Advertisement

ದೇಹವೇ ಅಯಸ್ಕಾಂತ!

11:36 AM May 03, 2018 | |

ಹಲವಾರು ಕ್ಷೇತ್ರಗಳಲ್ಲಿ ವಿಶೇಷ ಸಾಮರ್ಥ್ಯ ಹಾಗೂ ಕಠಿಣ ಪರಿಶ್ರಮದಿಂದ ಖ್ಯಾತಿ ಪಡೆದ ಹಲವಾರು ಪರಿಣತರನ್ನು ನಾವು ನೋಡಿದ್ದೇವೆ ಹಾಗೂ ಪುಸ್ತಕಗಳಲ್ಲಿ ಓದಿ ತಿಳಿದುಕೊಂಡಿದ್ದೇವೆ. ಆದರೆ ಇಲ್ಲೊಬ್ಬ ಮನುಷ್ಯನಿದ್ದಾನೆ, ಅವನ ಹೆಸರು ಮಿರೋಸ್ಲಾವ್‌ ಮಾಗೊಲಾ. ಈತ ಕಬ್ಬಿಣದ ವಸ್ತುಗಳನ್ನು ಆಯಸ್ಕಾಂತದಂತೆ ತನ್ನತ್ತ ಸೆಳೆಯಬಲ್ಲ! 

Advertisement

ಇದು ಸಾಧ್ಯವೇ?
ಮಿರೋಸ್ಲಾವ್‌ ಮ್ಯಾಗ್ನೆಟ್‌ಮ್ಯಾನ್‌ ಎಂದೇ ಪ್ರಸಿದ್ದಿ ಪಡೆದಿದ್ದಾನೆ. ಈತನ ಹೆಗ್ಗಳಿಕೆ ಎಂದರೆ ಈತ ತನ್ನ ಮನಸ್ಸನ್ನು ಕೇಂದ್ರೀಕರಿಸಿ, ಅಗಾಢ ಮಾನಸಿಕ ಶಕ್ತಿಯ ಬಲದಿಂದ ಭೂಮಿಯ ಗುರುತ್ವಾಕರ್ಷಣಾ ಶಕ್ತಿಯಿಂದ ವಸ್ತುಗಳನ್ನು ಕಣ್ತಪ್ಪಿಸಿ ತನ್ನತ್ತ ಸೆಳೆಯುವ ಚಾಕಚಕ್ಯತೆ ಇವನಲ್ಲಿದೆ. ಮಾನಸಿಕ ಶಕ್ತಿಯನ್ನು ಕೇಂದ್ರೀಕರಿಸಿ ವಶೀಕರಣ ಮಾಡುವವರ ನಡುವೆ ಇಂಥದ್ದೊಂದು ಅಪೂರ್ವ ಸಾಧನೆ ಮಾಡುತ್ತಿರುವ ಮಿರೋಸ್ಲಾವ್‌ ಮಾಗೊಲಾ ಇತರರೆಲ್ಲರಿಗಿಂತ ಪ್ರತ್ಯೇಕವಾಗಿ ಗುರುತಿಸಿಕೊಳ್ಳುತ್ತಾನೆ. ಕಠಿಣ ಪರಿಶ್ರಮದಿಂದ ಈ ಅತೀಂದ್ರೀಯ ಶಕ್ತಿಯನ್ನು ಸಂಪಾದಿಸಿಕೊಂಡಿರುವ ಮಿರೋಸ್ಲಾವ್‌ ಮಾಗೊಲಾ ತನ್ನ ಶಕ್ತಿಯನ್ನು ಕೇವಲ ಪ್ರದರ್ಶನಗಳಿಗೆ ಮಾತ್ರ ಸೀಮಿತಗೊಳಿಸಿಕೊಂಡಿದ್ದಾನೆ.

