Advertisement

ಬೊಯಿಸರ್‌ ಸದ್ಗುರು ಶ್ರೀ ಭಕ್ತವೃಂದ ವಾರ್ಷಿಕ ಅಯ್ಯಪ್ಪ ಮಹಾಪೂಜೆ

04:09 PM Jan 05, 2018 | |

ಮುಂಬಯಿ: ಬೊಯಿಸರ್‌ ಪಶ್ಚಿಮದ ಸದ್ಗುರು ಶ್ರೀ ಭಕ್ತವೃಂದ ಸಂಸ್ಥೆಯ 29 ನೇ ವಾರ್ಷಿಕ ಶ್ರೀ ಅಯ್ಯಪ್ಪ ಮಹಾಪೂಜೆಯು ಜ. 2 ರಂದು ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಆಯೋಜಿಸಲಾಗಿತ್ತು.

Advertisement

ಬೊಯಿಸರ್‌ ನಾವಾಪುರ ರಸ್ತೆಯಲ್ಲಿನ ಶ್ರೀ ಸ್ವಾಮಿ ನಿತ್ಯಾನಂದ ಮಂದಿರದ ಆವರಣದಲ್ಲಿ ಜರಗಿದ ಈ ಕಾರ್ಯಕ್ರಮದಲ್ಲಿ ಸœಳೀಯರಾದ ಸುಂದರ ಸ್ವಾಮಿ ಅವರ ನೇತೃತ್ವದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ಜರಗಿತು. ಧಾರ್ಮಿಕ ಕಾರ್ಯಕ್ರಮವಾಗಿ ಬೆಳಗ್ಗೆ 5.30 ರಿಂದ ಗಣಹೋಮ, ಆನಂತರ ಶ್ರೀ ಅಯ್ಯಪ್ಪ  ಪ್ರತಿಷ್ಠಾಪನ ಪೂಜೆ, ಬೆಳಗ್ಗೆ 8 ರಿಂದ ಪೂರ್ವಾಹ್ನ 11.30 ರವರೆಗೆ ಆರಾಧನೆ ಮತ್ತು ಮಹಾಪೂಜೆ ಜರಗಿತು.ಅನಂತರ ಇರುಮುಡಿ ಸೇವೆ ನಡೆಯಿತು.

ಕಳೆದ 65 ವರ್ಷಗಳಿಂದ ನಿರಂತರ ಅಯ್ಯಪ್ಪ ಪೂಜೆಯ ವ್ಯವಸ್ಥಾಪನೆಯನ್ನು ಮಾಡುತ್ತಿರುವ ಬ್ರಹ್ಮಶ್ರೀ ಗಣೇಶ ಗುರುಸ್ವಾಮಿ ಅವರು ಇರುಮುಡಿ ಸೇವೆಯನ್ನು ನಡೆಸಿಕೊಟ್ಟರು. ಸುಂದರ ಪೂಜಾರಿ, ಸುರೇಶ್‌ ಗೌಡ, ಪಲ್ಲಿ ಠಾಕೂರ್‌, ಶೈಲೇಶ್‌ ಧಾಮಣRರ್‌, ಸುವರ್ಣ ಪೂಜಾರಿ ಇವರು ನೆರೆದ ಭಕ್ತಾದಿಗಳ ಸಮ್ಮುಖದಲ್ಲಿ ಇರುಮುಡಿ ಸೇವೆಯಲ್ಲಿ ಪಾಲ್ಗೊಂಡರು. ಅಯ್ಯಪ್ಪ ವ್ರತಧಾರಿಗಳು ಸದ್ಗುರು ಶ್ರೀ ನಿತ್ಯಾನಂದರ ಸನ್ನಿಧಿಯಲ್ಲಿ ಪ್ರಸಾದ ಸ್ವೀಕರಿಸಿ ಶಬರಿಮಲೆಯಾತ್ರೆಯನ್ನು ಆರಂಭಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮವಾಗಿ ಗಾಯಕ ಸತೀಶ್‌ ಇರ್ವತ್ತೂರು ಇವರಿಂದ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಿತು. ಹಿಮ್ಮೇಳದಲ್ಲಿ ಅಶೋಕ್‌ ಸಾಲ್ಯಾನ್‌ ತಬಲಾದಲ್ಲಿ, ದೇವದಾಸ್‌ ಸಾಲ್ಯಾನ್‌ ಅವರು ತಾಳದಲ್ಲಿ ಸಹಕರಿಸಿದರು. 

ಈ ಸಂದರ್ಭದಲ್ಲಿ ಸದ್ಗುರು ಭಕ್ತಮಂಡಳಿಯ ಸುಹಾಸಿನಿ ನಾೖಕ್‌, ಸತ್ಯಾ ಕೋಟ್ಯಾನ್‌, ರಮಾನಂದ ಪೂಜಾರಿ, ರಘುರಾಮ ರೈ, ಶ್ರೀನಿವಾಸ ಕೋಟ್ಯಾನ್‌, ಮಹಿಳಾ ಭಜನ ವೃಂದ ಹಾಗೂ ಜಿಲ್ಲೆಯಾದ್ಯಂತ ಇರುವ ಅಯ್ಯಪ್ಪ ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಪ್ರಸಾದ ರೂಪದಲ್ಲಿ ಅನ್ನಸಂತರ್ಪಣೆಯನ್ನುಆಯೋಜಿಸಲಾಗಿತ್ತು. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಪ್ರಸಾದ ಸ್ವೀಕರಿಸಿದರು. 

Advertisement

ಚಿತ್ರ-ವರದಿ:ಪಿ.ಆರ್‌.ರವಿಶಂಕರ್‌

Advertisement

Udayavani is now on Telegram. Click here to join our channel and stay updated with the latest news.

Next