Advertisement

ಧಾರವಾಡ: ಎರಡು ದಿನದ ಹಿಂದೆ ಕೊಚ್ಚಿ ಹೋಗಿದ್ದ ಬಾಲಕಿ 1.5 ಕಿ.ಮೀ ದೂರದಲ್ಲಿಂದು ಶವವಾಗಿ ಪತ್ತೆ

01:44 PM Aug 08, 2020 | keerthan |

ಧಾರವಾಡ: ಕಲಘಟಗಿ ತಾಲೂಕಿನ ಗಂಜಿಗಟ್ಟಿ ಗ್ರಾಮದ ಹಿರೇಕೆರೆ ನೀರಿನ ಸೆಳವಿನಲ್ಲಿ ಕೊಚ್ಚಿ ಹೋಗಿದ್ದ 8 ವರ್ಷದ ಬಾಲಕಿ ಶ್ರೀದೇವಿ ಹನುಮಂತಪ್ಪ ಗಾಣಿಗೇರ ದೇಹ ಇದೀಗ ಸುಮಾರು ಒಂದೂವರೆ ಕಿ.ಮೀ ದೂರದಲ್ಲಿ ಪತ್ತೆಯಾಗಿದೆ.

Advertisement

ಅಗಸ್ಟ್ 6 ರಂದು ಈ ಬಾಲಕಿ ನೀರಿನ ಸೆಳವಿಗೆ ಸಿಕ್ಕು ತೇಲಿ ಹೋಗಿದ್ದಳು. ಅಂದಿನಿಂದ ನಿರಂತರವಾಗಿ ಎನ್ ಡಿಆರ್ ಎಫ್ ಹಾಗೂ ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆಯ ಸಿಬ್ಬಂದಿ ಹಗಲು-ರಾತ್ರಿ ಕಾರ್ಯಾಚರಣೆ ನಡೆಸಿದ್ದರು. ಬಾಲಕಿಯ ದೇಹ ಪತ್ತೆಯಾಗಿದ್ದು ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗುವುದು.

ಬಾಲಕಿಯ ಕುಟುಂಬಕ್ಕೆ ಶೀಘ್ರವೇ ಪರಿಹಾರ ವಿತರಣೆಗೆ ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿಗಳಾದ ನಿತೇಶ ಪಾಟೀಲ ತಿಳಿಸಿದ್ದಾರೆ.

ಇದನ್ನೂ ಓದಿ: ತೋಡಿನಲ್ಲಿ ಗಾಡಿ: ತೊರೆಯ ಪ್ರವಾಹಕ್ಕೆ ಕೊಚ್ಚಿಹೋದ ತೊಳೆಯಲು ನಿಲ್ಲಿಸಿದ್ದ ಪಿಕ್ ಅಪ್!

ಆತುರದ ನಿರ್ಧಾರ ಬೇಡ

Advertisement

ಮಳೆಗಾಲದ ಸಂದರ್ಭದಲ್ಲಿ ಸಾರ್ವಜನಿಕರು, ಗ್ರಾಮೀಣ ಭಾಗದ ನಿವಾಸಿಗಳು ತುಂಬಿ ಹರಿಯುವ ಹಳ್ಳ,ಕೊಳ್ಳಗಳನ್ನು ರಭಸದ ಸಂದರ್ಭದಲ್ಲಿ ದಾಟಲು ಆತುರ ಪಡಬಾರದು ಎಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ.

ನೀರು ಇಳಿಮುಖವಾಗುವವರೆಗೂ ತಾಳ್ಮೆಯಿಂದ ಇರಬೇಕು, ಸ್ಥಳೀಯ ಸ್ವಯಂ ಸೇವಕರು, ಅತಿವೃಷ್ಟಿ ನಿರ್ವಹಣಾ ಸಿಬ್ಬಂದಿಯ ನೆರವು ಪಡೆಯಬಹುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next