ಅವರ ಪರಿಸ್ಥಿತಿ ವಿಕೋಪಕ್ಕೆ ಹೋಗಿ ಮೃತಪಟ್ಟಿದ್ದಾರೆ ಎಂದು ಪುತ್ರಿ ಪ್ರಾಚಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next