ನ್ಯೂಯಾರ್ಕ್: ಸದ್ಯ ನಾಗರಿಕ ವಿಮಾನಯಾನ ಕ್ಷೇತ್ರ ಲಾಕ್‌ಡೌನ್ ನಿಯಮ ಜಾರಿಯಿಂದಾಗಿ ಮೂಲೆಗುಂಪಾಗಿದ್ದು, ಆದಾಯವಿಲ್ಲದೇ ನಷ್ಟದ ಸುಳಿಯಲ್ಲಿ ಸಿಲುಕಿದೆ.
ಸರಕಾರ ಆರ್ಥಿಕ ನೆರವು ಯೋಜನೆಯನ್ನು ಘೋಷಿಸುತ್ತದೆಯೋ ಎಂದು ಹತ್ತಾರು ವಿಮಾನಯಾನ ಸಂಸ್ಥೆಗಳು ಕಾದು ಕುಳಿತಿವೆ.
ಆದರೆ ಅಮೆರಿಕದ ಬೋಯಿಂಗ್ ವಿಮಾನಯಾನ ಸಂಸ್ಥೆ ಫೆಡರಲ್ ಸರಕಾರ ನೀಡುವ ಹಣಕಾಸಿನ ನೆರವನ್ನು ಪಡೆದುಕೊಳ್ಳುವುದಿಲ್ಲ ಎಂಬ ಹೇಳಿಕೆ ನೀಡಿದೆ ಎಂದು ಪೊಲಿಟಿಕೋ ವರದಿ ಮಾಡಿದೆ.
ಬಾಂಡ್‌ಗಳ ಮೂಲಕ 25 ಶತಕೋಟಿ ಡಾಲರ್ ಸಂಗ್ರಹಿಸಿದ ಬಳಿಕ ಈ ಹೇಳಿಕೆ ನೀಡಿರುವ ಕಂಪೆನಿ, ಸದ್ಯ ವಿಶ್ವಕ್ಕೆ ಎದುರಾಗಿರುವ ಬಿಕ್ಕಟ್ಟಿನ ಪರಿಸ್ಥಿತಿಯನ್ನು ಬಂದಂತೆ ಸ್ವೀಕರಿಸಲು ನಾವು ಸಿದ್ದರಿದ್ದೇವೆ. ಹೊರತಾಗಿ ಆರ್ಥಿಕ ಚಟುವಟಿಕೆಗಳು ವಿಕಸನಗೊಳ್ಳುವ ನಂಬಿಕೆ ಇದೆ ಎಂದಿದೆ.
ನಾಗರಿಕ ವಿಮಾನಯಾನ ಉದ್ಯಮ ಕ್ಷೇತ್ರದಲ್ಲಿ ಹೆಸರುವಾಸಿಯಾದ ಬೋಯಿಂಗ್ ಸಂಸ್ಥೆ ಆರ್ಥಿಕವಾಗಿ ಸದೃಢವಾಗಿದೆ ಎಂದು ಹೇಳಲಾಗಿದೆ. ಅಮೆರಿಕದ ಆರ್ಥಿಕತೆ ದೃಷ್ಟಿಯಿಂದ ಪ್ರಮುಖ ಕಂಪೆನಿಯಾದ ಬೋಯಿಂಗ್‌ಗೆ ಆರ್ಥಿಕವಾಗಿ ಸಹಾಯ ಮಾಡಲು ಫೆಡರಲ್ ಸರಕಾರವೂ ಮನಸ್ಸು ಮಾಡಿತ್ತು ಎನ್ನಲಾಗಿತ್ತು. ಆದರೆ 2018 ಮತ್ತು 2019 ರಲ್ಲಿ ಬೋಯಿಂಗ್ ಒಡೆತನ 737 ಮ್ಯಾಕÕ… ವಿಮಾನಗಳು ಅಪಘಾತಕ್ಕೀಡಾಗಿ ಅಗಾಧ ನಷ್ಟವನ್ನು ಅನುಭವಿಸಿತ್ತು.