Advertisement
ಪ್ರಸ್ತುತ ಜಗತ್ತಿನಲ್ಲಿ ನಾವು ನೋಡುತ್ತಿರುವಂತೆ ಎತ್ತರವಾದ, ಉತ್ತಮವಾಗಿ ನಿರ್ವಹಿಸುವ ದೇಹದ ಆಕಾರ, ಬೆಳ್ಳಗಾಗಿರುವುದು ಇತ್ಯಾದಿಗಳನ್ನು ಹೆಚ್ಚಿನ ಜನರು ನಿರೀಕ್ಷಿಸುತ್ತಾರೆ ಮತ್ತು ಸಮಾಜವು ಚೆನ್ನಾಗಿ ಸ್ವೀಕರಿಸುತ್ತಾರೆ. ಹೆಚ್ಚಿನ ಜನರು, ವಿಶೇಷವಾಗಿ ಯುವಕ/ಯುವತಿಯರು ಈ ದೈಹಿಕ ನೋಟವನ್ನು ಪೂರೈಸಲು ಏನು ಬೇಕಾದರೂ ಮಾಡಲು ಸಿದ್ಧರಾಗಿರುತ್ತಾರೆ ಎಂದು ನಾವು ನೋಡುತ್ತೇವೆ. ಇಂತಹ ಪ್ರವೃತ್ತಿಯು ಅನೇಕ ಬೆದರಿಸುವ ಮತ್ತು ರ್ಯಾಗಿಂಗ್ ಘಟನೆಗಳಿಗೆ ಕೇಂದ್ರವಾಗಿದೆ.
Related Articles
Advertisement
ಹದಿಹರೆಯದವರು ಬಾಡಿ ಶೇಮಿಂಗ್‌ನಿಂದ ಬಿಡುಗಡೆಯನ್ನು ಹುಡುಕುತ್ತಾ ತಮ್ಮ ಜೀವನವನ್ನು ಹೇಗೆ ಹಾಳುಮಾಡಿಕೊಳ್ಳುತ್ತಿದ್ದಾರೆ?
ಹದಿಹರೆಯದವರು ಡ್ರಗ್ಸ್ ಅಥವಾ ಮಾದಕ ವ್ಯಸನವನ್ನು ಅಂಟಿಸಿಕೊಳ್ಳುವುದರಿಂದ ದೇಹದ ಶೇಮಿಂಗ್‌ನಿಂದ ಉಂಟಾಗುವ ಆತಂಕದಿಂದ ವಿಶ್ರಾಂತಿ ಪಡೆಯಲು ಸಹಾಯ ಮಾಡುತ್ತದೆ ಎಂದು ಭಾವಿಸುತ್ತಾರೆ. ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ಹದಿಹರೆಯದವರು ಸುಲಭವಾಗಿ ಮಾದಕ ವ್ಯಸನಕ್ಕೆ ಒಳಗಾಗುತ್ತಿರುವುದು ಸಮಾಜಕ್ಕೆ ಶಾಪವಾಗಿದೆ. ಬಾಡಿ ಶೇಮಿಂಗ್‌ನ ಋಣಾತ್ಮಕ ಪರಿಣಾಮಗಳನ್ನು ಎದುರಿಸಲು ಔಷಧಗಳ ಸೇವನೆಯು ಸುಲಭವಾದ ಮಾರ್ಗವಾಗಿದೆ ಎಂದು ಭಾವಿಸಿಕೊಂಡು ಅದಕ್ಕೆ ಬಲಿಯಾಗುತ್ತಿದ್ದಾರೆ. ಆದರೆ ಮಾದಕ ಪದಾರ್ಥಗಳು ನಮ್ಮ ಸಮಸ್ಯೆಗಳಿಗೆ ತಾತ್ಕಾಲಿಕ ಪರಿಹಾರವನ್ನು ಮಾತ್ರ ನೀಡುತ್ತವೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಇದಲ್ಲದೇ ಮಾದಕ ಪದಾರ್ಥಗಳ ಸೇವನೆಯು ತೀವ್ರವಾದ ಮೆದುಳಿನ ಹಾನಿ, ಆತಂಕದ ಸಮಸ್ಯೆಗಳಿಗೆ ಕಾರಣವಾಗಬಹುದು ಮತ್ತು ಸಾವಿಗೆ ಕಾರಣವಾಗಬಹುದು.
ಬಾಡಿ ಶೇಮಿಂಗ್ ಅನ್ನು ನಿವಾರಿಸುವುದು ಹೇಗೆ?
