Advertisement
ಗೆಳೆಯರೊಬ್ಬರು ಹೊಸ ಮೊಬೈಲ್ ಕೊಂಡ ಬಳಿಕ, ಇದಕ್ಕೆ ಏನೇನು ಕೊಳ್ಳಬೇಕು? ಎಂದು ಕೇಳುತ್ತಾರೆ! ಕನಿಷ್ಟ 8 ಸಾವಿರದಿಂದ 70-80 ಸಾವಿರದವರೆಗೂ ಖರ್ಚು ಮಾಡಿ ಮೊಬೈಲ್ ಕೊಳ್ಳುತ್ತೇವೆ. ಮೊಬೈಲ್ ಕೊಂಡು ಹಾಗೇ ಬಳಸಲಾಗುವುದಿಲ್ಲ. ಅದರ ಗಾಜು ಗೀರಿ ಹೋಗದಂತೆ, ಸಣ್ಣಪುಟ್ಟದಾಗಿ ಕೆಳಗೆ ಬಿದ್ದಾಗ ಗಾಜು, ಮೊಬೈಲ್‌ನ ಹಿಂಬದಿ ಒಡೆದು ಹೋಗದಂತೆ ರಕ್ಷಣೆ ಮಾಡಿಕೊಳ್ಳಲು ಕೆಲವು ರಕ್ಷಕಗಳು ಬೇಕೇ ಬೇಕು.
ಹಾಗಾದರೆ ಒಂದು ಮೊಬೈಲ್‌ಗೆ ಯಾವ ರೀತಿಯ ರಕ್ಷಕಗಳನ್ನು ಬಳಸಬೇಕು? ಟೆಂಪರ್ ಗ್ಲಾಸ್: ಮುಖ್ಯವಾಗಿ, ಮೊಬೈಲ್‌ನ ಪರದೆಯ ರಕ್ಷಣೆಗೆ ಟೆಂಪರ್x ಗ್ಲಾಸ್ ಹಾಕಿಕೊಳ್ಳುವುದು ಬಹಳ ಉಪಕಾರಿ. ಸ್ಕ್ರೀನ್ ಗಾರ್ಡ್‌ಗಳೇ ಬೇರೆ. ಟೆಂಪರ್x ಗ್ಲಾಸ್‌ಗಳೇ ಬೇರೆ. ಸ್ಕ್ರೀನ್ ಗಾರ್ಡ್ ನಿಮ್ಮ ಮೊಬೈಲ್‌ನ ಪರದೆಯ ಮೇಲೆ ಸಣ್ಣಪುಟ್ಟ ಗೀರುಗಳಾಗದಂತೆ ಅಲ್ಪಪ್ರಮಾಣದ ರಕ್ಷಣೆ ನೀಡುತ್ತದೆ ಅಷ್ಟೇ. ಟೆಂಪರ್x ಗ್ಲಾಸ್ ಹಾಕಿದರೆ ಗೀರುಗಳಾಗುವುದೇ ಇಲ್ಲ. ಉತ್ತಮ ಗುಣಮಟ್ಟದ ಟೆಂಪರ್x ಗ್ಲಾಸ್ ಅನ್ನು ಪರದೆಯ ಮೇಲೆ ಅಂಟಿಸಿದರೆ ನಿಮ್ಮ ಜೇಬಿನಲ್ಲಿನ ಕೀಗಳು, ಪೆನ್ನುಗಳು, ನಾಣ್ಯಗಳು ಮೊಬೈಲ್‌ಗೆ ತಗುಲಿ ಉಜ್ಜಿದರೂ ಆ ಟೆಂಪರ್x ಗಾಜಿನ ಮೇಲೆ ಸಹ ಒಂದು ಗೀರು ಸಹ ಆಗುವುದಿಲ್ಲ.
Related Articles
Advertisement
ಅಥವಾ ನಿಮ್ಮೂರಿನಲ್ಲಿರುವ ಮೊಬೈಲ್ ಅಕ್ಸೆಸರಿಗಳನ್ನು ಮಾರುವ ಅಂಗಡಿಗೆ ಹೋಗಿ ಅವರಲ್ಲಿರುವ ಉತ್ತಮ ಟೆಂಪರ್x ಗ್ಲಾಸ್‌ಗಳನ್ನು ಹಾಕಿಸಿಕೊಂಡು ಬಳಸಬಹುದು. ಇನ್ನೊಂದು ವಿಷಯ: ಟೆಂಪರ್x ಗ್ಲಾಸುಗಳನ್ನು ಆನ್ಲ್„ನ್‌ನಲ್ಲ ತರಿಸಿಕೊಂಡರೂ, ನೀವು ಅದನ್ನು ಹಾಕುವ ಪ್ರಯತ್ನ ಮಾಡಬೇಡಿ. ಮೊಬೈಲ್ ಶಾಪ್‌ಗ್ಳಲ್ಲಿ ನುರಿತವರಿಂದ ಹಾಕಿಸಿ.
