Advertisement
ಮೇ 15ರ ಘಟನೆಮಿಸ್ಟರ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸುವ ಕನಸು ಕಂಡಿದ್ದ ತ್ರಾಸಿ ಕಂಚುಗೋಡಿನ ಸೋಮಶೇಖರ್ ಖಾರ್ವಿ ಅವರ ಪಾಲಿಗೆ ಮೇ 15 ದುರಂತದ ದಿನವಾಗಿತ್ತು. ಆ ದಿನ ಮೀನುಗಾರರ ಜತೆ ಕಂಚುಗೋಡಿನ ಸಮುದ್ರ ತಟದಲ್ಲಿ ರಕ್ಷಣೆಯ ಕಾರ್ಯದಲ್ಲಿದ್ದ ಸೋಮಶೇಖರ್ ಅಪರಾಹ್ನ ಊಟ ಮುಗಿಸಿ ಮತ್ತೆ ಹೊರಡುವಾಗ ಅಡುಗೆ ಮನೆಯಲ್ಲಿ ಎಣ್ಣೆ ಬಾಣಲೆಯಲ್ಲಿ ಬೆಂಕಿ ಇರುವುದನ್ನು ಕಂಡರು. ತತ್‌ಕ್ಷಣ ಎಣ್ಣೆ ಪಾತ್ರೆಯನ್ನು ಎತ್ತಿಕೊಂಡು ಹೊರಗಡೆ ಹೋಗುವ ವೇಳೆ ಜಾರಿ ಬಿಸಿ ಎಣ್ಣೆ ಮೈ ಕೈ ಮುಖದ ಮೇಲೆ ಬಿದ್ದು ಗಾಯಗಳಾದವು. ಒದ್ದೆ ಬಟ್ಟೆ ತೊಟ್ಟಿದ್ದರಿಂದ ಗಂಭೀರ ಅಪಾಯದಿಂದ ಅವರು ಪಾರಾದರು.
ಕಳೆದ 12 ವರ್ಷಗಳಿಂದ ಹಲವು ದೇಹದಾಡ್ಯì ಸ್ಪರ್ಧೆಗಳಲ್ಲಿ ಭಾಗವಹಿಸಿರುವ ಅವರು 70ರಷ್ಟು ಪ್ರಶಸ್ತಿಗಳನ್ನು ಗಳಿಸಿದ್ದಾರೆ. ಸತತ ಮೂರು ವರ್ಷ ಮಿ| ಕರ್ನಾಟಕ ಆಗಿ ಹೊರಹೊಮ್ಮಿರುವ ಅವರು 2019ರಲ್ಲಿ ದಸರಾ ಸಿಎಂ ಕಪ್ ಪಡೆದಿದ್ದಾರೆ. ಸತತ 8 ಬಾರಿ ಮಿ| ಇಂಡಿಯಾ ಸ್ಪರ್ಧೆಗೆ ಆಯ್ಕೆಯಾಗಿದ್ದರೂ ಬಡತನದಿಂದಾಗಿ ಭಾಗವಹಿಸಲು ಅಸಾಧ್ಯವಾಗಿದೆ.
Related Articles
ಮಿ| ಇಂಡಿಯಾ ಸ್ಪರ್ಧೆಗೆ ಹೋಗಲು ಸಿದ್ಧನಾಗುತ್ತಿದ್ದೆ. ಹಣಕಾಸಿನ ಅಡಚಣೆ ಇದ್ದರೂ ದೇಹದಂಡನೆ ಮನೆಯಲ್ಲೇ ಮಾಡುತ್ತಿದ್ದೆ. ಈಗ ಅದೇ ದೇಹದ ಮೇಲೆ ಇನ್ನೊಂದು ಆಘಾತ ಎದುರಾಗಿದೆ. ಮೀನುಗಾರಿಕೆ ಆದಾಯವೂ ಇಲ್ಲವಾಗಿದೆ.
-ಸೋಮಶೇಖರ ಖಾರ್ವಿ, ತ್ರಾಸಿ
Advertisement
– ಲಕ್ಷ್ಮೀ ಮಚ್ಚಿನ