Advertisement

Boeing aircraft: ಬೋಯಿಂಗ್‌ ವಿಮಾನದ ದೋಷ ಪತ್ತೆ ಮಾಡಿದ್ದ ಮಾಹಿತಿದಾರ ದಿಢೀರ್‌ ಸಾವು

01:19 PM May 03, 2024 | Suhan S |

ನವದೆಹಲಿ: ಬೋಯಿಂಗ್‌ನ ಮಾಜಿ ಉದ್ಯೋಗಿ, ಮಾಹಿತಿದಾರ ಜೋಶ್ವಾ ಡೀನ್‌ ಸಾವಿಗೀಡಾಗಿದ್ದು, ಅವರ ಸಾವು ಅನುಮಾನಕ್ಕೆ ಕಾರಣವಾಗಿದೆ.

Advertisement

45 ವರ್ಷದ ಡೀನ್‌ ಅವರು ಬೋಯಿಂಗ್‌ನ ಪೂರೈಕೆದಾರ ಘಟಕ ಏರೋಸಿಸ್ಟಂನಲ್ಲಿ ಗುಣಮಟ್ಟ ನಿಯಂತ್ರಕರಾಗಿ ಕೆಲಸ ಮಾಡಿದ್ದರು. ಅನಾರೋಗ್ಯಕ್ಕೆ ತುತ್ತಾದ ಎರಡೇ ವಾರದಲ್ಲಿ ವೇಗವಾಗಿ ಸೋಂಕು ಹರಡಿದ ಪರಿಣಾಮ ಡೀನ್‌ ಮೃತಪಟ್ಟಿದ್ದಾರೆಂದು ಹೇಳಲಾಗುತ್ತಿದೆ.

2 ತಿಂಗಳ ಹಿಂದಷ್ಟೇ ಮತ್ತೂಬ್ಬ ಮಾಹಿತಿದಾರ ಜಾನ್‌ ಬರ್ನೆಟ್‌ ಅವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಈಗ ಡೀನ್‌ ಅವರ ದಿಢೀರ್‌ ಸಾವು ಕೂಡ ಹಲವು ಅನುಮಾನಗಳಿಗೆ ಕಾರಣವಾಗಿದೆ. ಬೋಯಿಂಗ್‌ನ 737 ಮ್ಯಾಕ್ಸ್‌ ವಿಮಾನ ತಯಾರಿಕೆಯಲ್ಲಿನ ದೋಷಗಳ ಬಗ್ಗೆ ಮೊದಲು ದನಿ ಎತ್ತಿದ್ದರು. ವಿಮಾನದ ಕ್ಯಾಬಿನ್‌ ಒತ್ತಡ ನಿಯಂತ್ರಣ ಮಾಡುವ ಎಎಫ್ಟಿ ಬಲ್ಕ್ಹೆಡ್‌ನ‌ಲ್ಲಿ ವ್ಯವಸ್ಥಿತವಲ್ಲದ ರಂಧ್ರ ಕೊರೆದಿರುವ ಬಗ್ಗೆ ಅವರು ಗಮನ ಸೆಳೆದಿದ್ದರು. ಇದರಿಂದಾಗಿ 2023ರ ಏಪ್ರಿಲ್‌ನಲ್ಲಿ ಡೀನ್‌ ಅವರನ್ನು ಉದ್ಯೋಗದಿಂದ ಕಿತ್ತು ಹಾಕಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next