Advertisement
ಜನವರಿ ಜನನದ ದಿನ, ಹಳೆವರ್ಷದ ವಿದಾಯದ ಗಲಾಟೆಯೋ ಹೊಸ ವರ್ಷದ ಶುಭಾಶಯದ ಕರೆಯೋ ಎಂಬ ಗೊಂದಲದಲ್ಲೇ ಬೆಳಗ್ಗಿನ ನಾಲ್ಕು ಗಂಟೆಯ ಚರವಾಣಿ ಕರೆ ಸ್ವೀಕರಿಸಿದೆ. ಮೈಸೂರಿನ ತಮ್ಮ ಚುಟುಕಿನಲ್ಲಿ ಹೇಳಿದ “ಅಮ್ಮ ಹೋದಳು’!. ಆಕೆ, ಸುಮಾರು ಹತ್ತು ವರ್ಷಗಳ ಹಿಂದೆ ಗತಿಸಿದ ನಮ್ಮ ತಂದೆಯಷ್ಟೇ ನಿಷ್ಠೆಯಿಂದ, ತನ್ನ ದೇಹದಾನವನ್ನು ಬರೆದುಕೊಟ್ಟಿದ್ದಳು, ನಾವು – ಮಕ್ಕಳು, ಅಮ್ಮನ ಇಚ್ಛೆಯನ್ನು ನಡೆಸಿಕೊಟ್ಟೆವು.
Related Articles
Advertisement
ತಾಯಿ ಕೇವಲ ಆತ್ಮ ಸಂತೋಷಕ್ಕಾಗಿ ತಮ್ಮದೇ ಪೂಜೆ, ಪಾರಾಯಣಗಳನ್ನು ಉಳಿಸಿಕೊಂಡಿದ್ದರು. ಅವಕ್ಕೆ ಶುಭಾಶುಭಗಳ, ಶಾಸ್ತ್ರಾಶಾಸ್ತ್ರಗಳ ಬಾಧೆಯಾಗಲೀ ಮಧ್ಯವರ್ತಿಯನ್ನು (ಪುರೋಹಿತರು) ಬಯಸುವ ಔಪಚಾರಿಕತೆಗಳಾಗಲೀ ಇರಲಿಲ್ಲ. ತಂದೆ ಈಕೆಯ ಭಾವನೆಯನ್ನು ಗೌರವಿಸಿದಷ್ಟೇ ಆಕೆ ತಂದೆಗೆ ಅನುಕೂಲೆಯೂ ಆಗಿದ್ದರು. ಸಹಜವಾಗಿ ಇಬ್ಬರೂ ದೇಹದಾನದ ನಿರ್ಧಾರ ಮಾಡಿದ್ದರು, ಜಗದ್ಗುರು ಶ್ರೀಶಿವರಾತ್ರೀಶ್ವರ (ಜೆ.ಎಸ್.ಎಸ್) ವೈದ್ಯಕೀಯ ಕಾಲೇಜಿನವರ ವ್ಯವಸ್ಥೆಗೆ (ನಿಶುÏಲ್ಕ) ಒಪ್ಪಿಸಿಕೊಂಡರು.
