Advertisement
ಭಟ್ಕಳದ ಟ್ರಾಲ್‌ಬೋಟ್ ಚಾಲಕರ ಸಂಘ ಮಂಗಳವಾರ ಅಲ್ಲಿ ಸಭೆ ನಡೆಸಿ ಜ. 11ರಿಂದ ಮೀನುಗಾರಿಕೆ ತೆರಳುವು ದೆಂದು ತೀರ್ಮಾನಿಸಿದೆ. ಆದರೆ ಕಲಸಿಗಳು ಈ ಬಗ್ಗೆ ಬುಧವಾರ ಬೋಟ್ ಚಾಲಕರ ಸಂಘದ ಜತೆ ಸಭೆ ನಡೆಸಿ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.
ಉಡುಪಿ: ಮೀನುಗಾರರು ಕಣ್ಮರೆಯಾಗಿರುವ ದುಃಖದ ಸಂದರ್ಭ ಅಸಂಬದ್ಧ ಹೇಳಿಕೆ ನೀಡಿರುವ ಮೀನುಗಾರಿಕೆ ಸಚಿವ ವೆಂಕಟರಾವ್ ನಾಡಗೌಡರು ಕೂಡಲೇ ರಾಜೀನಾಮೆ ನೀಡಬೇಕು ಎಂದು ಮೀನುಗಾರರ ಮುಖಂಡ, ತಾ.ಪಂ. ಸದಸ್ಯ ಶರತ್ ಕುಮಾರ್ ಬೈಲಕೆರೆ ಮತ್ತು ಗ್ರಾ.ಪಂ. ಅಧ್ಯಕ್ಷ ಉಮೇಶ್ ಪೂಜಾರಿ ಬಡಾನಿಡಿಯೂರು ಆಗ್ರಹಿಸಿದ್ದಾರೆ. “ಮೀನುಗಾರರು ನಾಪತ್ತೆಯಾಗಿದ್ದಾರೆಂದು ತಿಳಿದ ಕೂಡಲೇ ಹುಡುಕುವ ಕೆಲಸ ಸರಕಾರ ಆರಂಭಿಸಿದೆ. ಆದರೆ ನಾಪತ್ತೆಯಾದವರನ್ನು ನಾವೇ ಸಮುದ್ರಕ್ಕಿಳಿದು ಹುಡುಕು ವುದಕ್ಕೆ ಆಗುತ್ತಾ?’ ಎಂದು ಸಿಂಧನೂರಿನಲ್ಲಿ ಸಚಿವರು ಹೇಳಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಬರುತ್ತಿದೆ. ಮೀನುಗಾರರ ಬಗ್ಗೆ ಕಾಳಜಿ, ಸಹಾನುಭೂತಿ ಮತ್ತು ಗೌರವ ಇರದ ಸಚಿವರು ಹುದ್ದೆಯಲ್ಲಿ ಮುಂದುವರಿಯುವ ಅರ್ಹತೆ ಕಳೆದುಕೊಂಡಿದ್ದಾರೆ, ಇಂತಹ ಸಚಿವರಿಂದ ಯಾವ ನಿರೀಕ್ಷೆಯನ್ನೂ ಇರಿಸಿಕೊಳ್ಳುವ ಹಾಗಿಲ್ಲ, ಅವರು ಹೇಳಿಕೆಗೆ ಕ್ಷಮೆ ಯಾಚಿಸಬೇಕು ಎಂದು ತಿಳಿಸಿದ್ದಾರೆ. ನಾಪತ್ತೆಯಾದ ಇಬ್ಬರು ಬಡಾನಿಡಿಯೂರು ಗ್ರಾ. ಪಂ. ವ್ಯಾಪ್ತಿಯವರು.
Related Articles
ಶೋಧ ಕಾರ್ಯಾಚರಣೆಯನ್ನು ಕೋಸ್ಟ್ ಗಾರ್ಡ್ ಮತ್ತು ನೌಕಾಪಡೆ ಮುಂದುವರಿಸಿವೆ. ಉಪಗ್ರಹ ಆದಾರಿತ ಶೋಧಕ್ಕಾಗಿ ಬೆಂಗಳೂರಿನ ಇಸ್ರೋ, ಕೆಎಸ್‌ಆಎಸ್‌ಎಸಿ; ಹೈದರಾಬಾದ್‌ನ ಐಎನ್‌ಸಿಒಐಎಸ್ ಜತೆಗೆ ಮಾಹಿತಿ ವಿನಿಮಯ ಮಾಡಿಕೊಳ್ಳಲಾಗಿದೆ ಎಂದು ಉಡುಪಿ ಎಸ್‌ಪಿ ಮಾಹಿತಿ ನೀಡಿದ್ದಾರೆ.
Advertisement
ಸಚಿವರ ಭೇಟಿಮೀನುಗಾರಿಕೆ ಸಚಿವ ವೆಂಕಟರಾವ್ ನಾಡಗೌಡ ಅವರು ಜ.9ರಂದು ಸಂಜೆ 4ಕ್ಕೆ ಉಡುಪಿಗೆ ಆಗಮಿಸಿ ನಾಪತ್ತೆಯಾದ ಮೀನುಗಾರರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಲಿದ್ದಾರೆ. ಬಳಿಕ ಇಲಾಖಾಧಿಕಾರಿಗಳ ಸಭೆ ನಡೆಸಲಿದ್ದಾರೆ.