Advertisement

ಪಾರಂಪರಿಕ ರೈಲಿನ ಇಂಜಿನ್‌ ಸ್ಫೋಟ, ಚಾಲಕರಿಬ್ಬರಿಗೆ ಗಾಯ

03:58 PM Dec 09, 2017 | Team Udayavani |

ಕೊಯಮುತ್ತೂರು : ನೀಲಗಿರಿ ಜಿಲ್ಲೆಯ ಹಿಲ್‌ಗ್ರೋವ್‌ ರೈಲ್ವೇ ಸ್ಟೇಶನ್‌ ಬಳಿ ಪಾರಂಪರಿಕ ರೈಲೊಂದರ ಬಾಯ್ಲರ್‌ ಅಛಾನಕ್‌ ಸ್ಫೋಟಗೊಂಡ ಪರಿಣಾಮವಾಗಿ ಇಬ್ಬರು ಲೋಕೋ ಪೈಲಟ್‌ಗಳು ಗಾಯಗೊಂಡ ದುರ್ಘ‌ಟನೆ ವರದಿಯಾಗಿದೆ. 

Advertisement

ಆರು ಕೋಚ್‌ಗಳಿದ್ದ ನೀಲಗೀರೀಸ್‌ ಮೌಂಟೇನ್‌ ರೈಲ್ವೇ ಟ್ರೈನ್‌ನಲ್ಲಿ 120 ಮಂದಿ ಪ್ರಯಾಣಿಕರಿದ್ದರು. ಈ ಪಾರಂಪರಿಕ ರೈಲು ಇಂದು ಬೆಳಗ್ಗೆ 7 ಗಂಟೆಯ ಹೊತ್ತಿಗೆ ಮೆಟ್ಟುಪಾಳ್ಯಂನಿಂದ ಉದಕಮಂಡಲಕ್ಕೆ ಹೊರಟಿತ್ತು. 

ಹಿಲ್‌ಗ್ರೋವ್‌ ರೈಲ್ವೇ ಸೇತುವೆಯ ಮೇಲಿದ್ದ ವೇಳೆ ರೈಲಿನ ಇಂಜಿನ್‌ನಲ್ಲಿ ಮಿಸ್‌ ಫ‌ಯರ್‌ನಿಂದಾಗಿ ದೋಷ ಕಂಡು ಬಂತು. ಆಗ ಲೋಕೋಪೈಲಟ್‌ಗಳಲ್ಲಿ ಒಬ್ಟಾತ ಇಂಜಿನ್‌ ಒತ್ತಡ ಏರಿಸಲು ಯತ್ನಿಸಿದ. ಆಗ ರೇಡಿಯೇಟರ್‌ನಿಂದ ಅಛಾನಕ್‌ ಆಗಿ ಬಿಸಿ ನೀರು ಚಿಮ್ಮಿತು. ಪರಿಣಾಮವಾಗಿ ಲೋಕೋ ಪೈಲಟ್‌ಗಳಾದ ಭೂಪತಿ ಮತ್ತು ಸತೀಶ್‌ ಅವರಿಗೆ ಸುಟ್ಟಗಾಯಗಳಾದವು. 

ಒಡನೆಯೇ ಕೂನೂರ್‌ನಿಂದ ಒಂದು ಇಂಜಿನ್‌ ಮತ್ತು ಎರಡು ಕೋಚ್‌ಗಳನ್ನು ತರಿಸಿಕೊಳ್ಳಲಾಯಿತು. ಪ್ರಯಾಣಿಕರನ್ನು ಅವರ ಗಮ್ಯ ತಾಣಕ್ಕೆ ಒಯ್ಯಲಾಯಿತಲ್ಲದೆ ಗಾಯಾಳು ಲೋಕೋಪೈಲಟ್‌ಗಳನ್ನು ಸ್ಥಳಾಂತರಿಸಲಾಯಿತು ಎಂದು ರೈಲ್ವೇ ಮೂಲಗಳು ತಿಳಿಸಿವೆ. 

Advertisement

Udayavani is now on Telegram. Click here to join our channel and stay updated with the latest news.

Next