Advertisement

ಕಾಮಿಡಿ ಮಾಡಲು ಬೋಜರಾಜ ರೆಡಿ

02:37 PM Feb 14, 2022 | Team Udayavani |

ಇತ್ತ ಕನ್ನಡ ಚಿತ್ರರಂಗದಲ್ಲಿ ಸಿನಿಮಾಗಳ ರಿಲೀಸ್‌ ಚಟುವಟಿಕೆ ಗರಿಗೆದರಿದಂತೆ, ಅತ್ತ ತುಳು ಚಿತ್ರರಂಗದಲ್ಲೂ ರಿಲೀಸ್‌ ಭರಾಟೆ ಜೋರಾಗುತ್ತಿದೆ. ಕೋವಿಡ್‌ ನಿಂದಾಗಿ ಕಳೆದ 2 ವರ್ಷಗಳಿಂದ ಸ್ತಬ್ಧವಾಗಿದ್ದ ತುಳು ಚಿತ್ರರಂಗದಲ್ಲಿ, ಲಾಕ್‌ಡೌನ್‌ ಬಳಿಕ ಮೊದಲ ಬಾರಿಗೆ ಔಟ್‌ ಆ್ಯಂಡ್‌ ಔಟ್‌ ಕಾಮಿಡಿ ಕಥಾ ಹಂದರದ “ಬೋಜರಾಜ್‌ ಎಂಬಿಬಿಎಸ್‌’ ಚಿತ್ರ ಬಿಡುಗಡೆಯಾಗುತ್ತಿದ್ದು, ಇದೇ ಫೆ. 18ಕ್ಕೆ ಚಿತ್ರ ತೆರೆ ಕಾಣುತ್ತಿದೆ.

Advertisement

ಕೋಸ್ಟಲ್‌ವುಡ್‌ನ‌ ನವರಸರಾಜ ಖ್ಯಾತಿಯ ಬೋಜರಾಜ್‌ ವಾಮಂಜೂರು “ಬೋಜರಾಜ್‌ ಎಂಬಿಬಿಎಸ್‌’ ಚಿತ್ರದಲ್ಲಿ ನಾಯಕನಾಗಿ ತೆರೆಮೇಲೆ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಶೀತಲ್‌ ನಾಯಕ್‌, ನವ್ಯಾ ಪೂಜಾರಿ ನಾಯಕಿಯರಾಗಿ ಅಭಿನಯಿಸಿದ್ದಾರೆ. ಅರವಿಂದ್‌ ಬೋಳಾರ್‌ ಚಿತ್ರದಲ್ಲಿ 3 ವಿಭಿನ್ನ ಶೈಲಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇವರೊಂದಿಗೆ ತುಳು ಚಿತ್ರರಂಗ, ರಂಗಭೂಮಿ ದಿಗ್ಗಜರಾದ ದೇವದಾಸ್‌ ಕಾಪಿಕಾಡ್‌ ಮತ್ತು ವಿಜಯಕುಮಾರ್‌ ಕೊಡಿಯಾಲ್‌ಬೈಲ್‌ ಇದೇ ಮೊದಲ ಬಾರಿಗೆ “ಬೋಜರಾಜ್‌ ಎಂಬಿಬಿಎಸ್‌’ ಚಿತ್ರದಲ್ಲಿ ತೆರೆಮೇಲೆ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ:ವಿದೇಶಿ ಕನ್ನಡಿಗರಿಂದ ‘ತೋತಾಪುರಿ’ಗೆ ಬಹುಪರಾಕ್‌

ಉಳಿದಂತೆ ತುಳು ಚಿತ್ರರಂಗದ ಅನೇಕ ಕಲಾವಿದರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. “ದರ್ಬಾರ್‌ ಸಿನೆಮಾಸ್‌’ ಬ್ಯಾನರಿನಲ್ಲಿ ರಫೀಕ್‌ ದರ್ಬಾರ್‌ ನಿರ್ಮಿಸಿರುವ ಈ ಚಿತ್ರಕ್ಕೆ ಇಸ್ಮಾಯಿಲ್‌ ಮೂಡುಶೆಡ್ಡೆ ನಿರ್ದೇಶನವಿದೆ. ಕಳೆದ ಕೆಲ ದಿನಗಳಿಂದ ಭರ್ಜರಿಯಾಗಿ ಚಿತ್ರದ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿರುವ ಚಿತ್ರತಂಡ, “ಬೋಜರಾಜ್‌ ಎಂಬಿಬಿಎಸ್‌’ ಚಿತ್ರವನ್ನು ಈ ವಾರ ತುಳು ಸಿನಿಪ್ರಿಯರ ಮುಂದೆ ತರುತ್ತಿದೆ. ಆರಂಭದಲ್ಲಿ ಕರ್ನಾಟಕದಲ್ಲಿ ಬಿಡುಗಡೆಯಾಗಲಿರುವ “ಬೋಜರಾಜ್‌ ಎಂಬಿಬಿಎಸ್‌’ ಚಿತ್ರವನ್ನು ಬಳಿಕ ಗಲ್ಫ್ ಮತ್ತು ಇತರ ದೇಶಗಳಲ್ಲೂ ಬಿಡುಗಡೆ ಮಾಡುವ ಯೋಜನೆಯಲ್ಲಿದೆ ಚಿತ್ರತಂಡ

Advertisement

Udayavani is now on Telegram. Click here to join our channel and stay updated with the latest news.

Next