Advertisement

ವಾಹನದಲ್ಲಿ ಶವ ರವಾನೆ: ಪೊಲೀಸರ ವಿರುದ್ಧ ಕ್ರಮ

06:35 AM Jan 16, 2018 | Team Udayavani |

ಹಾವೇರಿ: ಹಾನಗಲ್ಲ ತಾಲೂಕಿನ ಗುಂಡೂರು ಬಳಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟ ಪತ್ರಕರ್ತ ಮೌನೇಶ ಪೋತರಾಜ್‌ ಅವರ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಪುರಸಭೆಯ ಕಸ ಸಾಗಿಸುವ ವಾಹನದಲ್ಲಿ ರವಾನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾನಗಲ್ಲ ಪೊಲೀಸ್‌ ಠಾಣೆಯ ಉಪನಿರೀಕ್ಷಕರನ್ನು ವರ್ಗಾಯಿಸಿ ಎಸ್ಪಿ ಕೆ. ಪರಶುರಾಮ ಆದೇಶ ಹೊರಡಿಸಿದ್ದಾರೆ.

Advertisement

ಪಿಎಸ್‌ಐ ಗುರುರಾಜ ಮೈಲಾರ ಅವರನ್ನು ಹಾವೇರಿಯ ವಿಶೇಷ ಗುಪ್ತದಳ ವಿಭಾಗದಲ್ಲಿ ಖಾಲಿ ಇರುವ ಹುದ್ದೆಗೆ ನಿಯೋಜಿಸಿದ್ದಾರೆ. ಅವರ ವಿರುದ್ಧ ಇಲಾಖಾ ಶಿಸ್ತು ನಿಯಮಾವಳಿಯಡಿ ದೋಷಾರೋಪಣ ಪತ್ರ ಹೊರಡಿಸಿದ್ದಾರೆ. ಪ್ರಕರಣದ ಮೇಲ್ವಿಚಾರಣೆ ಮಾಡುವಲ್ಲಿ ವಿಫಲವಾಗಿರುವ ಹಾನಗಲ್ಲ ಸಿಪಿಐ ರೇವಪ್ಪ ಕಟ್ಟಿಮನಿ ಅವರಿಗೂ ದೋಷಾರೋಪಣ ಪತ್ರ ಹೊರಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next