ಮುಂಬೈ: ಕಳೆದ ಬುಧವಾರ(ಡಿ.18) ಮುಂಬೈ ಗೇಟ್ ವೇ ಆಫ್ ಇಂಡಿಯಾ ಬಳಿ ಸಂಭವಿಸಿದ ದೋಣಿ ದುರಂತದಲ್ಲಿ ನಾಪತ್ತೆಯಾಗಿದ್ದ ಏಳು ವರ್ಷದ ಬಾಲಕನ ಶವ ಶನಿವಾರ ಪತ್ತೆಯಾಗಿದ್ದು, ಇದರೊಂದಿಗೆ ದೋಣಿ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 15ಕ್ಕೆ ಏರಿಕೆಯಾಗಿದೆ.
ಮೃತ ಬಾಲಕನನ್ನು ಜೋಹಾನ್ ಮೊಹಮ್ಮದ್ ನಿಸಾರ್ ಅಹಮ್ಮದ್ ಪಠಾಣ್(7) ಎಂದು ಗುರುತಿಸಲಾಗಿದ್ದು, ಅವರ ತಾಯಿ ಕೂಡ ದೋಣಿ ದುರಂತದಲ್ಲಿ ಸಾವನ್ನಪ್ಪಿದ್ದಾರೆ ಮೃತರು ಗೋವಾ ಮೂಲದವರು ಎನ್ನಲಾಗಿದೆ.
ನಾಪತ್ತೆಯಾದ ಬಾಲಕನ ಹುಡುಕಾಟಕ್ಕೆ ನೌಕಾಪಡೆಯ ಹೆಲಿಕಾಪ್ಟರ್ ಮತ್ತು ನೌಕಾಪಡೆ ಮತ್ತು ಕೋಸ್ಟ್ ಗಾರ್ಡ್ನ ದೋಣಿಗಳ ಮೂಲಕ ಸತತ ಕಾರ್ಯಾಚರಣೆ ನಡೆಸಿ ಮೂರೂ ದಿನಗಳ ಬಳಿಕ ಮೃತದೇಹವನ್ನು ಪತ್ತೆಹಚ್ಚಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಳೆದ ಬುಧವಾರ(ಡಿ.18) ರಂದು ಮುಂಬೈನ ಪ್ರಸಿದ್ಧ ಪ್ರವಾಸಿ ತಾಣವಾದ ಎಲಿಫೆಂಟಾ ದ್ವೀಪಕ್ಕೆ ನೂರಾರು ಜನರನ್ನು ಹೊತ್ತ ನೀಲ್ ಕಮಲ್ ದೋಣಿ ಪ್ರಯಾಣಿಸುತ್ತಿದ್ದ ವೇಳೆ ನೌಕಾಪಡೆಯ ಸ್ಪೀಡ್ ಬೋಟ್ ನೀಲ್ ಕಮಲ್ ದೋಣಿಗೆ ಡಿಕ್ಕಿ ಹೊಡೆದು ಅವಘಡ ಸಂಭವಿಸಿದೆ ಪರಿಣಾಮ ದೋಣಿಯಲ್ಲಿದ್ದ ನೂರಕ್ಕೂ ಹೆಚ್ಚು ಮಂದಿ ಸಮುದ್ರ ಪಾಲಾಗಿದ್ದು ಕೂಡಲೇ ಕಾರ್ಯ ಪ್ರವೃತ್ತರಾದ ರಕ್ಷಣಾ ತಂಡ ಹೆಚ್ಚಿನ ಪ್ರವಾಸಿಗರನ್ನು ರಕ್ಷಣೆ ಮಾಡಿದೆ ಅಲ್ಲದೆ ಘಟನೆಯಲ್ಲಿ ಹದಿನಾಲ್ಕು ಮಂದಿ ಮೃತಪಟ್ಟು ಹಲವರು ಗಾಯಗೊಂಡಿದ್ದರು ಜೊತೆಗೆ ಓರ್ವ ಬಾಲಕ ನಾಪತ್ತೆಯಾಗಿದ್ದ ಇದಾದ ಬಳಿಕ ಕಾರ್ಯಾಚರಣೆ ನಡೆಸಿದ ತಂಡ ಸತತ ಮೂರೂ ದಿನಗಳ ಕಾರ್ಯಾಚರಣೆ ನಡೆಸಿ ಬಾಲಕನ ಶವ ಪತ್ತೆಹಚ್ಚಿದೆ.
ಇದನ್ನೂ ಓದಿ: Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್ಗಳಲ್ಲಿ ಬಲಿಪೂಜೆ