ಏಕಾಕಿಯಾಗಿ ಬದುಕುವುದು/
ಕುಟುಂಬ ಸದಸ್ಯರಿಂದ ಗಮನದ ಕೊರತೆ
ಈ ಮನೋವೈಜ್ಞಾನಿಕ ಅಂಶವು ವಯೋವೃದ್ಧರಲ್ಲಿ ಸಾಮಾನ್ಯವಾದ ಅದೇವೇಳೆಗೆ ಅಪೌಷ್ಟಿಕತೆಗೆ ಪ್ರಧಾನವಾದ ಕಾರಣವಾಗಿರುತ್ತದೆ.
Advertisement
ವಯೋ ಸಂಬಂಧಿ ಮನೋವೈಜ್ಞಾನಿಕ ಬದಲಾವಣೆಗಳು
(ನಮಗೆ ವಯಸ್ಸಾಗುತ್ತಿದ್ದಂತೆ ಮನೋವೈಜ್ಞಾನಿಕ ಬದಲಾವಣೆಗಳು ನಿಧಾನವಾಗಿ ಬೆಳಕಿಗೆ ಬರುತ್ತವೆ)
– ಪೌಷ್ಟಿಕಾಂಶಗಳ ಕೊರತೆ: ಆಹಾರದಲ್ಲಿ ಸಾಮಾನ್ಯವಾಗಿ ಕಬ್ಬಿಣಾಂಶ, ಪ್ರೊಟೀನ್, ಕ್ಯಾಲ್ಸಿಯಂ, ವಿಟಮಿನ್ ಎ ಮತ್ತು ಸಿಗಳ ಕೊರತೆ ಇರುತ್ತದೆ. ಇದರಿಂದ ರಕ್ತ ಹೀನತೆ, ಸೋಂಕುಗಳು ಹೆಚ್ಚುತ್ತವೆ.
– ಮದ್ಯಪಾನ: ಮದ್ಯಪಾನವು ಯುವಕರಿಗಿಂತ ವಯೋವೃದ್ಧರಲ್ಲಿ ಬೇರೆಯದೇ ಪರಿಣಾಮವನ್ನು ಉಂಟು ಮಾಡಬಹುದು. ಕೆಲವರಲ್ಲಿ ವಯಸ್ಸಾಗುತ್ತಿದ್ದಂತೆ ಹಿಂದೆ ಸೇವಿಸುತ್ತಿದ್ದಷ್ಟು ಮದ್ಯವೇ ಹೆಚ್ಚು ಅಮಲನ್ನು ಉಂಟು ಮಾಡಬಹುದು. ಈ ಅಮಲಿನ ಹೆಚ್ಚಳ ಬೀಳುವುದು, ಮೂಳೆ ಮುರಿತ, ಕಾರು ಅವಘಡಗಳಂತಹ ಅಪಘಾತಗಳಿಗೆ ಕಾರಣವಾಗಬಹುದು. ಅಲ್ಲದೆ ವಯೋವೃದ್ಧ ಪುರುಷರಿಗಿಂತ ವಯೋವೃದ್ಧ ಮಹಿಳೆಯರು ಮದ್ಯದ ಪ್ರಭಾವಕ್ಕೆ ಹೆಚ್ಚು ಒಳಗಾಗುತ್ತಾರೆ.
– ಬೊಜ್ಜು: ದೈಹಿಕ ಚಟುವಟಿಕೆ ಕಡಿಮೆಯಾಗುವುದರಿಂದ ಮತ್ತು ಕ್ಯಾಲೊರಿ ಅಗತ್ಯ ಕಡಿಮೆಯಾಗುವುದರಿಂದ ಬೊಜ್ಜು ಉಂಟಾಗುತ್ತದೆ. ದೇಹತೂಕ ಹೆಚ್ಚುವುದರಿಂದ ಚಲನೆ ಕಡಿಮೆಯಾಗುತ್ತದೆ. ಬೊಜ್ಜು ಹಾಲಿ ಇರುವಂತಹ ಯಾವುದೇ ಅನಾರೋಗ್ಯವನ್ನು ಉಲ್ಬಣಗೊಳಿಸಬಹುದು ಮತ್ತು ಇತರ ಅಪಾಯಗಳಿಗೂ ಕಾರಣವಾಗಬಲ್ಲುದು.
– ಆಸ್ಟಿಯೊಪೊರೋಸಿಸ್: ಇದು ವಯೋವೃದ್ಧರಲ್ಲಿ ಒಂದು ಪ್ರಧಾನ ಅನಾರೋಗ್ಯವಾಗಿದೆ.
– ಮಹಿಳೆಯರಲ್ಲಿ ಋತುಚಕ್ರ ಬಂಧದ ಬಳಿಕ ಮತ್ತು ಪುರುಷರಲ್ಲಿ ಮಧ್ಯ ವಯಸ್ಸಿನಲ್ಲಿ ಕಾಣಿಸಿಕೊಳ್ಳುತ್ತದೆ.
