Advertisement

Tunga River: ತುಂಗಾ ನದಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ! ಪೊಲೀಸರಿಂದ ಪರಿಶೀಲನೆ

10:39 AM Feb 24, 2024 | Team Udayavani |

ತೀರ್ಥಹಳ್ಳಿ : ತುಂಗಾ ನದಿಯಲ್ಲಿ ಅಪರಿಚಿತ ವ್ಯಕ್ತಿಯ ಶವವೊಂದು ಶನಿವಾರ ಪತ್ತೆಯಾಗಿದ್ದು ಮೂರು ದಿನಗಳ ನಂತರ ಶವ ನೀರಿನಿಂದ ಮೇಲೆ ಬಂದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

Advertisement

ಪಟ್ಟಣದ ಹಳೆ ತುಂಗಾ ಕಾಮಾನು ಸೇತುವೆ ಬಳಿ ಈ ಘಟನೆ ಬೆಳಕಿಗೆ ಬಂದಿದೆ.

ಮೃತದೇಹ ಯಾರದ್ದು ಏನು ಎಂಬುದು ಪೋಲಿಸ್ ತನಿಖೆಯಿಂದ ತಿಳಿದುಬರಬೇಕಿದೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

ಸೇತುವೆ ಬಳಿ ಅನಾಮಧೇಯ ಬೈಕ್ ಪತ್ತೆ!
ತೀರ್ಥಹಳ್ಳಿ : ಪಟ್ಟಣದ ಕುರುವಳ್ಳಿಯ ತುಂಗಾ ಕಾಮಾನು ಸೇತುವೆ ಸಮೀಪ ಸ್ಮಶಾನಕ್ಕೆ ಹೋಗುವ ದಾರಿಯ ಪಕ್ಕದಲ್ಲಿ ಅನಾಮಧೇಯ ಬೈಕ್ ವೊಂದು ಶನಿವಾರ ಪತ್ತೆಯಾಗಿದೆ.

Advertisement

KTM ಬೈಕ್ ಆಗಿದ್ದು ಬೆಂಗಳೂರು ಮೂಲದ ರಿಜಿಸ್ಟರ್ ನಂ ಹೊಂದಿದೆ. KA04KD1905 ಸಂಖ್ಯೆಯ ಬೈಕ್ ಇದಾಗಿದ್ದು ಕಳೆದ ಮೂರು ದಿನಗಳಿಂದ ಬೈಕ್ ನಿಂತಲ್ಲಿಯೇ ನಿಂತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಯಾರದ್ದು ಏನು ಎಂದು ಪೊಲೀಸ್ ತನಿಖೆಯಿಂದ ತಿಳಿಯಬೇಕಿದೆ.

ಇದನ್ನೂ ಓದಿ: Hyderabad: ಟಿವಿ ನಿರೂಪಕನನ್ನೇ ಅಪಹರಿಸಿ ಮದುವೆಯಾಗಲು ಯತ್ನಿಸಿದ ಯುವತಿ, ಮುಂದಾಗಿದ್ದೇ ಬೇರೆ

Advertisement

Udayavani is now on Telegram. Click here to join our channel and stay updated with the latest news.

Next