Advertisement

ವೃದ್ಧಾಪ್ಯದಲ್ಲಿ ದೇಹಪುಷ್ಟಿ

10:38 PM Jul 27, 2019 | Sriram |

ಕಳೆದ ಸಂಚಿಕೆಯಿಂದ-ಹಿರಿಯರಲ್ಲಿ ಪೌಷ್ಟಿಕಾಂಶ ವಿಶ್ಲೇಷಣೆಯು ಪೌಷ್ಟಿಕಾಂಶ ಕೊರತೆಯ ಸ್ಥಿತಿಗಳನ್ನು ಗುರುತಿಸುವುದು ಮಾತ್ರವಲ್ಲದೆ, ಹೆಚ್ಚುವರಿ ಪೌಷ್ಟಿಕಾಂಶ ಸ್ಥಿತಿಯನ್ನು ಹಾಗೂ ಆಹಾರಾಭ್ಯಾಸ ಸಂಬಂಧಿಯಾದ ದೀರ್ಘ‌ಕಾಲಿಕ ಕಾಯಿಲೆಗಳನ್ನು ಗುರುತಿಸುವ ಗುರಿ ಹೊಂದಿರುತ್ತದೆ. ವಯಸ್ಕರಲ್ಲಿ ಪೌಷ್ಟಿಕಾಂಶ ಸ್ಥಿತಿಯನ್ನು ಗುರುತಿಸುವ ವಿಚಾರದಲ್ಲಿಯೂ ಕೆಲವು ಸಮಸ್ಯೆಗಳಿವೆ. ಆದರೆ, ಸದ್ಯ ಲಭ್ಯವಿರುವ ವಿಶ್ಲೇಷಣಾ ವಿಧಾನಗಳ ಮೂಲಕ ಅತ್ಯಂತ ಹಿರಿಯ ವಯಸ್ಕರ ಪೌಷ್ಟಿಕಾಂಶ ಸ್ಥಿತಿಗತಿಗಳನ್ನು ಕೂಡ ನಿಖರವಾಗಿ ವಿಶ್ಲೇಷಿಸಬಹುದಾಗಿದೆ.

Advertisement

ವಯಸ್ಸಾಗುತ್ತಿದ್ದಂತೆ ಅಪೌಷ್ಟಿಕತೆಯ ಸಮಸ್ಯೆಯಲ್ಲಿ ಸಿಲುಕಬಹುದಾದವರು ಯಾರೆಂದರೆ, ಬಡತನದ ಕಾರಣದಿಂದ ಆಹಾರ ಲಭ್ಯತೆ ಇಲ್ಲದಿರುವವರು, ದೀರ್ಘ‌ಕಾಲಿಕ ಮುಪ್ಪಿನ ಕಾಯಿಲೆಗಳಿಂದಾಗಿ ವೈಕಲ್ಯಕ್ಕೆ ತುತ್ತಾಗುವವರು ಅಥವಾ ಈ ಎರಡೂ ಅಂಶಗಳು ಜತೆಯಾಗಿರುವವರು. ಬಡವರಾಗಿದ್ದು ಸ್ವಂತ ಮನೆಯಲ್ಲಿ ಏಕಾಂಗಿಯಾಗಿ ವಾಸಿಸುತ್ತಿರುವವರು ಮತ್ತು ವೈಕಲ್ಯದಿಂದಾಗಿ ಮನೆಯೊಳಗೆ ಉಳಿಯಬೇಕಾಗಿ ಬಂದಿರುವ ವೃದ್ಧರು ನಮ್ಮ ಸಮಾಜದಲ್ಲಿ ಅಪೌಷ್ಟಿಕತೆಗೆ ತುತ್ತಾಗಿರುವುದು ಕಂಡುಬರುತ್ತದೆ.

ಮುಂದುವರಿಯುವುದು

Advertisement

Udayavani is now on Telegram. Click here to join our channel and stay updated with the latest news.

Next