Advertisement
ಬೋಯಿಂಗ್ ಇಂಡಿಯಾ ಹೆಸರಿನಲ್ಲಿ ಅಮೆರಿಕದ ಕಂಪನಿ ವಹಿವಾಟು ನಡೆಸುತ್ತಿದ್ದು, ಸದ್ಯ ವಾರ್ಷಿಕವಾಗಿ 8 ಸಾವಿರ ಕೋಟಿ ರೂ. ನಡೆಸುತ್ತಿದೆ. ಮುಂದಿನ ವರ್ಷಗಳಲ್ಲಿ ಅದನ್ನು 10 ಸಾವಿರ ಕೋಟಿ ರೂ.ಗೆ ಏರಿಸುವ ಗುರಿಯನ್ನು ಕಂಪನಿ ಹಾಕಿಕೊಂಡಿದೆ. ದೇವನಹಳ್ಳಿಯಲ್ಲಿ ಬೋಯಿಂಗ್ ಘಟಕ ಸ್ಥಾಪನೆಯಾಗುವುದರಿಂದ ದೇಶದಲ್ಲಿ ವೈಮಾನಿಕ ಕ್ಷೇತ್ರದಲ್ಲಿ ಉದ್ದಿಮೆಗೆ ಮತ್ತಷ್ಟು ಬಲಬರಲಿದೆ.
ಏರ್ ಇಂಡಿಯಾ ಇತ್ತೀಚೆಗೆ 200 ವಿಮಾನಗಳ ಖರೀದಿಗೆ ಒಪ್ಪಂದ ಮಾಡಿಕೊಂಡಿತ್ತು. ಇದರ ಜತೆಗೆ ಭಾರತೀಯ ನೌಕಾಪಡೆಯ 12 ಪಿ-81 ವಿಮಾನಗಳು ಬೋಯಿಂಗ್‌ನಿಂದಲೇ ನಿರ್ಮಾಣಗೊಂಡಿವೆ. ಅವುಗಳ ಸಂಖ್ಯೆಯನ್ನು 18ಕ್ಕೆ ಏರಿಸುವ ನಿಟ್ಟಿನಲ್ಲಿ ಈಗಾಗಲೇ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಅವುಗಳನ್ನು ಮೇಕ್ ಇನ್ ಇಂಡಿಯಾ ಅಡಿಯಲ್ಲಿ ದೇಶದಲ್ಲಿಯೇ ಉತ್ಪಾದಿಸುವ ಯೋಜನೆಯನ್ನೂ ಕಂಪನಿ ಹೊಂದಿದೆ. 1,600 ಕೋಟಿ ರೂ– ಹೂಡಿಕೆ ಮಾಡಲಾಗಿರುವ ಬಂಡವಾಳ
43 ಎಕರೆ- ಕಂಪನಿಗೆ ನೀಡಲಾಗಿರುವ ಜಮೀನು