ಬ್ಯಾಕ್ ಕವರ್, ಫ್ಲಿಪ್‌ಕವರ್: ಪರದೆಯ ರಕ್ಷಣೆಗೆ ಟೆಂಪರ್x ಗ್ಲಾಸ್ ಆಯಿತು. ಇನ್ನು ಮೊಬೈಲ್‌ನ ದೇಹದ ರಕ್ಷಣೆಗೆ? ಇದಕ್ಕಾಗಿ ಫ್ಲಿಪ್‌ಕವರ್ ಅಥವಾ ಬ್ಯಾಕ್ ಕವರ್‌ಗಳನ್ನು ಕೊಳ್ಳಬೇಕು. ಬ್ಯಾಕ್ ಕವರ್ ಎಂದರೆ ಮೊಬೈಲ್‌ನ ಪರದೆ ಮುಚ್ಚುವುದಿಲ್ಲ. ಮೊಬೈಲ್‌ನ ಅಂದ ಕಾಣಬೇಕೆನ್ನುವವರು ಬ್ಯಾಕ್ ಕವರ್ ಬಳಸುತ್ತಾರೆ. ಮೊಬೈಲ್ ಅಂದ ಕಂಡು ನಮಗೇನಾಗಬೇಕು, ಅದು ಸುರಕ್ಷಿತವಾಗಿರಬೇಕು ಎನ್ನುವವರು, ಮೊಬೈಲ್ ಪರದೆ ಕೂಡ ಮುಚ್ಚಿಕೊಳ್ಳುವ, ಪುಸ್ತಕದಂತೆ ತೆರೆಯಬಹುದಾದ ಫ್ಲಿಪ್‌ಕವರ್‌ಗಳನ್ನು ಹಾಕಿಕೊಳ್ಳುತ್ತಾರೆ.
ಮೊಬೈಲ್ ಬ್ಯಾಕ್ ಕವರ್‌ಗಳಲ್ಲೂ ನಿಲ್‌ಕಿನ್ ಕಂಪೆನಿಯವು ಗುಣಮಟ್ಟದ್ದಾಗಿರುತ್ತವೆ. ಇದಲ್ಲದೇ ಸ್ಪೈಗನ್ ಎಂಬ ಕಂಪೆನಿಯ ಬ್ಯಾಕ್ ಕವರ್‌ಗಳು ಬಹಳ ಚೆನ್ನಾಗಿ ರಕ್ಷಣೆ ಮಾಡುತ್ತವೆ. ಇಷ್ಟೇ ಅಲ್ಲದೇ ಫ್ಲಿಪ್‌ಕಾರ್ಟ್ ಆನ್‌ಲೈನ್ ಸ್ಟೋರ್‌ನಲ್ಲಿ ಫ್ಲಿಪ್‌ಕಾರ್ಟ್ ಸ್ಮಾರ್ಟ್‌ಬೈ ಹೆಸರಿನಲ್ಲಿ ಮೊಬೈಲ್ ಬ್ಯಾಕ್ ಕವರ್‌ಗಳು ದೊರಕುತ್ತವೆ. ಅಮೆಜಾನ್.ಇನ್ ನಲ್ಲಿ ಸೋಲಿಮೋ ಎಂಬ ಅಮೆಜಾನ್ ತಯಾರಿಕೆಯ ಬ್ಯಾಕ್ ಕವರ್‌ಗಳು ದೊರಕುತ್ತವೆ. ನೀವು ಅಮೆಜಾನ್ ಅಥವಾ ಫ್ಲಿಪ್‌ಕಾರ್ಟ್ ಆ್ಯಪ್ ತೆರೆದು ನಿಮ್ಮ ಮೊಬೈಲ್ ನ ಹೆಸರು ಹಾಕಿ ಬ್ಯಾಕ್ ಕವರ್ ಎಂದು ಟೈಪಿಸಿದರೆ ನೂರಾರು ಬ್ರಾಂಡ್‌ನ ಹೆಸರುಗಳು ತೆರೆದುಕೊಳ್ಳುತ್ತವೆ. ಆ ಉತ್ಪನ್ನಕ್ಕೆ ಖರೀದಿದಾರರು ನೀಡಿರುವ ರೇಟಿಂಗ್, ವಿಮರ್ಶೆಗಳನ್ನು ಓದಿ ನಿಮಗೆ ಬೇಕಾದ್ದನ್ನು ಆರಿಸಬಹುದು. ಇನ್ನೊಂದು ವಿಷಯವೆಂದರೆ, ಈಗ ಬಹುತೇಕ ಮೊಬೈಲ್‌ಗಳಿಗೆ ಕಂಪೆನಿಗಳೇ ಪಾರದರ್ಶಕ ಬ್ಯಾಕ್ ಕವರ್‌ಗಳನ್ನು ನೀಡಿರುತ್ತವೆ. ಅವು ಬೇಗ ಮಾಸಿದರೂ ಚೆನ್ನಾಗಿ ರಕ್ಷಣೆ ನೀಡುತ್ತವೆ. ಶಿಯೋಮಿ ಕಂಪೆನಿಯ ಮಿ.ಸ್ಟೋರ್‌ನಲ್ಲಿ ಮೊಬೈಲ್ ಬ್ಯಾಕ್ ಕವರ್‌ಗಳು, ಫ್ಲಿಪ್‌ಕವರ್‌ಗಳು ದೊರಕುತ್ತವೆ.
