Advertisement

Tragedy: ನಾಪತ್ತೆಯಾಗಿದ್ದ 3 ವರ್ಷದ ಮಗು ನೆರೆಮನೆಯ ವಾಷಿಂಗ್ ಮೆಷಿನ್ ನಲ್ಲಿ ಶವವಾಗಿ ಪತ್ತೆ

12:54 PM Sep 10, 2024 | Team Udayavani |

ಚೆನ್ನೈ: ಸೋಮವಾರ (ಸೆ.9) ಮನೆಯ ಮುಂದೆ ಆಟವಾಡುತ್ತಿದ್ದ ಮೂರೂ ವರ್ಷದ ಮಗು ಇದ್ದಕ್ಕಿದಂತೆ ನಾಪತ್ತೆಯಾಗಿದ್ದು ಇದೀಗ ಮಗುವಿನ ಶವ ಪಕ್ಕದ ಮನೆಯ ವಾಷಿಂಗ್ ಮೆಷಿನ್ ನಲ್ಲಿ ಪತ್ತೆಯಾಗಿದ್ದು ಘಟನೆಗೆ ಸಂಬಂಧಿಸಿ ಪಕ್ಕದ ಮನೆಯ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.

Advertisement

ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯ ರಾಧಾಪುರಂ ನಿವಾಸಿಯಾಗಿರುವ ವಿಘ್ನೇಶ್ ಮತ್ತು ರಮ್ಯಾ ದಂಪತಿಯ ಪುತ್ರನಾದ ಸಂಜಯ್ ನೆರೆಮನೆಯ ಮಹಿಳೆಯ ಕೃತ್ಯದಿಂದ ಜೀವಕಳೆದುಕೊಂಡ ನತದೃಷ್ಟ ಮಗುವಾಗಿದೆ. ಘಟನೆಗೆ ಸಂಬಂಧಿಸಿ ನೆರೆಮನೆಯ ತಂಕಮ್ಮಳನ್ನು ಪೊಲೀಸರು ಬಂಧಿಸಿದ್ದಾರೆ.

ಏನಿದು ಘಟನೆ:
ಸೋಮವಾರ ಬೆಳಿಗ್ಗೆ ಸುಮಾರು 9.30 ರ ಹೊತ್ತಿಗೆ ಸಂಜಯ್ ಅಂಗನವಾಡಿಗೆ ಹೊರಡಲು ತಯಾರಾಗಿ ಮನೆಯ ಹಿತ್ತಲಲ್ಲಿ ಆಟವಾಡುತ್ತಿದ್ದ ಎನ್ನಲಾಗಿದೆ ಈ ವೇಳೆ ತಾಯಿ ಮನೆಯೊಳಗೆ ಕೆಲಸ ಮಾಡಿಕೊಂಡಿದ್ದು ಬಳಿಕ ಮಗುವನ್ನು ಅಂಗನವಾಡಿಗೆ ಕಳುಹಿಸಲು ಮನೆಯ ಹೊರಗೆ ಬಂದಿದ್ದಾರೆ ಆದರೆ ಮನೆಯ ಹೊರಗೆ ಆಟವಾಡುತ್ತಿದ್ದ ಸಂಜಯ್ ಎಲ್ಲೂ ಕಾಣಲಿಲ್ಲ ಎಲ್ಲಾ ಕಡೆ ಹುಡುಕಾಡಿದರೂ ಸಂಜಯ್ ಪತ್ತೆಯಾಗಲಿಲ್ಲ ಬಳಿಕ ಗಾಬರಿಗೊಂಡ ಮಹಿಳೆ ಗಂಡನಿಗೆ ವಿಚಾರ ತಿಳಿಸಿದ್ದಾರೆ ಗಂಡ ಕೂಡಲೇ ಮನೆಗೆ ಬಂದು ಎಲ್ಲ ಕಡೆ ಹುಡುಕಾಡಿದ್ದಾರೆ ಆದರೂ ಎಲ್ಲೂ ಪತ್ತೆಯಾಗಲಿಲ್ಲ. ಬಳಿಕ ಪೋಷಕರು ಪಕ್ಕದ ಪೊಲೀಸ್ ಠಾಣೆಗೆ ಮಗು ನಾಪತ್ತೆಯಾಗಿರುವ ಬಗ್ಗೆ ದೂರು ನೀಡಿದ್ದಾರೆ.