ಎಲ್ಲ ರೀತಿಯ ಬೆದರಿಸುವಿಕೆಯ ಪರಿಣಾಮಗಳಂತೆ ಇತರರು ರವಾನಿಸಿದ ಕಾಮೆಂಟ್ಸ್‌ಗಳನ್ನು ನಾವು ನಂಬಲು ಪ್ರಾರಂಭಿಸಿದಾಗ ಮಾತ್ರ ದೇಹದ ಶೇಮಿಂಗ್ ಪರಿಣಾಮಗಳನ್ನು ನೋಡಬೇಕಾಗುತ್ತದೆ. ಬದಲಾಗಿ ನಾವು ಏನಾಗಿದ್ದೇವೆಯೋ ಹಾಗೆಯೇ ನಮ್ಮನ್ನು ನಾವು ಗೌರವಿಸುವುದನ್ನು ಪ್ರಾರಂಭಿಸಬೇಕು. ‘ಎಲ್ಲವೂ ನಮ್ಮ ಕೈಯಲ್ಲಿ ಇರುತ್ತದೆ’ ಅಂದರೆ ಎಲ್ಲವೂ ನಾವು ಇತರರು ಕಾಮೆಂಟ್‌ಗಳನ್ನು ಸ್ವೀಕರಿಸುವ ವಿಧಾನವನ್ನು ಅವಲಂಬಿಸಿರುತ್ತದೆ. ನಾವು ಇತರರ ಕಾಮೆಂಟ್‌ಗಳನ್ನು ನಕಾರಾತ್ಮಕ ರೀತಿಯಲ್ಲಿ ತೆಗೆದುಕೊಂಡರೆ ಅದು ತೀವ್ರ ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಆದರೆ ಅದೇ ಕಾಮೆಂಟ್‌ಗಳನ್ನು ಸಕಾರಾತ್ಮಕ ರೀತಿಯಲ್ಲಿ ತೆಗೆದುಕೊಂಡಲ್ಲಿ ಇದು ನಮ್ಮ ಇಚ್ಛೆ ಹಾಗೂ ಆತ್ಮವಿಶ್ವಾಸವನ್ನು ಸುಧಾರಿಸುತ್ತದೆ ಮತ್ತು ನಮ್ಮನ್ನು ಉತ್ತಮ ಮನಸ್ಥಿತಿಗೆ ಕೊಂಡೊಯ್ಯುತ್ತದೆ. ಈ ಪರಿಸ್ಥಿತಿಯನ್ನು ಎದುರಿಸಿದ ಮತ್ತು ಅದನ್ನು ಮೀರಿದ ಅನೇಕ ಜನರಿದ್ದಾರೆ. ಈ ಸಮಸ್ಯೆಗಳನ್ನು ಅನುಭವಿಸುವವರು ಮನೋವೈದ್ಯರು, ಮನೋಶಾಸ್ತ್ರಜ್ಞರು, ಅಥವಾ ಔದ್ಯೋಗಿಕ ಚಿಕಿತ್ಸಕರು ಸೇರಿದಂತೆ ವೈದ್ಯಕೀಯ ವೃತ್ತಪರರಿಂದ ಸಹಾಯವನ್ನು ಪಡೆಯಬಹುದು. ನಮ್ಮ ದೇಹವು ನಮಗೆ ದೊರೆತಂತಹ ಅಮೂಲ್ಯವಾದ ವರದಾನ. ಅದನ್ನು ಪ್ರೀತಿಸಿ ಅದರ ಕಾಳಜಿ ವಹಿಸುವುದು ನಮ್ಮ ಜವಾಬ್ದಾರಿ. ಪ್ರತಿಯೊಬ್ಬ ಮನುಷ್ಯನು ತನ್ನದೇ ಆದ ದೈಹಿಕ ಗುರುತನ್ನು ಹೊಂದಿರುತ್ತಾನೆ. ಅವರ ದೈಹಿಕ ನೋಟದಿಂದ ಯಾರನ್ನೂ ನಿರ್ಣಯಿಸಬಾರದು. ಬನ್ನಿ. ನಾವು ಪರಸ್ಪರರನ್ನು ಗೌರವಿಸೋಣ ಹಾಗೂ ಇದರಿಂದ ಪ್ರಬುದ್ಧ ಸಮಾಜವನ್ನು ನಿರ್ಮಿಸೋಣ.
ಅಪೂರ್ವಾ ಹೆಗಡೆ ದ್ವಿತೀಯ ವರ್ಷದ ಬಿಒಟಿ ವಿದ್ಯಾರ್ಥಿನಿ
ಶಾಲಿನಿ ಕ್ವಾಡ್ರಸ್ ಅಸಿಸ್ಟೆಂಟ್ ಪ್ರೊಫೆಸರ್-ಸೀನಿಯರ್ ಸ್ಕೇಲ್ ಆಕ್ಯುಪೇಶನಲ್ ಥೆರಪಿ ವಿಭಾಗ, ಎಂಸಿಎಚ್‌ಪಿ, ಮಾಹೆ, ಮಣಿಪಾಲ