ಪರದೆ ರಕ್ಷಕ, ಮೊಬೈಲ್‌ನ ದೇಹ ರಕ್ಷಕ ಆಯ್ತು. ಇನ್ನೇನು ಕೊಳ್ಳಬೇಕು? ಎಂದರೆ, ಒಂದು ಪವರ್ ಬ್ಯಾಂಕ್ ಕೊಂಡುಕೊಳ್ಳಿ. ನೀವು ಹೆಚ್ಚು ಮೊಬೈಲ್ ಬಳಸುವವರಾದರೆ, ಪ್ರಯಾಣಿಸುವವರಾದರೆ ಒಂದು ಪವರ್ ಬ್ಯಾಂಕ್ ನಿಮ್ಮ ಬಳಿ ಇದ್ದರೆ ಒಳ್ಳೆಯದು. ಕನಿಷ್ಟ 10000 ಎಂಎಎಚ್ ಸಾಮರ್ಥ್ಯ ಇರುವ ಒಂದು ಪವರ್ ಬ್ಯಾಂಕ್ ಪೂರ್ತಿ ಚಾರ್ಜ್ ಮಾಡಿಕೊಂಡಿದ್ದರೆ, ನಿಮ್ಮ ಮೊಬೈಲನ್ನು ಸರಾಸರಿ ಮೂರು ಬಾರಿ ಅದರಿಂದ ಚಾರ್ಜ್ ಮಾಡಿಕೊಳ್ಳಬಹುದು. ಹೊರಗೆ ಹೋದಾಗ ಮೊಬೈಲ್ ಬ್ಯಾಟರಿ ಖಾಲಿಯಾದರೂ, ಪವರ್ ಬ್ಯಾಂಕ್ ಮೂಲಕ ಚಾರ್ಜ್ ಮಾಡಿಕೊಳ್ಳಬಹುದು.
ಪವರ್‌ಬ್ಯಾಂಕ್‌ಗಳಲ್ಲಿ ಶಿಯೋಮಿ (ಎಂಐ), ಅಂಬ್ರಾನೆ, ಫ್ಲಿಪ್‌ಕಾರ್ಟ್ ಸ್ಮಾರ್ಟ್‌ಬೈ, ಡುರಾಸೆಲ್, ಲೆನೊವೋ, ಸಿಸ್ಕಾ, ಫಿಲಿಪ್ಸ್ ಮತ್ತಿತರ ಬ್ರಾಂಡ್‌ಗಳಲ್ಲಿ ದೊರಕುತ್ತವೆ. ಎಗೇನ್ ಹೆಚ್ಚು ರೇಟಿಂಗ್ ಇರುವಂಥವನ್ನು ನೋಡಿ ಆರಿಸಿಕೊಳ್ಳಿ.
ಮೊಬೈಲ್‌ನ ಪರದೆಯನ್ನು, ಪ್ರತಿದಿನ ಮೃದುವಾದ ಹತ್ತಿ ಬಟ್ಟೆಯಲ್ಲಿ ಒರೆಸಿ ಇಟ್ಟುಕೊಳ್ಳಿ. ಕನಿಷ್ಟ ತಿಂಗಳಿಗೊಮ್ಮೆಯಾದರೂ, ಬ್ಯಾಕ್ ಕವರ್, ಫ್ಲಿಪ್ ಕವರ್ ತೆಗೆದು ಅದರೊಳಗಿರುವ ಧೂಳು, ಕಸ ತೆಗೆದು ಸ್ವತ್ಛಗೊಳಿಸಿಕೊಳ್ಳಿ.
– ಕೆ.ಎಸ್. ಬನಶಂಕರ ಆರಾಧ್ಯ