ದೂರು ದಾಖಲಿಸಿಕೊಂಡ ಪೊಲೀಸರು ಘಟನಾ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ ಅಲ್ಲದೆ ಕುಟುಂಬಕ್ಕೆ ಯಾರ ಮೇಲಾದರೂ ಅನುಮಾನ ಇದೆಯಾ ಎಂದು ಕೇಳಿದ್ದಾರೆ ಆಗ ಪೋಷಕರು ಪಕ್ಕದ ಮನೆಯ ಮಹಿಳೆಯ ಮೇಲೆ ಅನುಮಾನ ಇದೆ ಎಂದು ಹೇಳಿಕೊಂಡಿದ್ದಾರೆ (ಈ ಹಿಂದೆ ಜಾಗದ ವಿಚಾರದಲ್ಲಿ ಎರಡು ಕುಟುಂಬಗಳ ನಡುವೆ ಜಗಳಗಳು ನಡೆದಿತ್ತು) ಅದರಂತೆ ಪೊಲೀಸರು ನೆರೆಮನೆಯಲ್ಲಿ ಪರಿಶೀಲನೆ ನಡೆಸಲು ಮುಂದಾಗಿದ್ದಾರೆ ಅಲ್ಲದೆ ಮನೆಯಲ್ಲಿದ್ದ ಆರೋಪಿ ತಂಕಮ್ಮ ತನಗೇನು ಗೊತ್ತಿಲ್ಲ ಎಂಬಂತೆ ನಟಿಸಿದ್ದಾಳೆ ಪೊಲೀಸರು ಮನೆಯ ಒಳಗೆ ಹುಡುಕಾಟ ನಡೆಸುವ ವೇಳೆ ಗಾಬರಿಗೊಂಡ ತಂಕಮ್ಮ ಮನೆಯಿಂದ ಹೊರ ಓಡಿ ಹೋಗಿದ್ದಾಳೆ ಇದರಿಂದ ಅನುಮಾನಗೊಂಡ ಪೊಲೀಸರು ಮನೆಯನ್ನು ಕೂಲಂಕುಷವಾಗಿ ಪರಿಶೀಲನೆ ನಡೆಸಿದ ವೇಳೆ ಮನೆಯೊಳಗಿದ್ದ ವಾಷಿಂಗ್ ಮೆಷಿನ್ ಒಳಗೆ ಬಟ್ಟೆಯಿಂದ ಸುತ್ತಿದ ರೀತಿಯಲ್ಲಿ ಸಂಜಯ್ ಮೃತದೇಹ ಪತ್ತೆಯಾಗಿದೆ.

ಕೂಡಲೇ ಎಚ್ಚೆತ್ತ ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Advertisement

ಮಗುವಿನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ಕಳುಹಿಸಲಾಗಿದ್ದು. ಕೊಲೆಗೆ ಕಾರಣವೇನು ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೂಲಗಳ ಪ್ರಕಾರ ಎರಡು ಕುಟುಂಬಗಳ ನಡುವೆ ಹಳೆಯ ದ್ವೇಷವಿತ್ತು ಎಂದು ಹೇಳುತ್ತಾರೆ. ಅಲ್ಲದೆ ತಂಕಮ್ಮಾಳ್ ಅವರ ಪುತ್ರ ಇತ್ತೀಚೆಗೆ ನಿಧನಹೊಂದಿದ್ದ ಎನ್ನಲಾಗಿದ್ದು ಇದರಿಂದ ತಂಕಮ್ಮಾಳ್ ಖಿನ್ನತೆಗೆ ಒಳಗಾಗಿದ್ದರು ಎಂದು ಸ್ಥಳೀಯರು ಹೇಳಿಕೊಂಡಿದ್ದಾರೆ.

ತಂಕಮ್ಮಳನ್ನು ಕೂಲಂಕಷವಾಗಿ ವಿಚಾರಣೆ ನಡೆಸಿದ ನಂತರ ಸ್ಪಷ್ಟನೆ ನೀಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: Rajasthan: ಹಳಿ ಮೇಲೆ ಸಿಮೆಂಟ್ ಬ್ಲಾಕ್ ಇಟ್ಟು ದುಷ್ಕರ್ಮಿಗಳಿಂದ ರೈಲು ಹಳಿ ತಪ್ಪಿಸಲು ಸಂಚು

Advertisement

Udayavani is now on Telegram. Click here to join our channel and stay updated with the latest news.

Next