ವಿಜ್ಞಾನಿಗಳಿಗೂ ಅನುಮಾನ ಬಂದಿತ್ತು!
ಈತನ ಬಗ್ಗೆ ಕೌತುಕಗೊಂಡ ಭೌತಜ್ಞಾನಿಗಳು ಇದರ ಕುರಿತು ಸಂಶೋಧನೆಗಳನ್ನು ಕೈಗೊಂಡಾಗ ಇದು ಸೈಕೋಕೈನಟಿಕ್ಸ್‌ನ ಪರಿಣಾಮವೆಂದು ನಿರ್ಧರಿಸಿ ಇದರಲ್ಲಿ ಯಾವುದೇ ರೀತಿಯ ಕಣRಟ್ಟು ಇಲ್ಲವೆಂದು ಧೃಢಪಡಿಸಿದ್ದಾರೆ. ಭೂಮಿಗಿರುವ ಆಕರ್ಷಣೆಯ ಗುಣದ ಗುರುತ್ವಬಲವನ್ನು ವಿರೋಧಿಸಿ ವಸ್ತುಗಳನ್ನು ಸೆಳೆಯುವ ತಂತ್ರವಷ್ಟೇ ಇದರಲ್ಲಿ ಅಡಗಿದೆ ಎಂದು ವರದಿ ಮಾಡಿದ್ದಾರೆ . ಇದರಲ್ಲಿರುವುದು ಕೇವಲ ಮಾನಸಿಕ ಇಚ್ಚಾಶಕ್ತಿ ಎಂದೂ ವಿವರಿಸಲಾಗಿದೆ ಮತ್ತು ಅಗಾಧವಾದ ಮಾನಸಿಕ ಶಕ್ತಿಯುಳ್ಳವರಿಂದ ಇಂಥ ಅಪ್ರತಿಮ ಸಾಧನೆಗಳನ್ನು ಸಾಧಿಸಲು ಸಾಧ್ಯ ಎಂದು ಉಲ್ಲೇಖೀಸಿದ್ದಾರೆ.

ಇದನ್ನು ಒಪ್ಪಿಕೊಳ್ಳದ ಅನೇಕ ಸಂಶೋಧಕರಿಂದ ಇಂದಿಗೂ ಮಿರೋಸ್ಲಾವ್‌ ಮಾಗೊಲಾನ ಕುರಿತಾದ ಸಂಶೋಧನೆಗಳು ಮುಂದುವರಿದಿವೆ. ಆದರೆ ಇದಾವುದಕ್ಕೂ ತಲೆಕೆಡಿಸಿಕೊಳ್ಳದ ಮಿರೋಸ್ಲಾವ್‌ ಎಲ್ಲಾ ರೀತಿಯ ಸಂಶೋಧನೆಗಳಿಗೆ ಸಹಕಾರ ನೀಡುತ್ತಾ, ತನ್ನ ದೇಹ ಕೌತುಕದ ಕುರಿತು ತಿಳಿಯಲು ತಾನೂ ಕಾತರನಾಗಿರುವುದಾಗಿ ಹೇಳುತ್ತಾನೆ.

ಈತ ವಿಶ್ವವಿಖ್ಯಾತ
ಮಿರೋಸ್ಲಾವ್‌ ಮಾಗೊಲಾ ಇದುವರೆಗೂ ಅನೇಕ ದೂರದರ್ಶನ ಕಾರ್ಯಕ್ರಮಗಳನ್ನು ನೀಡಿದ್ದಾನೆ. ಜೊತೆಗೆ ಜಗತ್ತಿನ ಹಲವಾರು ಸ್ಥಳಗಳಲ್ಲಿ ತನ್ನ ಕೌಶಲ್ಯವನ್ನು ಪ್ರದರ್ಶಿಸಿದ್ದಾನೆ. ಅನೇಕ ಮಾಧ್ಯಮಗಳಲ್ಲಿ ಇವನ ಸಂದರ್ಶನಗಳೂ ಪ್ರಸಾರವಾಗಿವೆ. “ಎನ್‌ಕೌಂಟರ್‌’ ಎಂಬ ವಿಶ್ವಖ್ಯಾತ ಪತ್ರಿಕೆಯ ಮುಖಪುಟದಲ್ಲಿ ಮಿರೋಸ್ಲಾವ್‌ನ ಭಾವಚಿತ್ರ ಮುದ್ರಣಗೊಂಡಿದೆ. ಸಾಂಪ್ರದಾಯಿಕ ವಿಜ್ಞಾನದಿಂದ ವಿವರಿಸಲಾಗದ ಮಿರೋಸ್ಲಾವ್‌ ಮಾಗೊಲಾ ನಮ್ಮ ನಿಮ್ಮೆಲ್ಲರ ನಡುವಿನ ಅದ್ಭುತ ಪ್ರತಿಭೆಗಳಲ್ಲೊಬ್ಬನಾಗಿದ್ದಾನೆ.

Advertisement

ಹರೀಶ್‌

Advertisement

Udayavani is now on Telegram. Click here to join our channel and stay updated with the latest news.

Next