ಹಿರಿಯರ ವಿಯೋಗದೊಡನೆ ಇತರರು ಯಾವುದೇ ನಿತ್ಯ ಚಹರೆಗಳನ್ನು ಬದಲಿಸುವುದಾಗಲೀ (ಮುಂಡನ, ಕರಿಮಣಿ, ಕುಂಕುಮಾದಿ ವರ್ಜನ) ಮತೀಯ ನಂಬಿಕೆಗಳ ಉತ್ತರಕ್ರಿಯಾದಿಗಳನ್ನು ನಡೆಸುವುದನ್ನಾಗಲೀ ತಂದೆ ಸ್ಪಷ್ಟವಾಗಿ ನಿರಾಕರಿಸಿದ್ದರು. ಇದನ್ನು ತಂದೆ ಹೋದ ಕಾಲಕ್ಕೂ (ತಾಯಿಯೂ ಸೇರಿದಂತೆ) ಈಚೆಗೂ ಮಕ್ಕಳು ಮೂವರೂ ಒಪ್ಪಿ ನಡೆಸಿದೆವು. ನಿಜದಲ್ಲಿ ಉತ್ತರಕ್ರಿಯಾದಿಗಳ ಮೂಲ ಆಶಯವಾದರೂ ಪಂಚಭೂತಾತ್ಮಕವಾದ ಶರೀರವನ್ನು ಮತ್ತೆ ಅವುಗಳÇÉೇ ಲೀನಗೊಳಿಸುವ ಕ್ರಿಯೆ. ಆಕಸ್ಮಿಕಗಳಲ್ಲಿ (ಪ್ರವಾಹ, ಅಗ್ನಿಕಾಂಡ ಇತ್ಯಾದಿ) ಪೂರ್ಣ ಮರೆಯಾದ ದೇಹಗಳಿಗೆ ಈ “ಮರಳಿ ಸೇರಿಸುವಿಕೆಯ ಕ್ರಿಯೆಗಳು ಅಪ್ರಸ್ತುತವೇ ಆಗುತ್ತವೆ. ದಾನಗಳಲ್ಲಿ ಶ್ರೇಷ್ಟವಾದ ದೇಹ-ದಾನವನ್ನೇ ಮಾಡಿದ ಮೇಲೆ ಇನ್ನೇನು ಮಾಡಿದರೂ ಅಪರಿಪೂರ್ಣವೇ ಆಗುತ್ತದೆ ಎನ್ನುವುದು ನಮ್ಮ ಮನಸ್ಸಮಾಧಾನಕ್ಕೆ ಆಧಾರ.
ಜೆ.ಎಸ್.ಎಸ್. ಕಾಲೇಜಿನ ವಿಸ್ತಾರ ಪ್ರದರ್ಶನಾಲಯದೊಳಗೆ, ಉಳಿದಂತೆ ಚಿತ್ರ, ಅನ್ಯ ಮಾಧ್ಯಮಗಳ ಮಾದರಿಗಳು, ಗಾಜಿನ ಭರಣಿಗಳೊಳಗೆ ರಾಸಾಯನಿಕ ದ್ರಾವಣಗಳಲ್ಲಿ ಮುಳುಗಿಸಿಟ್ಟ ಮನುಷ್ಯ ದೇಹದ ಹಲವು ಬಿಡಿಭಾಗಗಳನ್ನೂ ಕಾಣಬಹುದು. ಅÇÉೆಲ್ಲ ಜತೆಗೇ ಸಾಮಾನ್ಯರಿಗೆ ಅರ್ಥವಾಗುವ ಭಾಷೆಯಲ್ಲಿ ಪ್ರಕರಣಗಳ ವಿವರಗಳನ್ನೂ ಕಾಣಿಸಿ¨ªಾರೆ.
ಸೀತೆ – ನನ್ನ ಓರ್ವ ಚಿಕ್ಕಮ್ಮ, ಮೊದಲು ಸ್ವಲ್ಪ ಮಾನಸಿಕ ತಡೆಯಲ್ಲಿ ಬರಲೊಪ್ಪದಿದ್ದರೂ ಮತ್ತೆ ನಮ್ಮ ಒತ್ತಾಯಕ್ಕೇ ಈ ಪ್ರದರ್ಶನ ನೋಡಲು ಬಂದಿದ್ದಳು. ಆಕೆ ಕೊನೆಯಲ್ಲಿ ಧನ್ಯತೆಯ ಉದ್ಗಾರ ತೆಗೆದಾಗ ನಮ್ಮೆಲ್ಲರ ಸಮಾಧಾನಕ್ಕೆ ಬಲ ಬಂತು. ಥಳುಕಿನ ಮಾಲ…, ಜಾತ್ರೆ, ಮೇಳಗಳ ಪ್ರಪಂಚದÇÉೇ ಕಳೆದು ಹೋಗುವ ಮಂದಿ ಈ ಪ್ರದರ್ಶನಗಳನ್ನು ನೋಡಬೇಕು ಎನ್ನುವುದು ಅವರ ಭಾವವಾಗಿತ್ತು!
– ಜಿ.ಎನ್.ಅಶೋಕವರ್ಧನ, ಮಂಗಳೂರು