ಮುಂಬಯಿ: ಬೊಯಿಸರ್ ಪಶ್ಚಿಮದ ಸ್ವಾಮಿ ನಿತ್ಯಾನಂದ ಮಂದಿರದಲ್ಲಿ ಸದ್ಗುರು ನಿತ್ಯಾನಂದ ಸ್ವಾಮೀಜಿಯವರ ಪುಣ್ಯ ತಿಥಿ ಆಚರಣೆಯು ಆ. 8 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಿತು.
ಸ್ಥಳೀಯರಿಗೂ ಸದ್ಗುರು ಶ್ರೀ ನಿತ್ಯಾನಂದ ಸ್ವಾಮೀಜಿಯವರನ್ನು ಆರಾಧಿಸಿಕೊಂಡು ಬರಲು ಅನುಕೂಲವಾಗುವಂತೆ ದಿ| ದಾಮೋದರ ನಾೖಕ್ ಅವರ ಕನಸಿನ ಶ್ರದ್ದಾಕೇಂದ್ರವಾಗಿರುವ ಬೊಯಿಸರ್ ನಿತ್ಯಾನಂದ ಮಂದಿರದಲ್ಲಿ ಧಾರ್ಮಿಕ ಕಾರ್ಯಕ್ರಮವಾಗಿ ಬೆಳಗ್ಗೆ ಗಣಹೋಮ, ಕಲಶಾಭಿ ಷೇಕ, ಸಾಮೂಹಿಕ ಶ್ರೀ ಸತ್ಯನಾರಾಯಣ ಮಹಾ ಪೂಜೆಯು ಭಕ್ತಾದಿಗಳ ಸಮ್ಮುಖದಲ್ಲಿ ನಡೆಯಿತು.
ದೇವಳದ ಅರ್ಚಕ ರಾಜೇಶ್ ಶಾಂತಿ ಮತ್ತು ಮುಂಬಯಿಯ ಹರೀಶ್ ಶಾಂತಿ, ಹರೀಶ್ ಕಾರ್ಕಳ ಅವರ ನೇತೃತ್ವದಲ್ಲಿ ವಿವಿಧ ಪೂಜೆಗಳು ನೆರವೇರಿತು. ಮಂದಿರದ ಭಜನ ಮಂಡಳಿಯ ವತಿಯಿಂದ ಹಾಗೂ ಅನಿಲ್ ಪಾಟೀಲ್ ಇವರ ನೇತೃತ್ವದಲ್ಲಿ ಭಕ್ತಿಗಾಯನ ನಡೆಯಿತು. ಹಿಮ್ಮೇಳದಲ್ಲಿ ತಬಲಾದಲ್ಲಿ ಅಶೋಕ್ ಕುಮಾರ್ ಅವರು ಸಹಕರಿಸಿದರು. ಮಧ್ಯಾಹ್ನ ಮಹಾಪೂಜೆಯ ಪ್ರಾರಂಭದಲ್ಲಿ ಮಂದಿರದ ಸ್ಥಾಪಕ ದಿ| ದಾಮೋದರ ನಾೖಕ್ ಅವರ ಕೊಡುಗೆಯನ್ನು ಸ್ಮರಿಸಿ ಅವರಿಗೆ ಗೌರವ ಸಲ್ಲಿಸಲಾಯಿತು.
ಪ್ರತೀ ವರ್ಷ ಮಂದಿರದ ಪ್ರತಿಷ್ಠಾಪನ ವರ್ಧಂತಿ ಉತ್ಸವ ಸಂದರ್ಭದಲ್ಲಿ ನಡೆಯಲಿರುವ ಶೋಭಾಯಾತ್ರೆಯ ಪಲ್ಲಕ್ಕಿಯನ್ನು ಭಕ್ತಾದಿಗಳಾದ ಪ್ರಕಾಶ್ ಶಾØ ಮತ್ತು ಉತ್ಸವ ಮೂರ್ತಿಯನ್ನು ಪ್ರವೀಣ್ ಶೆಟ್ಟಿ ಅವರು ಇದೇ ಸಂದರ್ಭದಲ್ಲಿ ಸೇವಾ ರೂಪದಲ್ಲಿ ಮಂದಿರಕ್ಕೆ ಅರ್ಪಿಸಿದರು.
ಕಾರ್ಯಕ್ರಮದಲ್ಲಿ ಸುಹಾಸಿನಿ ಡಿ. ನಾೖಕ್, ಉದ್ಯಮಿಗಳಾದ ಶ್ರೀನಿವಾಸ ಕೋಟ್ಯಾನ್, ಬಿಕ್ರಿಗುತ್ತು ಜಗದೀಶ್ ಶೆಟ್ಟಿ, ಭಾಸ್ಕರ ಶೆಟ್ಟಿ, ಪ್ರವೀಣ್ ಶೆಟ್ಟಿ, ರಘುರಾಮ ರೈ, ಸತ್ಯಾ ಕೋಟ್ಯಾನ್ ಹಾಗೂ ವಿವಿಧೆಡೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು. ಸ್ಥಳೀಯ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರು, ವಿವಿಧ ಕ್ಷೇತ್ರಗಳ ಗಣ್ಯರು, ಭಕ್ತ ಮಂಡಳಿಯ ಸದಸ್ಯರು ಪಾಲ್ಗೊಂಡಿದ್ದರು. ಅನ್ನಸಂತರ್ಪಣೆ ನಡೆಯಿತು.
ಚಿತ್ರ-ವರದಿ: ಪಿ. ಆರ್. ರವಿಶಂಕರ್ ಡಹಾಣೂರೋಡ್