– ಹೆಚ್ಚುವರಿ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಸೇವನೆ ಇದನ್ನು ಕಡಿಮೆ ಮಾಡುತ್ತದೆ. ಜತೆಗೆ ದೈಹಿಕ ಚಟುವಟಿಕೆಯೂ ಬೇಕು. ಎಲುಬು ಸಾಂದ್ರತೆಯನ್ನು ವೃದ್ಧಿಸಲು ಫ್ಲೋರೈಡ್ ಸಹಾಯ ಮಾಡುತ್ತದೆ.
– ಮಧುಮೇಹ: ಮಧ್ಯವಯಸ್ಸು ಮತ್ತು ಆ ಬಳಿಕದ ವಯೋಮಾನದಲ್ಲಿ ಕಾಣಿಸಿಕೊಳ್ಳುವ ಸಾಮಾನ್ಯ ಆರೋಗ್ಯ ಸಮಸ್ಯೆ. ಇದಕ್ಕೆ ಕಾರಣವಾಗಬಹುದಾದ ಪ್ರಧಾನ ಅಪಾಯಾಂಶ ಬೊಜ್ಜು. ಪಥ್ಯಾಹಾರ ಮತ್ತು ತೂಕ ನಿಯಂತ್ರಣದ ಮೂಲಕ ನಿಭಾಯಿಸಬಹುದು.
– ಮಲಬದ್ಧತೆ ಮತ್ತು ಡೈವರ್ಟಿಕ್ಯುಲೋಸಿಸ್: ಕರುಳಿನ ಒಳಭಿತ್ತಿ ದುರ್ಬಲವಾಗುವುದು ಮತ್ತು ಕಡಿಮೆ ನಾರಿನಂಶ ಆಹಾರ ಸೇವನೆಯಿಂದ ಇದು ಉಂಟಾಗುತ್ತದೆ.
– ಅಧಿಕ ರಕ್ತದೊತ್ತಡ: ಇದು ಕೂಡ ವಯಸ್ಸು ಹೆಚ್ಚುತ್ತಿದ್ದಂತೆ ಹೆಚ್ಚಳವಾಗುತ್ತದೆ. ಉಪ್ಪು ಸೇವನೆಗಿಂತಲೂ ಅಧಿಕ ದೇಹತೂಕ ಇದರ ಅಪಾಯಾಂಶವಾಗಿದೆ.
– ಎಥೆರೊಸ್ಲೆರೋಸಿಸ್: ಹೆಚ್ಚು ಸ್ಯಾಚುರೇಟೆಡ್ ಕೊಬ್ಬು ಇರುವ ಆಹಾರ ಇದರ ಅಪಾಯಾಂಶವಾಗಿದೆ. ಹೃದಯಾಘಾತ/ ಆ್ಯಂಜಿನಾಕ್ಕೆ ಕಾರಣವಾಗಬಹುದು.
– ಕ್ಯಾನ್ಸರ್: ಮಾಲಿನ್ಯಕಾರಕಗಳು, ಆಹಾರದಲ್ಲಿ ರಾಸಾಯನಿಕಗಳು, ಧೂಮಪಾನ ಮತ್ತು ಆಹಾರಾಭ್ಯಾಸಗಳಿಗೂ ಕ್ಯಾನ್ಸರ್‌ಗೂ ಇರುವ ಸಂಬಂಧದ ಬಗ್ಗೆ ಸಾಕಷ್ಟು ಅಧ್ಯಯನಗಳು ನಡೆದಿವೆ. ವೈದ್ಯ ವಿಜ್ಞಾನಕ್ಕೆ ಇನ್ನೂ ಚೆನ್ನಾಗಿ ಅರ್ಥವಾಗದ ವಿವಿಧ ಕಾರಣಗಳಿಂದಾಗಿ ವಯಸ್ಸಾಗುತ್ತಿದ್ದಂತೆ ಕ್ಯಾನ್ಸರ್‌ನ ಅಪಾಯ ಹೆಚ್ಚುತ್ತ ಹೋಗುತ್ತದೆ. ಸೇವಿಸಬಹುದಾದ ಆಹಾರ
– ದಾಲ್
– ಖೀಚಡಿ
– ಉಪ್ಪಿಟ್ಟು
– ಖೀರು
– ಅವಲಕ್ಕಿ
– ತರಕಾರಿ ಸೂಪ್
– ಹಣ್ಣಿನ ರಸ
– ಚೆನ್ನಾಗಿ ಬೇಯಿಸಿದ ಮೊಟ್ಟೆ, ಮೀನು, ಕೋಳಿ
Related Articles
Advertisement