Advertisement

ಕೇರಳದಲ್ಲಿ ಸಿಲುಕಿಕೊಂಡ ಬೋಟ್‌ಗಳು ವಾಪಸ್‌ ಊರಿಗೆ

10:39 PM May 17, 2020 | Sriram |

ಕೋಟ/ಗಂಗೊಳ್ಳಿ: ಕೋವಿಡ್-19 ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಕೇರಳ ರಾಜ್ಯದ ಚರವತ್ತೂರು ಚೊಂಬಲ್‌ ಮತ್ತು ಕಣ್ಣೂರುನಲ್ಲಿ ಸಿಲುಕಿಕೊಂಡ ಹಂಗಾರಕಟ್ಟೆ ಹಾಗೂ ಗಂಗೊಳ್ಳಿ ಮೂಲದ ಮೀನುಗಾರಿಕೆ ಬೋಟ್‌ಗಳು ಮರಳಿ ವಾಪಸು ಸೇರುವಲ್ಲಿ ಯಶಸ್ವಿಯಾಗಿದ್ದು ಶನಿವಾರ ದಕ್ಕೆ ಸೇರಿದವು.

Advertisement

ಮೀನುಗಾರರ ಮನವಿಗೆ ಮೇರೆಗೆ ಮೀನುಗಾರಿಕೆ ಬಂದರೂ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಜನಪ್ರತಿನಿಧಿಗಳು, ಅಧಿಕಾರಿಗಳು, ಮೀನುಗಾರಿಕ ಮುಖಂಡರ ಪ್ರಯತ್ನದ ಫಲವಾಗಿ ಕೇರಳ ಸರಕಾರದ ಜತೆ ಮಾತುಕತೆ ನಡೆಸಿ 37 ಬೋಟ್‌ ಗಳನ್ನು ಕರೆತರಲು ಗುರುವಾರ ಹಂಗಾರಕಟ್ಟೆ ತೆರಳಿದರು. ಅದರಂತೆ ಶನಿವಾರ ಕೇರಳದಿಂದ ಹಿಂದಿರುಗಿ ಹಂಗಾರಕಟ್ಟೆ ಹಾಗೂ ಗಂಗೊಳ್ಳಿಗೆ ತಲುಪಲಾಯಿತು.

ಮೀನುಗಾರರ ಹರ್ಷ
48 ದಿನಗಳ ಅನಂತರ ಮೀನುಗಾರಿಕಾ ಬೋಟ್‌ ಯಶಸ್ವಿಯಾಗಿ ಹಿಂತಿರುಗಿ ತಮ್ಮ ಊರುಗಳಿಗೆ ಮರಳುವಲ್ಲಿ ಸಹಕಾರ ನೀಡಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಮಾಜಿ ಸಚಿವ ಜಯಪ್ರಕಾಶ್‌ ಹೆಗ್ಡೆ, ಮೀನುಗಾರ ಮುಖಂಡರಾದ ಯಶ್‌ಪಾಲ್‌ ಸುವರ್ಣ ಹಾಗೂ ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಸಂಸದರು, ಜಿಲ್ಲೆಯ ಎಲ್ಲಾ ಶಾಸಕರು, ಇಲಾಖೆಯ ಅಧಿಕಾರಿಗಳು, ಮೀನುಗಾರ ಮುಖಂಡರಿಗೆ ಬೋಟ್‌ಗಳ ಮಾಲಕರು ಧನ್ಯವಾದ ಸಲ್ಲಿಸಿದ್ದಾರೆ.

ಕರಾವಳಿ ಕಾವಲು ಪಡೆಯ ಎಸ್‌.ಐ ವಾಸಪ್ಪ ನಾಯ್ಕ,ಕೆ.ಎನ್‌.ಡಿ. ಸಿಬಂದಿ ಗಂಗಾಧರ್‌ , ಮೀನುಗಾರ ಪ್ರಮುಖರಾದ ಸಂದೀಪ್‌ ಕುಂದರ್‌ ಕೋಡಿ, ಶೇಖರ ಮೆಂಡನ್‌, ಗಣೇಶ್‌ ಬಂಗೇರ, ಶಂಕರ ಮರಕಾಲ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next